ಕೋಟಾ (ರಾಜಸ್ಥಾನ): ಶಿವ ಮಂದಿರದಲ್ಲಿದ್ದ ಶಿವಲಿಂಗ ಭಗ್ನ!

ಆರೋಪಿಗಳನ್ನು ಬಂಧಿಸುವಂತೆ ಶಿವಭಕ್ತರ ಆಗ್ರಹ

ಕೋಟಾ(ರಾಜಸ್ಥಾನ) – ಜಿಲ್ಲೆಯ ರಾಮಗಂಜಮಂಡಿಯ ಸರಕಾರಿ ವಿಹಿರ್ ಚೌಕ್‌ನಲ್ಲಿರುವ ಶಿವ ಮಂದಿರವೊಂದರಲ್ಲಿ ಆಗಸ್ಟ್ 27 ರಂದು ಮುರಿದ ಶಿವಲಿಂಗ ಪತ್ತೆಯಾಗಿದೆ. ದೇವಸ್ಥಾನದಲ್ಲಿ ನಡೆದ ಈ ಘಟನೆಯಿಂದ ಶಿವಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಶಿವಭಕ್ತರು ಹಾಗೂ ಹಿಂದೂ ಸಂಘಟನೆಗಳು ಒತ್ತಾಯಿಸಿವೆ. (ದೇಗುಲದಲ್ಲಿ ಶಿವಲಿಂಗ ವಿಧ್ವಂಸಕ ಕೃತ್ಯ ನಡೆಸಿರುವುದು ಪೊಲೀಸರಿಗೆ ಮತ್ತು ಆಡಳಿತಕ್ಕೆ ನಾಚಿಕೆಗೇಡು! – ಸಂಪಾದಕರು).

ರಾಮಗಂಜಮಂಡಿ ನಗರ ಮುಚ್ಚುವ ಎಚ್ಚರಿಕೆ!

ಆರೋಪಿಗಳನ್ನು ಶೀಘ್ರವೇ ಹಿಡಿಯದಿದ್ದರೆ ರಾಮಗಂಜಮಂಡಿ ನಗರ ಬಂದ್ ಮಾಡಲಾಗುವುದು ಎಂದು ಆಕ್ರೋಶಗೊಂಡ ಹಿಂದೂಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಈ ಘಟನೆಯ ನಂತರ ಶಿವಭಕ್ತರು ಹಾಗೂ ಹಿಂದೂ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದರು. ಉಪ ಪೊಲೀಸ್ ವರಿಷ್ಠಾಧಿಕಾರಿ ನರೇಂದ್ರ ಪರೀಕ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಶಾಂತಗೊಳಿಸಲು ಪ್ರಯತ್ನಿಸಿದರು. ಪೊಲೀಸ್ ಇಲಾಖೆ ಆರೋಪಿಯನ್ನು ಹಿಡಿದು ಕಠಿಣ ಶಿಕ್ಷೆ ನೀಡುವುದು, ಅಲ್ಲಿಯವರೆಗೆ ಈ ಪ್ರತಿಭಟನೆ ಹಿಂಪಡೆಯಬೇಕೆಂದು ಅವರು ಮನವಿ ಮಾಡಿದರು.

ಈ ಮೇಲೆ ತೋರಿಸಿರುವ ಚಿತ್ರ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ಉಂಟು ಮಾಡುವುದಾಗಿರದೇ ನಿಜ ಸ್ಥಿತಿ ತಿಳಿಸುವುದಾಗಿದೆ – ಸಂಪಾದಕರು

 

ಸಂಪಾದಕೀಯ ನಿಲುವು

ರಾಜಸ್ಥಾನದಲ್ಲಿ ಭಾಜಪ ಸರಕಾರವಿರುವಾಗ ಹಿಂದೂ ದೇವಾಲಯಗಳ ಮೇಲೆ ಇಂತಹ ದಾಳಿಯನ್ನು ಹಿಂದೂಗಳು ನಿರೀಕ್ಷಿಸುವುದಿಲ್ಲ ! ಈ ಹಿಂದೂ ದ್ವೇಷಿಗಳನ್ನು ಸರಕಾರ ಹದ್ದುಬಸ್ತಿನಲ್ಲಿಡಬೇಕು !