ಯುದ್ಧದ ೨೫ ವರ್ಷಗಳ ನಂತರ ಕಾರ್ಗಿಲ್ ಯುದ್ಧದ ವಾಸ್ತವನ್ನು ಬಾಯಿಬಿಟ್ಟ ಪಾಕಿಸ್ತಾನದ ಸೈನ್ಯದಳ ಪ್ರಮುಖ ಅಸೀಮ ಮುನಿರ್
ಇಸ್ಲಾಮಾಬಾದ್ (ಪಾಕಿಸ್ತಾನ) – ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನಿ ಸೈನ್ಯದ ಸಹಭಾಗ ಇತ್ತು, ಎಂದು ಪಾಕಿಸ್ತಾನದ ಸೈನ್ಯ ಪ್ರಮುಖ ಆಸೀಮ ೨೫ ವರ್ಷದ ನಂತರ ಮೊದಲ ಬಾರಿ ಒಪ್ಪಿಕೊಂಡರು. ಈ ಹಿಂದೆ ಈ ಯುದ್ಧ ಪಾಕಿಸ್ತಾನ ಸೈನ್ಯ ಮಾಡಿಲ್ಲ, ಅದು ಜಿಹಾದಿ ಭಯೋತ್ಪಾದಕರು ಮಾಡಿದ್ದು ಎಂದು ಪಾಕಿಸ್ತಾನ ದಾವೆ ಮಾಡಿತ್ತು. ಯುದ್ಧದಲ್ಲಿ ೫೨೭ ಭಾರತೀಯ ಸೈನಿಕರು ವೀರ ಮರಣ ಹೊಂದಿದರು ಹಾಗೂ ಪಾಕಿಸ್ತಾನದ ೪೫೦ ಸೈನಿಕರನ್ನು ಕೊಲ್ಲಲಾಗಿತ್ತು.
ಮುನೀರ್ ಇವರು, ಪಾಕಿಸ್ತಾನದಲ್ಲಿ ದೇಶಕ್ಕಾಗಿ ಏನು ಬೇಕಿದ್ದರೂ ಮಾಡಲು ಸಿದ್ಧರಿರುವ ವೀರ ಸೈನಿಕರ ಒಂದು ಸಮೂಹ ಇದೆ, ೧೯೪೮, ೧೯೬೫, ೧೯೭೧ ಯುದ್ಧ ಆಗಿರಲಿ ಅಥವಾ ೧೯೯೯ ರ ಕಾರ್ಗಿಲ ಯುದ್ಧವಾಗಿರಲಿ, ದೇಶದಲ್ಲಿನ ಸಾವಿರಾರು ಸೈನಿಕರು ದೇಶ ಮತ್ತು ಇಸ್ಲಾಂಗಾಗಿ ಬಲಿದಾನ ನೀಡಿದ್ದಾರೆ ಎಂದು ಹೇಳಿದರು.
ಸಂಪಾದಕೀಯ ನಿಲುವುಪಾಕಿಸ್ತಾನವು ಒಪ್ಪಿಕೊಂಡ ನಂತರ ಕೂಡ ಭಾರತ ಪಾಕಿಸ್ತಾನದ ವಿರುದ್ಧ ಯಾವುದಾದರೂ ಕ್ರಮ ಕೈಗೊಳ್ಳುವುದೇ ? ಕಾರಣ ಈ ವಿಷಯ ಭಾರತದ ದೃಷ್ಟಿಯಿಂದ ಜಾಹಿರವಾಗಿಯೇ ಇತ್ತು ! ಭಾರತ ಅದರ ಸೇಡು ಎಂದು ತೀರಿಸಿಕೊಳ್ಳುವುದೇ ? ಪಾಕಿಸ್ತಾನಕ್ಕೆ ನುಗ್ಗಿ ಪಾಕಿಸ್ತಾನವನ್ನು ನಾಶ ಮಾಡುವುದೇ ? |