ರಾಜ್ಯದ ಶಿಕ್ಷಣ ಇಲಾಖೆಯ ಪ್ರಮಾಣಪತ್ರದಲ್ಲಿ ‘ಏಸು ಕ್ರಿಸ್ತ ‘ ಮತ್ತು ‘ಮೇರಿ’ ಚಿತ್ರ !

ಚಾಮರಾಜನಗರ – ಕಾಂಗ್ರೆಸ್ ಆಡಳಿತದ ರಾಜ್ಯ ಸರಕಾರದ ಶಿಕ್ಷಣ ಇಲಾಖೆಯ ಪ್ರಮಾಣಪತ್ರಗಳ ಮೇಲೆ ಏಸು ಕ್ರಿಸ್ತ ಮತ್ತು ಮಾತೆ ಮೇರಿ (ಯೇಸು ಕ್ರಿಸ್ತನ ತಾಯಿ) ಚಿತ್ರಗಳನ್ನು ಹಾಕಿರುವುದು ಬೆಳಕಿಗೆ ಬಂದಿದೆ. ಪದವಿಪೂರ್ವ ಕಾಲೇಜು ಕ್ರೀಡಾ ಸ್ಪರ್ಧೆಯ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಈ ಪ್ರಮಾಣಪತ್ರ ಬೆಳಕಿಗೆ ಬಂತು. ಪ್ರಮಾಣಪತ್ರಗಳಲ್ಲಿ ಎಡಭಾಗದಲ್ಲಿ ಜೀಸಸ್ ಮತ್ತು ಬಲಭಾಗದಲ್ಲಿ ಮೇರಿಯ ಚಿತ್ರಗಳಿವೆ.

ಇದೇ ಕಾಂಗ್ರೆಸ್ ಸರಕಾರದ ನಿಜವಾದ ಜಾತ್ಯತೀತತೆ ಎಂದು ಭಾಜಪದಿಂದ ಟಾಂಟ್ !

ಇದಕ್ಕೆ ಭಾಜಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಭಾಜಪ ಮುಖಂಡ ಅರ್. ಅಶೋಕ್ ಮಾತನಾಡಿ, ಶಾಲಾ-ಕಾಲೇಜು ಆವರಣದಲ್ಲಿ ಗಣೇಶೋತ್ಸವ, ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸುವುದನ್ನು ಸರಕಾರ ‘ಕೋಮುವಾದ’ ಎಂದು ಕರೆಯುತ್ತದೆ; ಆದರೆ ಶಿಕ್ಷಣ ಇಲಾಖೆಯ ಪ್ರಮಾಣ ಪತ್ರದಲ್ಲಿ ಏಸು ಕ್ರಿಸ್ತ ಮತ್ತು ಮೇರಿ ಅವರ ಚಿತ್ರಗಳನ್ನು ಮುದ್ರಿಸುವುದು ‘ಸೆಕ್ಯುಲರಿಸಂ’ ಆಗಿದೆ ! ಇದು ಕಾಂಗ್ರೆಸ್ ಸರಕಾರದ ನಿಜವಾದ ಜಾತ್ಯತೀತತೆಯಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ‘ಸೆಕ್ಯುಲರಿಸಂ’ ಎಂಬುದು ಹಿಂದೂ ಧರ್ಮವನ್ನು ವಿರೋಧಿಸುವ ಮತ್ತು ಹಿಂದೂಗಳನ್ನು ದ್ವೇಷಿಸುವ ಮುಖವಾಡವಾಗಿದೆ. ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರಕ್ಕೆ ಕನ್ನಡ ಜನತೆ ಶೀಘ್ರದಲ್ಲೇ ತಕ್ಕ ಪಾಠ ಕಲಿಸುವರು ಎಂದು ಅರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.