ಅಮೃತಾನಂದಮಯಿ ಆಸ್ಪತ್ರೆಯ ವತಿಯಿಂದ ಮಹಾಕುಂಭ ಮೇಳದಲ್ಲಿ 2 ಅತ್ಯಾಧುನಿಕ ಮೊಬೈಲ್ ಆಸ್ಪತ್ರೆಗಳು ಕಾರ್ಯನಿರ್ವಹಿಸಲಿದೆ !
ಪ್ರಯಾಗರಾಜ, ಜನವರಿ 18 (ಸುದ್ದಿ.) – ಮಹಾಕುಂಭಮೇಳಕ್ಕಾಗಿ ಮಾತಾ ಅಮೃತಾನಂದಮಯಿ ಅವರ ‘ಅಮೃತಾ ಹಾಸ್ಪಿಟಲ್’ ವತಿಯಿಂದ 2 ದೊಡ್ಡ ಅತ್ಯಾಧುನಿಕ ಮೊಬೈಲ್ ಆಸ್ಪತ್ರೆಗಳು (ಮೊಬೈಲ್ ಮೆಡಿಸಿನ್ ಯುನಿಟ) ಹೊಂದಿರುವ ದೊಡ್ಡ ಬಸ್‌ಗಳ ವ್ಯವಸ್ಥೆ ಮಾಡಿದೆ. ಈ ಸೌಲಭ್ಯವನ್ನು ‘ಅಮೃತ ಆಸ್ಪತ್ರೆ’ ಕೊಚ್ಚಿ (ಕೇರಳ) ಮತ್ತು ಫರಿದಾಬಾದ್‌ನಲ್ಲಿರುವ ಆಸ್ಪತ್ರೆಗಳು ಒದಗಿಸಿವೆ.
ಈ ಸಂಚಾರಿ ಆಸ್ಪತ್ರೆಗಳು ಒಟ್ಟು 13 ವೈದ್ಯರು ಮತ್ತು 60 ಸಿಬ್ಬಂದಿಯ ತಂಡವನ್ನು ಹೊಂದಿವೆ. ಕುಂಭ ಕ್ಷೇತ್ರ ಸೆಕ್ಟರ್ ಸಂಖ್ಯೆ 7 ರಲ್ಲಿರುವ ಅಮೃತಾನಂದಮಯಿ ಅವರ ಡೇರೆಯಲ್ಲಿ ಜನವರಿ 17 ರಂದು ವೈದ್ಯರು ಅದೇ ಆಸ್ಪತ್ರೆಯಲ್ಲಿ ರೋಗಿಗೆ ಸಣ್ಣ ಶಸ್ತ್ರಚಿಕಿತ್ಸೆಯನ್ನು ಸಹ ಮಾಡಿದರು. ಈ ತಂಡದ ವೈದ್ಯರು ಮಹಾಕುಂಭಮೇಳದಲ್ಲಿ ಸರಕಾರದ ಆಸ್ಪತ್ರೆಯಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಮೊಬೈಲ್ ಮೆಡಿಸಿನ್ ಯೂನಿಟ್ ಎಂದರೇನು ?

‘ಮೊಬೈಲ್ ಮೆಡಿಸಿನ್ ಯೂನಿಟ್’ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತಾ ಈ ಘಟಕದ ಸಂಯೋಜಕರಾದ ಶ್ರೀ. ಜಯನ ಇವರು, ಈ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಸಂಚಾರಿ ಆಸ್ಪತ್ರೆಯನ್ನು ನಾವು ಕಳೆದ 18 ವರ್ಷಗಳಿಗೂ ಹೆಚ್ಚಿನ ಸೇವಾ ಅನುಭವದ ಮೂಲಕ ಸಿದ್ಧಪಡಿಸಿದ್ದೇವೆ. ಇದು ಅತ್ಯಾಧುನಿಕ ಪ್ರಯೋಗಾಲಯ(ಲ್ಯಾಬೊರೇಟರಿ), ಇಸಿಜಿ ಯಂತ್ರ, ಇಕೋ ಸೌಲಭ್ಯ, ಅಲ್ಟ್ರಾಸೌಂಡ್ ಸೌಲಭ್ಯ, ಎಕ್ಸ್-ರೇ ಸೌಲಭ್ಯ, ನೆಬ್ಯುಲೈಜರ್, ಸಣ್ಣ ಶಸ್ತ್ರಚಿಕಿತ್ಸಾ ಕೊಠಡಿ, ತೀವ್ರ ನಿಗಾ ಘಟಕ, ಇತ್ಯಾದಿ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ. ತಲಾ 3 ಕೋಟಿ ರೂಪಾಯಿ ಮೌಲ್ಯದ ಒಂದು ಸಂಚಾರಿ ಆಸ್ಪತ್ರೆಯಾಗಿದ್ದು, ಇಂತಹ 2 ಆಸ್ಪತ್ರೆಗಳಿಗೆ ವ್ಯವಸ್ಥೆ ಮಾಡಲಾಗಿದೆ. ಈ ಬಸ್ ಸೌರಶಕ್ತಿ, ನೇರ ವಿದ್ಯುತ್ ಮತ್ತು ವಿದ್ಯುತ್ ಜನರೇಟರಗಳಂತಹ ವಿವಿಧ ಶಕ್ತಿ ಮೂಲಗಳಿಂದ ಚಲಿಸುತ್ತದೆ.