Go-Pratishtha Yagya : ಮಹಾಕುಂಭ ಮೇಳದಲ್ಲಿ ‘ಗೋ-ಪ್ರತಿಷ್ಠಾ ಮಹಾಯಜ್ಞ’ ಪ್ರಾರಂಭ !

ಗೋ-ಪ್ರತಿಷ್ಠಾ ಮಹಾಯಜ್ಞ

ಪ್ರಯಾಗರಾಜ್, ಜನವರಿ 18 (ಸುದ್ದಿ.) – ಹಿಮಾಲಯದ ಬದರಿಕಾಶ್ರಮ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರ ವತಿಯಿಂದ ಮಹಾಕುಂಭ ಮೇಳದಲ್ಲಿ ‘ಗೋ-ಪ್ರತಿಷ್ಠಾ ಮಹಾಯಜ್ಞ’ವನ್ನು ಪ್ರಾರಂಭಿಸಲಾಯಿತು. ಇದರಲ್ಲಿ ಶ್ರೀ ಗಣೇಶ ಯಾಗ ಮಾಡಲಾಯಿತು. ಗೋಹತ್ಯೆಯಿಂದ ಭಾರತ ಭೂಮಿಗೆ ಅಂಟಿಕೊಂಡಿರುವ ಕಳಂಕವನ್ನು ಅಳಿಸಲು, ಗೋಹತ್ಯೆಯಿಂದ ಪ್ರತಿಯೊಬ್ಬ ಹಿಂದೂಗೆ ತಗಲಿದ ಪಾಪಗಳ ಪಾಪಕ್ಷಾಲನೆಗಾಗಿ, ಗೋವಿಗೆ ರಾಷ್ಟ್ರಮಾತೆಯ ಸ್ಥಾನಮಾನವನ್ನು ನೀಡಲು ಮತ್ತು ಗೋವನ್ನು ರಕ್ಷಿಸಲು ಆಧ್ಯಾತ್ಮಿಕ ಶಕ್ತಿ ಸಿಗಲು, ಈ ಗೋ ಪ್ರತಿಷ್ಠಾ ಮಹಾಯಜ್ಞದ ಮೂಲಕ ದೇವತೆಗಳಿಗೆ ಆಹುತಿಗಳನ್ನು ನೀಡಲಾಗುತ್ತಿದೆ.