ಬೋಳಂತೂರಿನ ಶ್ರೀಸಿದ್ಧಿವಿನಾಯಕ ಟ್ರಸ್ಟಿಗಳಿಂದ ಮಸೀದಿಗೆ ಪತ್ರ
ಬಂಟ್ವಾಳ – ಸಧ್ಯ ನಡೆಯುತ್ತಿರುವ ಗಣೇಶೋತ್ಸವದ ದೃಷ್ಟಿಯಿಂದ ದಕ್ಷಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಚರ್ಚೆಗೆ ಬಂದಿದೆ. ಇಲ್ಲಿಯ ಬೋಳಂತೂರು ಗ್ರಾಮದಲ್ಲಿನ ಶ್ರೀ ಸಿದ್ಧಿ ವಿನಾಯಕ ಟ್ರಸ್ಟಿಗಳಿಂದ ಸ್ಥಳೀಯ ಮಸೀದಿಗೆ ಪತ್ರ ಬರೆದು ‘ಮಸೀದಿ ಆಡಳಿತದಿಂದ ಮೆರವಣಿಗೆಯ ಸಮಯದಲ್ಲಿ ಪಾನಿಯ ಮತ್ತು ಸಿಹಿಯನ್ನು ಹಂಚಬಾರದೆಂದು’, ವಿನಂತಿಸಲಾಗಿದೆ.
ಈ ವಿನಂತಿ ಪತ್ರದಲ್ಲಿ, ಕಳೆದ ವರ್ಷ ಈ ರೀತಿಯ ಪಾನಿಯ ಮತ್ತು ಸಿಹಿ ಪದಾರ್ಥ ವಿತರಿಸಿದ್ದರಿಂದ ಅನೇಕ ಹುಡುಗರಿಗೆ ಫುಡ್ ಪಾಯಿಜನ್ ಆಗಿತ್ತು. ಜಾಗರೂಕತೆಯ ದೃಷ್ಟಿಯಿಂದ, ಇನ್ನು ಮುಂದೆ ಯಾವುದೇ ಮೆರವಣಿಗೆಯಲ್ಲಿ ನೀವು ಪಾನಿಯ ಮತ್ತು ಸಿಹಿ ತಿಂಡಿಗಳನ್ನು ಹಂಚಬಾರದು ಮತ್ತು ಸಹಕಾರ ನೀಡಬೇಕು ಎಂದು ನಾವು ನಿಮ್ಮಲ್ಲಿ ವಿನಂತಿಸುತ್ತಿದ್ದೇವೆ. ಹಿಂದೂ ಮುಸಲ್ಮಾನರಲ್ಲಿನ ಸೌಹಾರ್ದತೆ ಶಾಶ್ವತ ಉಳಿಯಬೇಕು, ಈ ದೃಷ್ಟಿಯಿಂದ ಇವುಗಳನ್ನು ಮಸೀದಿ ಆಡಳಿತದಿಂದ ಹಂಚಬಾರದೆಂದು ದೇವಸ್ಥಾನದ ಟ್ರಸ್ಟಿಗಳಿಂದ ಹೇಳಲಾಗಿದೆ. ಇದರಿಂದ ಕೆಲವು ಜನರಿಂದ ಇದಕ್ಕೆ ವಿರೋಧಿಸುತ್ತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಪಾದಕೀಯ ನಿಲುವು
|