ಛತ್ತೀಸ್‌ಗಢ-ತೆಲಂಗಾಣ ಗಡಿಯಲ್ಲಿ 12 ನಕ್ಸಲರ ಹತ್ಯೆ

ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ವಶ

ಜಗದಲಪುರ (ಛತ್ತೀಸ್‌ಗಢ) – ಛತ್ತೀಸ್‌ಗಢ ಮತ್ತು ತೆಲಂಗಾಣ ನಡುವಿನ ಗಡಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು 12 ನಕ್ಸಲರನ್ನು ಕೊಂದರು ಹಾಗೂ 2 ಸೈನಿಕರು ಗಾಯಗೊಂಡಿದ್ದಾರೆ. ಘಟನಾ ಸ್ಥಳದಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯನ್ನು 1 ಸಾವಿರದ 500 ಸೈನಿಕರು ಆ ಪ್ರದೇಶವನ್ನು ಸುತ್ತುವರೆದಿದ್ದರು. ಜನವರಿ 16 ರ ಬೆಳಿಗ್ಗೆಯಿಂದ ಘರ್ಷಣೆ ನಡೆಯುತ್ತಿತ್ತು. ಸಂಜೆ ತಡವಾಗಿ ನಕ್ಸಲೀಯರನ್ನು ಕೊಲ್ಲಲಾಯಿತು. ಕೆಲವು ದಿನಗಳ ಹಿಂದೆ, ನಕ್ಸಲೀಯರು ಇಟ್ಟಿದ್ದ ನೆಲಬಾಂಬ್ ಸ್ಫೋಟದಿಂದಾಗಿ 8 ಸೈನಿಕರು ಹುತಾತ್ಮರಾಗಿದ್ದರು. ಈಗ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.