ಶ್ರೀ ಗಣೇಶನಿಗೆ ಕೆಂಪು ಬಣ್ಣದ ವಸ್ತುಗಳನ್ನೇಕೆ ಅರ್ಪಿಸುತ್ತಾರೆ ?

ಶ್ರೀ ಗಣಪತಿಯ ವರ್ಣವು ಕೆಂಪಾಗಿದೆ. ಗಣಪತಿಯ ಪೂಜೆಯಲ್ಲಿ ಕೆಂಪು ವಸ್ತ್ರ, ಕೆಂಪು ಹೂವು ಮತ್ತು ರಕ್ತಚಂದನವನ್ನು ಉಪಯೋಗಿಸುತ್ತಾರೆ. ಕೆಂಪು ಬಣ್ಣದಿಂದ ವಾತಾವರಣದಲ್ಲಿರುವ ಗಣಪತಿಯ ಪವಿತ್ರಕಗಳು ಮೂರ್ತಿಯ ಕಡೆಗೆ ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿತವಾಗಿ ಮೂರ್ತಿಯು ಜಾಗೃತವಾಗುತ್ತದೆ. ಇದು ತಿಳಿಯುವುದು ಕಠಿಣವಾಗಿರುವುದರಿಂದ ಗಣಪತಿಗೆ ಕೆಂಪು ವಸ್ತ್ರ, ಕೆಂಪು ಹೂವು ಮತ್ತು ರಕ್ತಚಂದನವು ಇಷ್ಟವಾಗುತ್ತದೆ ಎನ್ನುತ್ತಾರೆ.

೧. ದಾಸವಾಳ ಹೂವಿನಲ್ಲಿರುವ ವರ್ಣಕಣ ಮತ್ತು ಗಂಧಕಣ ಗಳಿಂದಾಗಿ ಬ್ರಹ್ಮಾಂಡ ಮಂಡಲದಲ್ಲಿನ ಗಣೇಶತತ್ತ್ವದ ಪವಿತ್ರಕಗಳು ಹೂವಿನ ಕಡೆಗೆ ಆಕರ್ಷಿಸುತ್ತವೆ.

೨. ದೇವತೆಗಳಿಗೆ ಹೂವುಗಳನ್ನು ಅರ್ಪಿಸುವುದರ ಮುಖ್ಯ

ಉದ್ದೇಶ : ದೇವತೆಗಳಿಂದ ಬರುವ ಸ್ಪಂದನಗಳು ಮುಖ್ಯವಾಗಿ ನಿರ್ಗುಣ ತತ್ತ್ವಕ್ಕೆ ಸಂಬಂಧಿಸಿರುತ್ತವೆ ದೇವತೆಗಳಿಗೆ ಅರ್ಪಿಸಿದ ಹೂವುಗಳು ಈ ತತ್ತ್ವಗಳನ್ನು ಗ್ರಹಿಸಿ ಅವುಗಳನ್ನು ಪೂಜಕನಿಗೆ ಪ್ರಾಪ್ತ ಮಾಡಿ ಕೊಡುತ್ತವೆ. ಅದರಿಂದ ಆ ಸ್ಪಂದನಗಳು ಪೂಜಕನಿಗೆ ಸಿಗುತ್ತವೆ.

೩. ಕೆಂಪು ಮತ್ತು ಇತರ ಬಣ್ಣದ ದಾಸವಾಳಗಳ ವ್ಯತ್ಯಾಸ

ಅ. ಕೆಂಪು ಬಣ್ಣದ ದಾಸವಾಳದ ಹೂವುಗಳಲ್ಲಿ, ಅವುಗಳ ಬಣ್ಣದ ಮತ್ತು ಗಂಧದ ಕಣಗಳಿಂದಾಗಿ ಬ್ರಹ್ಮಾಂಡ ಮಂಡಲದಲ್ಲಿನ ಗಣೇಶತತ್ತ್ವವನ್ನು ಆಕರ್ಷಿಸಿಕೊಳ್ಳುವ ಕ್ಷಮತೆಯು ಹೆಚ್ಚಿರುತ್ತದೆ; ಆದರೆ ಇತರ ಬಣ್ಣದ ದಾಸವಾಳದ ಹೂವುಗಳಲ್ಲಿ ಕಡಿಮೆಯಿರುತ್ತದೆ.

ಆ. ಕಸಿ ಮಾಡಿದ ದಾಸವಾಳದ ವಿವಿಧ ಬಣ್ಣದ ಹೂವು ಗಳು ಸ್ವಲ್ಪ ಪ್ರಮಾಣದಲ್ಲಿ ಮಾಯಾವೀ ಸ್ಪಂದನಗಳೂ ಆಕರ್ಷಿಸುತ್ತವೆ.