ಟೆಲಿಗ್ರಾಂ ಆ್ಯಪ್ ನ ಸಂಸ್ಥಾಪಕ ಪಾವೇಲ್ ಡುರೋವ ಅವರ ಫ್ಯಾನ್ಸ್‌ನಲ್ಲಿ ಬಂಧನ

  • ಅಪರಾಧಿ ಮತ್ತು ಭಯೋತ್ಪಾದಕ ಕೃತ್ಯಗಳಿಗಾಗಿ ಟೆಲಿಗ್ರಾಂನ ಬಳಕೆ ಮಾಡುವವರ ಮೇಲೆ ನಿಷೇದ ಹೇರದಿರುವ ಪ್ರಕರಣ

  • ಫ್ರಾನ್ಸ್ ಸರಕಾರದ ಶ್ಲಾಘನೀಯ ಕೃತಿ !

ಪ್ಯಾರಿಸ್ (ಫ್ರಾನ್ಸ್) – ಟೆಲಿಗ್ರಾಂ ಆ್ಯಪ್ ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯಕಾರಿ ಅಧಿಕಾರಿ ಪಾವೇಲ್ ಡುರೋವ ಅವರನ್ನು ಪ್ಯಾರಿಸ್ ನ ಬೋರ್ಜೆಟ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಪೊಲೀಸರ ಹೇಳಿಕೆಯ ಪ್ರಕಾರ ಟೆಲಿಗ್ರಾಂನಲ್ಲಿ ಅಪರಾಧಿ ಕೃತಗಳನ್ನು ಯಾವುದೇ ಅಡೆತಡೆ ಇಲ್ಲದೆ ಮುಂದುವರೆಸಲು ಅನುಮತಿ ನೀಡಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ ಈ ಪ್ರಕರಣದಲ್ಲಿ ಟೆಲಿಗ್ರಾಂ ನಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಈ ಪ್ರಕರಣದಲ್ಲಿ ಫ್ರಾನ್ಸಿನ ಗೃಹಸಚಿವಾಲಯದಿಂದ ಮನವಿ ಪ್ರಸಾರ ಮಾಡಲಾಗಿಲ್ಲ. ಆದರೆ ರಷ್ಯಾದ ವಿದೇಶಾಂಗ ಸಚಿವಾಲಯವು ‘ಪಶ್ಚಿಮಾತ್ಯ ಸ್ವಯಂ ಸೇವೆ ಸಂಸ್ಥೆ ಡುರೋವ ಅವರ ಬಿಡುಗಡೆಯ ಬೇಡಿಕೆ ಸಲ್ಲಿಸುವುದೇ?’ ಎಂಬ ಪ್ರಶ್ನೆ ಎತ್ತಿದೆ. ಪಾವೇಲ್ ಡುರೋವ್ ರಷ್ಯಾದಲ್ಲಿ ಜನಿಸಿದ್ದು ಅವರ ಬಳಿ ರಷ್ಯಾದ ಜೊತೆಗೆ ಫ್ರಾನ್ಸ್ ಮತ್ತು ಇತರ ಕೆಲ ದೇಶಗಳ ಪೌರತ್ವವಿದೆ.

ಇಸ್ಲಾಮಿಕ್ ಸ್ಟೇಟ್ ಗೆ ಪಾವೇಲ್ ಅಪ್ರತ್ಯಕ್ಷವಾಗಿ ಬೆಂಬಲಿಸುತ್ತಿದ್ದರು !

೨೦೧೫ರಲ್ಲಿ ಪ್ಯಾರಿಸ್ ನಲ್ಲಿ ಇಸ್ಲಾಮಿಕ್ ಸ್ಟೇಟ್ ನ ಜಿಹಾದಿ ಭಯೋತ್ಪಾದಕರಿಗೆ ಸಂದೇಶ ಕಳುಹಿಸುವುದಕ್ಕಾಗಿ ಟೆಲಿಗ್ರಾಂ ಅನ್ನು ಬಳಕೆ ಮಾಡಲಾಗಿತ್ತು. ಈ ಕುರಿತು ಪ್ರಶ್ನೆ ವಿಚಾರಿಸಿದಾಗ ಪಾವೇಲ್, ಭಯೋತ್ಪಾದನೆಯಂತಹ ಕೆಟ್ಟ ಘಟನೆಗಳ ಭಯಕ್ಕಿಂತಲೂ ರಹಸ್ಯ ಅಧಿಕಾರ ಮಹತ್ವದ್ದಾಗಿದೆ ಎಂದು ನನಗನಿಸುತ್ತದೆ ಎಂದು ಹೇಳಿದ್ದರು.

ಸಂಪಾದಕೀಯ ನಿಲುವು

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಎಕ್ಸ್, ಫೇಸ್ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದೂ ಧರ್ಮ ಮತ್ತು ಭಾರತದ ವಿರುದ್ಧ ಲೇಖನ ಬರೆಯಲಾಗುತ್ತದೆ ಮತ್ತು ಅದರ ಕುರಿತು ಈ ಕಂಪನಿಯ ಮಾಲೀಕರು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಭಾರತವು ಕೂಡ ಈ ಕಂಪನಿಯ ಮಾಲೀಕರನ್ನು ಹೆಡೆಮುರಿ ಕಟ್ಟಿ ಅವರ ವಿರುದ್ಧ ಮೋಕದ್ದಮೆ ನಡೆಸಿ ಅವರಿಗೆ ಶಿಕ್ಷೆ ವಿಧಿಸುವುದು ಆವಶ್ಯಕವಾಗಿದೆ.