ಕಂದಹಾರ್ ವಿಮಾನ ಅಪಹರಣಕ್ಕೆ ಸಂಬಂಧಿಸಿದ ‘ವೆಬ್ ಸೀರೀಸ್’ಗಳಲ್ಲಿ ಜಿಹಾದಿ ಭಯೋತ್ಪಾದಕರಿಗೆ ಹಿಂದೂ ಹೆಸರು !

ಕೇಂದ್ರ ಸರಕಾರದಿಂದ`ನೆಟ್‌ಫ್ಲಿಕ್ಸ್‌’ನ ಭಾರತದ ಮುಖ್ಯಸ್ಥರಿಗೆ ಸಮನ್ಸ್ ಜಾರಿ !

ಮುಂಬಯಿ – ‘ನೆಟ್‌ಫ್ಲಿಕ್ಸ್’ ಈ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ವೆಬ್ ಸರಣಿ ‘ಐ ಸಿ 814 ದಿ ಕಂದಹಾರ ಹೈಜಾಕ್’ (ಕಂದಹಾರ್ ವಿಮಾನ ಅಪಹರಣ)ಇದರಲ್ಲಿ ಜಿಹಾದಿ ಭಯೋತ್ಪಾದಕರ ನಿಜವಾದ ಹೆಸರನ್ನು ಮುಚ್ಚಿಟ್ಟು ಅವರನ್ನು ಭೋಲಾ ಮತ್ತು ಶಂಕರ ಎಂದು ಹಿಂದೂ ಹೆಸರನ್ನು ನೀಡಿರುವ ಬಗ್ಗೆ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮದಿಂದ ವಿರೋಧಿಸಲಾಗುತ್ತಿದೆ. ಈಗ ಕೇಂದ್ರ ಸರಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಇದನ್ನು ಗಂಭೀರವಾಗಿ ಪರಿಗಣಿಸಿ ‘ನೆಟ್‌ಫ್ಲಿಕ್ಸ್’ನ ಭಾರತದ ಮುಖ್ಯಸ್ಥರನ್ನು ಸಮನ್ಸ್ ಕಳುಹಿಸಿ ಕರೆಸಿದೆ.

ಈ ವೆಬ್ ಸೀರೀಸ್ ಆಗಸ್ಟ್ 29 ರಂದು ಬಿಡುಗಡೆಯಾಗಿತ್ತು. ಅನುಭವ್ ಸಿನ್ಹಾ ಇದರ ನಿರ್ದೇಶಕರಾಗಿದ್ದಾರೆ. ಡಿಸೆಂಬರ್ 24, 1999 ರಂದು, ಕಠ್ಮಂಡುವಿನಿಂದ ಟೇಕ್ ಆಫ್ ಆದ ನಂತರ ‘ಇಂಡಿಯನ್ ಏರ್‌ಲೈನ್ಸ್’ನ ವಿಮಾನ `ಐಸಿ 814’ ಅನ್ನು ಪಾಕಿಸ್ತಾನಿ ಭಯೋತ್ಪಾದಕರು ಅಪಹರಣ ಮಾಡಿದ್ದರು. ಈ ಕಥೆಯನ್ನೇ ಈ ವೆಬ್ ಸರಣಿಯಲ್ಲಿ ತೋರಿಸಲಾಗಿದೆ. ವಿಮಾನವನ್ನು ಅಪಹರಿಸಿದ ಜಿಹಾದಿ ಭಯೋತ್ಪಾದಕರ ಹೆಸರುಗಳು ಇಬ್ರಾಹಿಂ ಅತಹರ (ಬಹಾವಲಪೂರ), ಶಾಹಿದ್ ಅಖ್ತರ್ (ಕರಾಚಿ), ಸನಿ ಅಹ್ಮದ್ (ಕರಾಚಿ), ಜಹೂರ್ ಮಿಸ್ತ್ರಿ (ಕರಾಚಿ) ಮತ್ತು ಶಾಕಿರ (ಸುಕ್ಕೂರ್ ಸಿಟಿ) ಎಂದು ಇತ್ತು. ಆದರೆ, ವೆಬ್ ಸೀರಿಸ್ ನಲ್ಲಿ ಮಾತ್ರ ಅವರ ಹೆಸರುಗಳನ್ನು ‘ಭೋಲಾ’ ಮತ್ತು ‘ಶಂಕರ್’ ಎಂದು ಇಟ್ಟಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಲಾಯಿತು.

ಹಾಗೆಯೇ ಈ ವೆಬ್ ಸರಣಿಯನ್ನು ಬಹಿಷ್ಕರಿಸುವಂತೆಯೂ ಕರೆ ನೀಡಲಾಗಿತ್ತು. ಅದಕ್ಕೆ `ಭಯೋತ್ಪಾದಕರು ಪರಸ್ಪರರಿಗೆ ಸಾಂಕೇತಿಕ ಹೆಸರುಗಳನ್ನು ಇಟ್ಟುಕೊಂಡಿದ್ದರು ಮತ್ತು ಈ ವೆಬ್ ಸರಣಿಯನ್ನು ಸರಿಯಾಗಿ ಅಧ್ಯಯನ ಮತ್ತು ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ’ ಎಂದು ಸ್ಪಷ್ಟೀಕರಣವನ್ನು ವೆಬ್ ಸರಣಿಯ ಒಬ್ಬ ನಿರ್ದೇಶಕ ಮುಖೇಶ್ ಛಾಬ್ರಾ ಅವರು ಮಾಹಿತಿ ನೀಡಿದ್ದರು. ‘(ಜಿಹಾದಿ ಭಯೋತ್ಪಾದಕರು ತಮ್ಮ ಗುರುತನ್ನು ಮರೆಮಾಚಲು ಯಾವಾಗಲೂ ಹಿಂದೂ ಧರ್ಮದ ಹೆಸರನ್ನು ಇಟ್ಟುಕೊಳ್ಳುತ್ತಾರೆ; ಅವರು ಕೇವಲ ವೆಬ್ ಸೀರೀಸ್ ಮಾಡಿದರೆ ಅವರ ನಿಜವಾದ ಹೆಸರು ಏನಾಗಿತ್ತು ? ಇದನ್ನು ಅವರು ಏಕೆ ಹೇಳಲಿಲ್ಲ ? ಅದನ್ನು ಏಕೆ ಮುಚ್ಚಿಡಲಾಯಿತು ? ಈ ಜಿಹಾದಿ ಮಾನಸಿಕತೆಯಾಗಿದೆಯೇ ? ಎನ್ನುವುದನ್ನೂ ಕಂಡು ಹಿಡಿಯಬೇಕು-ಸಂಪಾದಕರು)

ಸಂಪಾದಕೀಯ ನಿಲುವು

‘ನೆಟ್‌ಫ್ಲಿಕ್ಸ್’ ಮೇಲೆ ಭಾರತದಲ್ಲಿ ಏಕೆ ನಿಷೇಧ ಹೇರುತ್ತಿಲ್ಲ ? ಚಲನಚಿತ್ರಗಳಿಗೆ ಕೇಂದ್ರೀಯ ಪರೀಕ್ಷಾ ತಪಾಸಣಾ ಮಂಡಳಿ ಇರುವಂತೆ, ವೆಬ್ ಸರಣಿಗಳಿಗೆ ಸರಕಾರವು ಮಂಡಳಿ ಏಕೆ ಸ್ಥಾಪಿಸುವುದಿಲ್ಲ ? ಇನ್ನೂ ಎಷ್ಟು ವರ್ಷಗಳ ವರೆಗೆ ವೆಬ್ ಸೀರಿಸ್ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮ ಇವುಗಳಿಗೆ ಆಗುವ ಅವಮಾನವನ್ನು ಸಹಿಸಿಕೊಳ್ಳಬೇಕು ?