ನೇಪಾಳದಲ್ಲಿ 2 ಸಾವಿರ ಕ್ರೈಸ್ತರಿಂದ ಹಿಂದೂ ಧರ್ಮಕ್ಕೆ ಪ್ರವೇಶ !

ವಿಶ್ವ ಹಿಂದೂ ಪರಿಷತ್ತಿನಿಂದ ಧಾರ್ಮಿಕ ಕಾರ್ಯಕ್ರಮದ ಆಯೋಜನೆ

ಕಾಠ್ಮಂಡು (ನೇಪಾಳ) – ಇತ್ತೀಚೆಗೆ ಇಲ್ಲಿ 2 ಸಾವಿರ ಕ್ರೈಸ್ತರು ಹಿಂದೂ ಧರ್ಮದಲ್ಲಿ ಘರವಾಪಸಿ (ಮರು ಪ್ರವೇಶ) ಮಾಡಿದರು. ವಿಶ್ವ ಹಿಂದೂ ಪರಿಷತ ಈ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಿತ್ತು. ಹಿಂದೂ ಧಾರ್ಮಿಕ ಸಂಪ್ರದಾಯಗಳ ಪ್ರಕಾರ ಘರವಾಪಸಿ ಕಾರ್ಯಕ್ರಮ ನಡೆಯಿತು. ಹಿಂದೂ ಧರ್ಮದಲ್ಲಿ ಮರಳಿ ಬಂದ ಬಳಿಕ ಈ ಜನರು ತುಂಬಾ ಸಂತೋಷಗೊಂಡಿರುವುದು ಕಾಣಿಸುತ್ತಿತ್ತು. ಈ ಹಿಂದೆ ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಎಮಖಜರಾನಾ ಗಣೇಶ ದೇವಸ್ಥಾನದಲ್ಲಿ 8 ಮುಸ್ಲಿಂ ವ್ಯಕ್ತಿಗಳು ಹಿಂದೂ ಧರ್ಮವನ್ನು ಸ್ವೀಕರಿಸಿದ್ದರು.

ಘರವಾಪಸಿ ಕಾರ್ಯಕ್ರಮದ ಕುರಿತು ಭೀಮ ಪರಾಜುಲಿ ಹೆಸರಿನ ಹಿಂದುತ್ವನಿಷ್ಠನು ಮಾತನಾಡಿ, ಯಾವ ವ್ಯಕ್ತಿ ಆಮಿಷ ಮತ್ತು ಅಜ್ಞಾನದಿಂದ ಕ್ರೈಸ್ತ ಧರ್ಮ ಸ್ವೀಕರಿಸಿದ್ದನೋ, ಅವನನ್ನು ಪುನಃ ಸನಾತನ ಧರ್ಮದಲ್ಲಿ ಸ್ವಾಗತಿಸಲಾಗಿದೆ. ನೇಪಾಳದ ಸುನಸರಿ, ಮೊರಂಗ್ ಮತ್ತು ಇತರ ಜಿಲ್ಲೆಗಳಲ್ಲಿ ಸಾವಿರಾರು ಜನರು ಸ್ವಪ್ರೇರಣೆಯಿಂದ ಹಿಂದೂ ಧರ್ಮವನ್ನು ಮರುಪ್ರವೇಶಿಸುತ್ತಿರುವುದಾಗಿಯೂ ಅವರು ಈ ಸಂದರ್ಭದಲ್ಲಿ ಹೇಳಿದರು.

ಸಂಪಾದಕೀಯ ನಿಲುವು

ಎಲ್ಲಿ ಬಲವಂತದಿಂದ ಅಥವಾ ಆಮಿಷವನ್ನು ತೋರಿಸಿ ಇತರೆ ಧರ್ಮದವರನ್ನು ತಮ್ಮ ಧರ್ಮಕ್ಕೆ ಸೆಳೆಯುವ ಮುಸ್ಲಿಂ ಮತ್ತು ಕ್ರೈಸ್ತ ಧರ್ಮದವರು ಮತ್ತು ಈ ರೀತಿ ಏನನ್ನೂ ಮಾಡದೇ ಕೇವಲ ನಮ್ಮ ಅದ್ವಿತೀಯ ಬೋಧನೆಯಿಂದಲೇ ಸಾವಿರಾರು ಜನರನ್ನು ತನ್ನ ಬಳಿಗೆ ಸೆಳೆಯುವ ಹಿಂದೂ ಧರ್ಮ !