ಉತ್ತರಾಖಂಡದಲ್ಲಿ ‘ಲವ್ ಜಿಹಾದ್’ ಮತ್ತು ‘ಲ್ಯಾಂಡ್ ಜಿಹಾದ್’ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿ ! – ಮುಖ್ಯಮಂತ್ರಿ ಆದೇಶ

ಮುಖ್ಯಮಂತ್ರಿ ಪುಷ್ಕರ್ ಸಿಂಹ ಧಾಮಿ

ಡೆಹ್ರಾಡೂನ್ (ಉತ್ತರಾಖಂಡ) – ‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’, ಧಾರ್ಮಿಕ ಮತಾಂತರದಂತಹ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಉತ್ತರಾಖಂಡ ಭಾಜಪದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಇವರು ಪೊಲೀಸರು ಮತ್ತು ಆಡಳಿತಕ್ಕೆ ಆದೇಶ ನೀಡಿದ್ದಾರೆ. ಇತ್ತೀಚೆಗೆ ಉತ್ತರಕಾಶಿಯ ಪುರುಲಾ ಪಟ್ಟಣ, ಧಾರ್ಚುಲಾ, ಚಮೋಲಿಯ ನಂದನಗರ ಸೇರಿದಂತೆ ಹಲವಾರು ಗುಡ್ಡಗಾಡು ಪ್ರದೇಶಗಳಲ್ಲಿ ಕೋಮು ಉದ್ವಿಗ್ನತೆ ಉಂಟಾಗಿತ್ತು. ಉತ್ತರಾಖಂಡದ ವಿವಿಧ ಭಾಗಗಳಲ್ಲಿ ಜನಸಂಖ್ಯಾ ಬದಲಾವಣೆಗಳ ದೂರುಗಳನ್ನು ಸ್ವೀಕರಿಸಿದ ನಂತರ, ಧಾಮಿ ಸರಕಾರವು ಕ್ರಮವನ್ನು ಪ್ರಾರಂಭಿಸಿದೆ. ಈ ಅಕ್ರಮ ಚಟುವಟಿಕೆಗಳ ವಿರುದ್ಧ ಉತ್ತರಾಖಂಡ ಪೊಲೀಸರು ರಾಜ್ಯಾದ್ಯಂತ ‘ಪರಿಶೀಲನಾ ಅಭಿಯಾನ’ ಕೈಗೊಂಡಿದ್ದಾರೆ. ಈ ಪರಿಶೀಲನಾ ಪ್ರಾಧಿಕಾರದ ಅಡಿಯಲ್ಲಿ, ಕಟ್ಟರವಾದಿ ಇಸ್ಲಾಮಿಗಳನ್ನು ಆಶ್ರಯ ನೀಡಿದ ಶಂಕಿತ ಪ್ರದೇಶಗಳ ಮೇಲೆ ನಿಗಾವಹಿಸಲಾಗಿದೆ. ಈ ಅಭಿಯಾನ ಮುಗಿದ ನಂತರ ಜನಸಂಖ್ಯಾ ಬದಲಾವಣೆಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಭಿನವ್ ಕುಮಾರ್ ತಿಳಿಸಿದ್ದಾರೆ. ರಾಜ್ಯದಲ್ಲಿನ ಜನಸಂಖ್ಯಾ ಬದಲಾವಣೆ ಹಾಗೂ ಲವ್ ಜಿಹಾದ್ ಎರಡನ್ನೂ ಪೊಲೀಸರು ಆದ್ಯತೆ ಮೇರೆಗೆ ನಿಭಾಯಿಸುತ್ತಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಧಾಮಿ ಮಾತನಾಡಿ, “ದೇವಭೂಮಿಯ ಮೂಲ ಸ್ವರೂಪವನ್ನು ಯಾವುದೇ ಪರಿಸ್ಥಿತಿಯಲ್ಲಿ ಸಂರಕ್ಷಿಸಬೇಕು. ಇದಕ್ಕೆ ನಾವು ಬದ್ಧರಾಗಿದ್ದೇವೆ. ಈ ಉಪಕ್ರಮದಲ್ಲಿ ಪೊಲೀಸ್ ಮತ್ತು ಗೃಹ ಸಚಿವಾಲಯವು ಒಟ್ಟಾಗಿ ಕೆಲಸ ಮಾಡಲಿದ್ದು, ರಾಜ್ಯದ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಮತ್ತು ಯಾವುದೇ ಸಮಸ್ಯೆಯನ್ನು ಪರಿಹರಿಸಲು ಸರಕಾರವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.” ಎಂದು ಹೇಳಿದರು.

ಸಂಪಾದಕೀಯ ನಿಲುವು

ಪೊಲೀಸರು ಮತ್ತು ಆಡಳಿತಕ್ಕೆ ಏಕೆ ಇಂತಹ ಆದೇಶವನ್ನು ನೀಡಬೇಕು ? ತಾವಾಗಿ ಏಕೆ ಕ್ರಮ ಕೈಗೊಳ್ಳುವುದಿಲ್ಲ ? ಅಂತಹ ಆದೇಶವನ್ನು ನೀಡದಿದ್ದರೆ, ಪೊಲೀಸರು ಮತ್ತು ಆಡಳಿತವು ತಪ್ಪು ವಿಷಯಗಳ ಮೇಲೆ ಕ್ರಮ ತೆಗೆದುಕೊಳ್ಳುವುದಿಲ್ಲವೇ ?