ಸಂಭಾಜಿ ಬ್ರಿಗೇಡ್ ಅಧಿವೇಶನದಲ್ಲಿ ವಾರಪತ್ರಿಕೆ ಚಿತ್ರಲೇಖಾದ ಮಾಜಿ ಸಂಪಾದಕ ಜ್ಞಾನೇಶ ಮಹಾರಾವ ಅವರಿಂದ ಪ್ರಭು ಶ್ರೀರಾಮನ ಅವಹೇಳನೆ
ಮುಂಬಯಿ – ಓರ್ವ ವ್ಯಕ್ತಿ ಅಗಸನ ಮಾತನ್ನು ಕೇಳಿ ತನ್ನ ಗರ್ಭಿಣಿ ಹೆಂಡತಿಯನ್ನು ಮನೆಯಿಂದ ಹೊರಗೆ ಹಾಕುತ್ತಾನೆಯೋ, ಅಂತಹ ವ್ಯಕ್ತಿ ಹೇಗೆ ದೇವರಾಗುತ್ತಾನೆ ? ಮತ್ತು ನಾವು ದೇಶದಲ್ಲಿ ಇಂತಹ ವ್ಯಕ್ತಿಯ ಮಂದಿರವನ್ನು ನಿರ್ಮಿಸುತ್ತೇವೆ. ಇದರ ಬಗ್ಗೆ ನಮಗೆ ನಾಚಿಕೆಯಾಗಬೇಕು ಎಂದು ಅಂದಿನ ಸಾಪ್ತಾಹಿಕ ಚಿತ್ರಲೇಖಾ ಮಾಜಿ ಸಂಪಾದಕ ಜ್ಞಾನೇಶ ಮಹಾರಾವ ಇವರು ಕೀಳುಮಟ್ಟದ ಟೀಕೆಯನ್ನು ಮಾಡಿದ್ದಾರೆ. ಅವರು ಮುಂಬಯಿಯಲ್ಲಿನ ಸಂಭಾಜಿ ಬ್ರಿಗೆಡ್ ನ ಅಧಿವೇಶನದಲ್ಲಿ ಮಾತನಾಡುತ್ತಿದ್ದರು. ಇದರಲ್ಲಿ ಆಘಾತಕಾರಿ ಪ್ರಕಾರವೆಂದರೆ ಈ ಹೇಳಿಕೆ ಮಹಾರಾವ ಇವರು ರಾಷ್ಟ್ರವಾದಿ ಕಾಂಗ್ರೆಸ ಶರದಚಂದ್ರ ಪವಾರ ಪಕ್ಷದ ಮುಖಂಡ ಸಂಸದ ಶರದ ಪವಾರ ಮತ್ತು ಕಾಂಗ್ರೆಸ ಕೋಲ್ಹಾಪುರ ಸಂಸದ ಶ್ರೀಮಂತ ಛತ್ರಪತಿ ಶಾಹೂ ಮಹಾರಾಜರ ಉಪಸ್ಥಿತಿಯಲ್ಲಿ ಹೇಳಿದರು. (ಹಿಂದೂಗಳೇ, ಪ್ರಗತಿಪರರ ಹೆಸರಿನಡಿಯಲ್ಲಿ ಹಿಂದೂಗಳ ದೇವರನ್ನು ಅವಮಾನಿಸಲು ಅನುವು ಮಾಡಿಕೊಡುವ ಇಂತಹ ರಾಜಕಾರಣಿಗಳನ್ನು ಚುನಾವಣೆಯಲ್ಲಿ ನೆನಪಿನಲ್ಲಿಡಿರಿ! – ಸಂಪಾದಕರು)
ಸಂಪಾದಕೀಯ ನಿಲುವು
|