Kolkata Rape case Verdict : ಆರೋಪಿ ಸಂಜಯ ರಾಯ್ ತಪ್ಪಿತಸ್ಥ ಎಂದು ನ್ಯಾಯಾಲಯದ ತೀರ್ಪು !

  • ಕೋಲಕಾತಾದಲ್ಲಿ ಮಹಿಳಾ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ

  • ಜನವರಿ 20 ರಂದು ಶಿಕ್ಷೆ ಪ್ರಕಟ

ಕೋಲಕಾತಾ – ಆಗಸ್ಟ್ 9, 2024 ರ ರಾತ್ರಿ ಕೊಲಕಾತಾ ರಾಧಾ ಗೋವಿಂದ್ ಕರ್ (ಆರ್‌.ಜಿ.ಕರ್.) ಆಸ್ಪತ್ರೆಯಲ್ಲಿ ತರಬೇತಿ ಮಹಿಳಾ ವೈದ್ಯೆಯ ಮೇಲೆ ಅತ್ಯಾಚಾರ ಮಾಡಿ ಅವಳನ್ನು ಕೊಂದ ಪ್ರಕರಣದಲ್ಲಿ ಆರೋಪಿ ಸಂಜಯ ರಾಯ್ ಅವರನ್ನು ಸಿಯಾಲದಾಹ ನ್ಯಾಯಾಲಯವು ದೋಷಿ ಎಂದು ಘೋಷಿಸಿದೆ.  ಜನವರಿ 20 ರಂದು ರಾಯ್‌ಗೆ ಶಿಕ್ಷೆ ಪ್ರಕಟಿಸಲಾಗುವುದು. ಈ ಘಟನೆಯಿಂದ ದೇಶದಾದ್ಯಂತ ಆಕ್ರೋಶದ ಅಲೆ ಉಂಟಾಗಿತ್ತು. ಈ ಘಟನೆಯ ನಂತರ ಬಂಗಾಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಪ್ರತಿಭಟನೆ ನಡೆಸಿದ್ದರು. ಈ ಘಟನೆಯ ನಂತರ ಈ ಆಸ್ಪತ್ರೆಯ ಮೇಲೂ ದಾಳಿ ಮಾಡಲಾಗಿತ್ತು. ಸಾರ್ವಜನಿಕ ಆಂದೋಲನದ ನಂತರ, ಈ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಲಾಗಿತ್ತು.