ಹಿಂದೂ ಸೇನೆಯಿಂದ `ಐಸಿ 814 ದಿ ಕಂದಹಾರ ಹೈಜಾಕ’ ವೆಬ್ ಸರಣಿಯನ್ನು ನಿರ್ಬಂಧಿಸುವಂತೆ ದೇಹಲಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ

ಐ ಸಿ 814 ದಿ ಕಂದಹಾರ ಹೈಜಾಕ’ ಈ ‘ನೆಟ್‌ಫ್ಲಿಕ್ಸ್’ ನ ವೆಬ್ ಸರಣಿ ಮೂಲಕ ಹಿಂದೂಗಳ ಭಾವನೆಯನ್ನು ನೋಯಿಸಿದ ಪ್ರಕರಣ

(ವೆಬ್ ಸರಣಿಯೆಂದರೆ ಆನ್ ಲೈನ್ ಪ್ರಸಾರ ಮಾಡುವ ವಿಡಿಯೋ ಮಾಲಿಕೆ)

ಮುಂಬಯಿ – ‘ನೆಟ್‌ಫ್ಲಿಕ್ಸ್’ ಈ ಓಟಿಟಿ ವೇದಿಕೆಯಲ್ಲಿ ಇತ್ತೀಚೆಗೆ ಪ್ರಸಾರ ಮಾಡಿರುವ `ಐಸಿ 814 ದಿ ಕಂದಹಾರ ಹೈಜಾಕ’ (ಕಂದಹಾರ ವಿಮಾನ ಅಪಹರಣ) ಈ ವೆಬ್ ಸರಣಿಯನ್ನು ನಿರ್ಬಂಧಿಸುವಂತೆ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಲಾಗಿದೆ. ಈ ಸರಣಿಯಲ್ಲಿ ಸತ್ಯಗಳನ್ನು ತಿರುಚಲಾಗಿದ್ದು, ವಿಮಾನ ಅಪಹರಣ ಮಾಡುವ ಮುಸ್ಲಿಂ ಭಯೋತ್ಪಾದಕರ ಹೆಸರನ್ನು ಬದಲಾಯಿಸಲಾಗಿದೆಯೆಂದು ‘ಹಿಂದೂ ಸೇನೆ’ ಈ ಸಂಘಟನೆಯು ದಾಖಲಿಸಿರುವ ಅರ್ಜಿಯಲ್ಲಿ ತಿಳಿಸಿದೆ. ಈ ವೆಬ್ ಸರಣಿಯಿಂದ ಹಿಂದೂಗಳ ಭಾವನೆಯನ್ನು ನೋಯಿಸಿರುವುದಾಗಿ ಈ ಅರ್ಜಿಯಲ್ಲಿ ಹೇಳಲಾಗಿದೆ.

ಸೆನ್ಸಾರ್ ಮಂಡಳಿಯು ಈ ವೆಬ್ ಸರಣಿಗೆ ಪ್ರಮಾಣ ಪತ್ರವನ್ನು ರದ್ದುಗೊಳಿಸಬೇಕು ಮತ್ತು ಅದರ ಪ್ರಸಾರವನ್ನು ನಿರ್ಬಂಧಿಸಬೇಕು ಎಂದು ಈ ಅರ್ಜಿಯಲ್ಲಿ ಒತ್ತಾಯಿಸಲಾಗಿದೆ. (ಅರ್ಜಿಯಲ್ಲಿಯೇ ತಾಂತ್ರಿಕ ದೋಷವಿದೆ. ಓಟಿಟಿ ವೇದಿಕೆ ಇದು ಸೆನ್ಸಾರ್ ಮಂಡಳಿಯಡಿಯಲ್ಲಿ ಬರುವದಿಲ್ಲ. ಕೇಂದ್ರ ಸರಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವೇ ಈ ಸರಣಿಯನ್ನು ನಿರ್ಬಂಧಿಸಲು ಪ್ರಯತ್ನಿಸಬೇಕು ! – ಸಂಪಾದಕರು) ಈ ಅರ್ಜಿಯನ್ನು ಹಿಂದೂ ಸೇನೆಯ ಸುರ್ಜಿತ್ ಸಿಂಗ್ ಯಾದವ್ ಅವರು ಸಲ್ಲಿಸಿದ್ದಾರೆ.

ಏನಿದು ಪ್ರಕರಣ ?

ಡಿಸೆಂಬರ್ 24, 1999 ರಂದು ಇಂಡಿಯನ್ ಏರ್‌ಲೈನ್ಸ್ ವಿಮಾನ ಕಾಠ್ಮಂಡೂವಿನಿಂದ ಹಾರಾಟ ನಡೆಸಿದ ನಂತರ ಪಾಕಿಸ್ತಾನಿ ಭಯೋತ್ಪಾದಕರು ಅದನ್ನು ಅಪಹರಿಸಿದ್ದರು. ಇದನ್ನೇ ಈ ವೆಬ್ ಸರಣಿಯಲ್ಲಿ ಪ್ರಸ್ತುತಪಡಿಸಲಾಗಿದೆ. ವಿಮಾನವನ್ನು ಅಪಹರಿಸಿದ ಜಿಹಾದಿ ಭಯೋತ್ಪಾದಕರ ಹೆಸರುಗಳು ಇಬ್ರಾಹಿಂ ಅಥರ (ಬಹಾವಲ್ಪೂರ), ಶಾಹಿದ ಅಖ್ತರ (ಕರಾಚಿ), ಸನ್ನಿ ಅಹ್ಮದ (ಕರಾಚಿ), ಜಹೂರ ಮಿಸ್ತ್ರಿ (ಕರಾಚಿ) ಮತ್ತು ಶಾಕಿರ್ (ಸುಕ್ಕೂರ್ ಸಿಟಿ) ಆಗಿದೆ; ಆದರೆ ವೆಬ್ ಸರಣಿಯಲ್ಲಿ ಮಾತ್ರ ಇಬ್ಬರು ಭಯೋತ್ಪಾದಕರನ್ನು ‘ಭೋಲಾ’ ಮತ್ತು ‘ಶಂಕರ್’ ಎಂದು ಹೆಸರುಗಳನ್ನು ಇಡಲಾಗಿದೆ. ಘಟನೆಯನ್ನು ಸಂಪೂರ್ಣವಾಗಿ ವಿರೋಧಿಸುವಂತೆ ಮತ್ತು ಈ ವೆಬ್ ಸರಣಿಯನ್ನು ಬಹಿಷ್ಕರಿಸುವಂತೆಯೂ ಒತ್ತಾಯಿಸಲಾಗುತ್ತಿದೆ. ಈ ಮಾಧ್ಯಮದ ಮೂಲಕ ಹಿಂದೂ ಧರ್ಮಕ್ಕೆ ಅವಮಾನ ಮಾಡಲಾಗಿದೆ. ಇತ್ತೀಚೆಗೆ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನೆಟ್‌ಫ್ಲಿಕ್ಸ್‌ಗೆ ‘ಕಂಟೆಂಟ್ ಹೆಡ್’ ಈ ಸರಣಿಯಲ್ಲಿನ ಗುರುತನ್ನು ಬದಲಾಯಿಸುವ ಸಂದರ್ಭದಲ್ಲಿ ಸಮನ್ಸ್ ನೀಡಿತ್ತು. ನಿರ್ದೇಶಕ ಅನುಭವ ಸಿನ್ಹಾ ಅವರು ವೆಬ್ ಸೀರೀಸ್ ಮಾಡಿದ್ದಾರೆ. ಇದೇ ವೆಬ್‌ಸರಣಿಯು ಆಗಸ್ಟ್ 29 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರ ಮಾಡಲಾಗಿದೆ.