ಮಸೀದಿಯಿಂದ ‘ಇಸ್ರೇಲ್ ಅನ್ನು ನಾಶಪಡಿಸುವುದು’, ‘ಯಹೂದಿಗಳನ್ನು ಕೊಲ್ಲುವುದು’ ಮತ್ತು ‘ಅಲ್ಲಾಹನಿಗಾಗಿ ಹೋರಾಡುವುದು’ ಮುಂತಾದ ಹಿಂಸಾತ್ಮಕ ಸಂದೇಶಗಳನ್ನು ನೀಡಲಾಯಿತು !
ಲಂಡನ್ (ಬ್ರಿಟನ) – ಬ್ರಿಟನನಲ್ಲಿ ದ್ವೇಷಪೂರಿತ ಭಾಷಣದ ಮೂಲಕ ಮುಸಲ್ಮಾನೇತರರ ವಿರುದ್ಧ ಫತ್ವಾ ಹೊರಡಿಸಲಾಗಿರುವ ಆರೋಪದ ಅಡಿಯಲ್ಲಿ 24 ಮಸಿದಿಯ ತನಿಖೆಯನ್ನು ಪ್ರಾರಂಭಿಸಲಾಗಿದೆ. ಈ ಮಸಿದಿ ಲಂಡನ್, ಬರ್ಮಿಂಗ್ಹ್ಯಾಮ್, ಲಿವರ್‌ಪೂಲ್ ಮತ್ತು ಮ್ಯಾಂಚೆಸ್ಟರ್ ನಗರಗಳಲ್ಲಿವೆ. ಈ ಮಸೀದಿಯಿಂದ ಮಾಡಿದ ಪ್ರವಚನಗಳಲ್ಲಿ ‘ಇಸ್ರೇಲ್ ಅನ್ನು ನಾಶಮಾಡಿರಿ’, ‘ಯಹೂದಿಗಳನ್ನು ಹತ್ಯೆ ಮಾಡಿರಿ’ ಮತ್ತು ‘ಅಲ್ಲಾಗಾಗಿ ಯುದ್ಧ ಮಾಡಿರಿ’ ಎಂಬ ಹಿಂಸಾತ್ಮಕ ಸಂದೇಶಗಳನ್ನು ನೀಡಲಾಗಿತ್ತು. ವಿಶೇಷವೆಂದರೆ, ಈ ಮಸೀದಿಗಳನ್ನು ಪಾಕಿಸ್ತಾನಿ ಮೂಲದವರು ನಡೆಸುತ್ತಾರೆ. ಜುಲೈನಲ್ಲಿ ಕಾರ್ಮಿಕ ಪಕ್ಷದ ಸರಕಾರ ಅಧಿಕಾರಕ್ಕೆ ಬಂದನಂತರ ತನಿಖೆಗೆ ಆದೇಶಿಸಿತ್ತು.
Britain: Major Probe into 24 Mosques Run by Mu$|!m$ of Pakistani Descent
These Mosques are reportedly spreading violent anti-Semitic messages and Hate Speech
This situation raises urgent questions about the nature of messages in Mosques within India. Are intelligence agencies… pic.twitter.com/U8Ydltp1CD
— Sanatan Prabhat (@SanatanPrabhat) August 29, 2024
1. ಈ ಮಸಿದಿಯಿಂದ ಭಯೋತ್ಪಾದಕ ಸಂಘಟನೆ ಹಮಾಸ್ ಮತ್ತು ಅದರ ಭಯೋತ್ಪಾದಕರಿಂದ ಭಾಷಣಗಳನ್ನು ಬೆಂಬಲಿಸಿರುವ ಆರೋಪಗಳಿವೆ. ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ 14 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದು.
2. ಗಾಜಾದಲ್ಲಿ ಇಸ್ರೇಲನೊಂದಿಗೆ ಯುದ್ಧ ಪ್ರಾರಂಭವಾದಾಗಿನಿಂದ ಈ ಮಸೀದಿಯಿಂದ ದ್ವೇಷ ಹರಡುವ ಅನೇಕ ದೂರುಗಳು ಬರುತ್ತಿದ್ದವು. ಇಸ್ರೇಲ್ ಮತ್ತು ಯಹೂದಿಗಳ ವಿರುದ್ಧ ದ್ವೇಷವನ್ನು ಹರಡುವ ಮೌಲ್ವಿಗಳು (ಇಸ್ಲಾಮಿನ ಧಾರ್ಮಿಕ ಮುಖಂಡರು) ಮತ್ತು ಧರ್ಮೋಪದೇಶಕರನ್ನು ಆಹ್ವಾನಿಸಿರುವ ಆರೋಪ ಈ ಮಸೀದಿಗಳ ಮೇಲಿದೆ.
3. ಈ ಪ್ರಕರಣದ ತನಿಖೆ ನಡೆಸುತ್ತಿರುವ ಧರ್ಮದತ್ತಿ ಆಯೋಗದ ಮುಖ್ಯಸ್ಥ ಹೆಲೆನ್ ಸ್ಟೀಫನ್ಸನ್ ಮಾತನಾಡಿ, ನಾವು ಇದರ ತನಿಖೆ ಮಾಡುತ್ತಿದ್ದೇವೆ ಮತ್ತು ನಿಯಮಗಳನ್ನು ಉಲ್ಲಂಘಿಸುವ ಮಸಿದಿಯ ದತ್ತಿ ಸ್ಥಾನಮಾನವನ್ನು ತೆಗೆದುಹಾಕಬೇಕೇ ? ಎಂದು ಕೂಡ ವಿಚಾರ ಮಾಡುತ್ತಿದ್ದೇವೆ ಎಂದು ಹೇಳಿದರು.
4. ಬರ್ಮಿಂಗ್ಹ್ಯಾಮ್ ಮಹಮ್ಮದಿ ಮಸಿದಿಯ ಮೌಲ್ವಿ ಅಬು ಇಬ್ರಾಹಿಂ ಹುಸೇನ್ ಯಹೂದಿಗಳ ವಿರುದ್ಧ ಮಾಡಿದ ದ್ವೇಷಪೂರಿತ ಭಾಷಣಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿತ್ತು. ಅವನು ಮಸೀದಿಯಲ್ಲಿ ನಮಾಜ ಮಾಡಲು ಬಂದವರಿಗೆ ನನ್ನ ಹಿಂದೆ ಒಬ್ಬ ಯಹೂದಿ ಇದ್ದಾನೆ ಅವನನ್ನು ಹತ್ಯೆ ಮಾಡಿರಿ ಎಂದು ಹೇಳಿದ್ದನು.
5. ಲಂಡನ್‌ನಲ್ಲಿರುವ ತೌಹೀದ್ ಮಸಿದಿಯ ಮೌಲ್ವಿ ಶೇಖ್ ಸುಹೈಬ್ ಹಸನ್ ಇವನು ಇಸ್ರೇಲ್ ಮೇಲಿನ ಹಮಾಸ್‌ನ ದಾಳಿಯನ್ನು ಬೆಂಬಲಿಸಿದ್ದನು.
6. ಲಿವರ್‌ಪೂಲ್‌ನ ಮಸಿದಿಯಲ್ಲಿ ಒಬ್ಬ ಮೌಲ್ವಿಯು, ಒಂದು ವೇಳೆ 3 ಅರಬ ದೇಶಗಳು ಇಸ್ರೈಲ್ ಮೇಲೆ ದಾಳಿ ನಡೆಸಿದರೆ, ಆ ಭಾಗವು ಸಂಪೂರ್ಣವಾಗಿ ನಾಶವಾಗುತ್ತದೆ. ಎಂದು ಹೇಳಿದ್ದನು.
7. ಬರ್ಮಿಂಗ್‌ಹ್ಯಾಮ್‌ನ ಗ್ರೀನ್ ಲೇನ್ ಮಸೀದಿಯ ಮೌಲ್ವಿ ಜಕಾವುಲ್ಲಾ ಸಲೀಂ ಇವನು ಇಸ್ರೈಲ್ ಸೈನಿಕರ ಸಾವಿಗೆ ಪ್ರಾರ್ಥನೆ ಮಾಡಿದ್ದನು.
8. ಬ್ರಿಟನ ಮಸೀದಿಯಲ್ಲಿ ನೀಡಿರುವ ದ್ವೇಷಪೂರಿತ ಪ್ರವಚನಗಳನ್ನು ಅನೇಕ ಯಹೂದಿ ಕಾರ್ಯಕರ್ತರು ಸಂಗ್ರಹಿಸಿದ್ದಾರೆ ಮತ್ತು ಅದನ್ನು ಬ್ರಿಟಿಷ್ ಪೊಲೀಸರಿಗೆ ನೀಡುವುದರೊಂದಿಗೆ ಬಹಿರಂಗಗೊಳಿಸಿದ್ದಾರೆ.
ಸಂಪಾದಕೀಯ ನಿಲುವು
|