ದಿನಕ್ಕೆ 3 ಸಾವಿರ ಕನ್ನಡಕಗಳ ವಿತರಣೆ ! – ಸತ್ಯವಿಜಯ ಸಿಂಗ್, ನೇತ್ರಕುಂಭದ ಪ್ರಧಾನ ವ್ಯವಸ್ಥಾಪಕರು

ಪ್ರಯಾಗರಾಜ್, ಜನವರಿ 18 (ಸುದ್ದಿ.) – ಮಹಾಕುಂಭನಗರದ ಸೆಕ್ಟರ್ 6 ರಲ್ಲಿ ನಡೆಯುವ ನೇತ್ರ ಕುಂಭಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇಲ್ಲಿಯವರೆಗೆ, 19 ಸಾವಿರ ಜನರು ತಮ್ಮ ಕಣ್ಣುಗಳನ್ನು ಪರೀಕ್ಷಿಸಿಕೊಂಡಿದ್ದಾರೆ. ‘ಸನಾತನ ಪ್ರಭಾತ’ ಪ್ರತಿನಿಧಿಯೊಂದಿಗೆ ಮಾತನಾಡಿದ ನೇತ್ರಕುಂಭದ ಪ್ರಧಾನ ವ್ಯವಸ್ಥಾಪಕ ಸತ್ಯವಿಜಯ ಸಿಂಗ್ ಇವರು, ಪ್ರತಿದಿನ 4 ಸಾವಿರ ಜನರನ್ನು ಪರೀಕ್ಷಿಸಲಾಗುತ್ತದೆ ಮತ್ತು 3 ಸಾವಿರ ಕನ್ನಡಕಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ ಎಂದು ಹೇಳಿದರು.
ನೇತ್ರಕುಂಭ ಪ್ರದೇಶವು 10 ಎಕರೆಗಳಲ್ಲಿ ಹರಡಿದೆ. ಇದರಲ್ಲಿ ‘ಸಕ್ಷಮ್’ ಸಂಸ್ಥೆ, ಭೌರಾವ್ ಟ್ರಸ್ಟ್, ‘ರಜ್ಜು ಭಯ್ಯಾ ಸೇವಾ ಟ್ರಸ್ಟ್’, ‘ಹಂಸ ಫೌಂಡೇಶನ್’, ‘ENMO’, ವೈದ್ಯರ ದೊಡ್ಡ ಸಂಘಟನೆ ಇತ್ಯಾದಿಗಳ ಸಹಯೋಗದೊಂದಿಗೆ ಮಾಡಲಾಗುತ್ತಿದೆ. ಉತ್ತರ ಪ್ರದೇಶ ಸರಕಾರ ನಮಗೆ ವಸತಿ, ವಿದ್ಯುತ್ ಇತ್ಯಾದಿ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತಿದೆ. ನೇತ್ರಕುಂಭದ ಮುಖ್ಯ ಕಾರ್ಯವು 2019 ರ ಅರ್ಧ ಕುಂಭದಲ್ಲಿ ಪ್ರಾರಂಭವಾಯಿತು. ಆಗಲೂ ಅವರಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು. ಆ ಸಮಯದಲ್ಲಿ, 2 ಲಕ್ಷ 2 ಸಾವಿರ ಜನರ ತಪಾಸಣೆ ಮಾಡಲಾಗಿತ್ತು. ಅದೇ ರೀತಿ, 1 ಲಕ್ಷ 55 ಸಾವಿರ ಕನ್ನಡಕಗಳನ್ನು ವಿತರಿಸಲಾಯಿತು. ಆಗ ದೇಶದಲ್ಲಿ ಕಣ್ಣಿನ ಕಾಯಿಲೆಗಳಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ ಎಂದು ಅರಿವಾಯಿತು. 2025 ರ ವೇಳೆಗೆ 5 ಲಕ್ಷ ಜನರನ್ನು ತಪಾಸಣೆ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ. ಅಗತ್ಯವಿರುವವರಿಗೆ 3 ಲಕ್ಷ ಕನ್ನಡಕಗಳನ್ನು ಉಚಿತವಾಗಿ ವಿತರಿಸಲಾಗುವುದು. ಕಣ್ಣಿನ ಕಾಯಿಲೆಗಳ ಕುರಿತು ದೇಶಾದ್ಯಂತ ಕೆಲಸ ಮಾಡುತ್ತಿರುವ 219 ಸಂಸ್ಥೆಗಳೊಂದಿಗೆ ನಾವು ಜಂಟಿಯಾಗಿ ಕೆಲಸ ಮಾಡುತ್ತಿದ್ದೇವೆ. ಪ್ರತಿದಿನ, ನಮ್ಮ 40 ವೈದ್ಯರು ಹೊರರೋಗಿ ವಿಭಾಗದಲ್ಲಿ (OPD) ಕುಳಿತುಕೊಳ್ಳುತ್ತಾರೆ. ನಾವು ರೋಗಿಗಳ ಸ್ಥಿತಿಯ ಆಧಾರದ ಮೇಲೆ ನಮ್ಮ ಅಂಗಸಂಸ್ಥೆಯ ಪ್ರಮುಖ ಆಸ್ಪತ್ರೆಗಳಿಗೆ ಕಳುಹಿಸುತ್ತೇವೆ. ನಾವು ರೋಗಿಯನ್ನು ಅವರು ಇರುವ ಭಾರತದ ರಾಜ್ಯದ ಸಂಬಂಧಿತ ಸಂಸ್ಥೆಗೆ ಕಳುಹಿಸುತ್ತೇವೆ ಮತ್ತು ಅಲ್ಲಿ ಅವರು ಉಚಿತ ಸೇವೆಗಳನ್ನು ಪಡೆಯುತ್ತಾರೆ.’ ಎಂದು ಹೇಳಿದರು.
ಉಚಿತ ಕನ್ನಡಕ ವಿತರಣೆ
ಗುಜರಾತ್‌ನ ರಾಜ್‌ಕೋಟ್‌ನಲ್ಲಿರುವ ‘ಬಾಬಾ ರಣಛೋಡದಾಸ್ ಚಾರಿಟೇಬಲ್ ಟ್ರಸ್ಟ್’ ಮೂಲಕ ರೋಗಿಗಳಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸುತ್ತದೆ. ಈ ಸಂಸ್ಥೆಯು ಮಹಾಕುಂಭಮೇಳದ ಸಮಯದಲ್ಲಿ ಪ್ರತಿದಿನ 15 ಸಾವಿರ ಭಕ್ತರಿಗೆ ಮಹಾಪ್ರಸಾದವನ್ನು ಒದಗಿಸುತ್ತದೆ.