‘ಹಿಂದೂಗಳ ಮೇಲಿನ ದಾಳಿಯ ವರದಿಗಳು ತಪ್ಪಂತೆ !’ – ಬಾಂಗ್ಲಾದೇಶದಲ್ಲಿ ವಿರೋಧಿಪಕ್ಷ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಭದ್ರತೆಯು ಬಾಂಗ್ಲಾದೇಶದ ಆಂತರಿಕ ವಿಷಯವಾಗಿದೆ. ಹಿಂದೂಗಳ ಮೇಲಿನ ದಾಳಿಯ ವರದಿಗಳು ಸುಳ್ಳು; ಏಕೆಂದರೆ ಬಹುತೇಕ ಘಟನೆಗಳು ರಾಜಕೀಯ ಉದ್ದೇಶದಿಂದ ಕೂಡಿತ್ತು ಎಂದು ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿಯ ಪ್ರಧಾನ ಕಾರ್ಯದರ್ಶಿ ಮಿರ್ಜಾ ಫಕ್ರುಲ್ ಇಸ್ಲಾಂ ಅಲಮಗೀರ್ ಅವರು ಸುಳ್ಳು ಹೇಳಿಕೆ ನೀಡಿದ್ದಾರೆ. ಅವರು ತಮ್ಮ ಮಾತನ್ನು ಮುಂದುವರಿಸಿ, ಭಾರತ ಮತ್ತು ಬಾಂಗ್ಲಾದೇಶದ ಸಂಬಂಧದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಹಸ್ತಾಂತರ ಅಗತ್ಯ ಎಂದು ಹೇಳಿದರು. ಹೀಗೆ ನಡೆದರೆ ಇದು ಬಾಂಗ್ಲಾದೇಶದ ಜನರ ಭಾವನೆಗಳನ್ನು ಗೌರವಿಸಿದಂತಾಗುತ್ತದೆ ಎಂದು ಹೇಳಿದರು. (ಹಿಂದೂಗಳ ಧಾರ್ಮಿಕ ಭಾವನೆಗಳ ಬಗ್ಗೆ ಅಲಮಗೀರ್ ಏಕೆ ಏನನ್ನೂ ಹೇಳುವುದಿಲ್ಲ ? – ಸಂಪಾದಕರು) ಹಸೀನಾ ಭಾರತದಲ್ಲಿ ಉಳಿದರೆ, ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ಹದಗೆಡಬಹುದು ಎಂದೂ ಸಹ ಹೇಳಿದರು.

1. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ, ಅವಾಮಿ ಲೀಗ್ ಸರಕಾರದ ಅವಧಿಯಲ್ಲಿನ ವಿವಾದಾತ್ಮಕ ಅದಾನಿ ವಿದ್ಯುತ್ ಒಪ್ಪಂದದ ಬಗ್ಗೆ ತನಿಖೆ ನಡೆಸಲಾಗುವುದು; ಏಕೆಂದರೆ ಇದರಿಂದ ಬಾಂಗ್ಲಾದೇಶದ ಜನರಿಗೆ ತೊಂದರೆಯಾಗುತ್ತಿದೆ.

2. ಅವರು ತಮ್ಮ ಮಾತನ್ನು ಮುಂದುವರಿಸಿ ಹಿಂದಿನ ಭಿನ್ನಾಭಿಪ್ರಾಯಗಳನ್ನು ಮರೆತು ಸಹಕರಿಸಲು ನಮ್ಮ ಪಕ್ಷ ಸಿದ್ಧವಿದೆ. ಬಾಂಗ್ಲಾದೇಶದಿಂದಾಗಿ ಭಾರತದ ಭದ್ರತೆಗೆ ಧಕ್ಕೆ ತರುವ ಯಾವುದನ್ನೂ ನಾವು ಅನುಮತಿಸುವುದಿಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಭಾರತ ಶೇಖ್ ಹಸೀನಾಳನ್ನು ಬಾಂಗ್ಲಾದೇಶದ ವಶಕ್ಕೆ ನೀಡದಿದ್ದರೆ ದ್ವಿಪಕ್ಷೀಯ ಸಂಬಂಧ ಹದಗೆಡುತ್ತದೆ !
  • ಮುಸ್ಲಿಮ್ ರಾಷ್ಟ್ರವಾದ ಬಾಂಗ್ಲಾದೇಶದಿಂದ ಈ ರೀತಿ ಕಣ್ಣಿಗೆ ಮಣ್ಣೆರಚುತ್ತಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ ! ಏನೇ ಆಗಲಿ, ಬಾಂಗ್ಲಾದೇಶದಲ್ಲಿರುವ ಹಿಂದೂಗಳ ರಕ್ಷಣೆ ಭಾರತಕ್ಕೆ ಮೊದಲ ಆದ್ಯತೆಯಾಗಬೇಕು ಎಂದು ಭಾರತೀಯ ಹಿಂದೂಗಳಿಗೆ ಅನಿಸುತ್ತದೆ !