ನ್ಯಾಯಾಂಗಕ್ಕೆ ಮುಸಲ್ಮಾನರ ಬಗ್ಗೆ ಏಕಿಷ್ಟು ಕಳವಳ ?

೧. ಮತಾಂಧ ಮುಸಲ್ಮಾನರನ್ನು ಓಲೈಸುವ ಮದ್ರಾಸ್‌ ಉಚ್ಚ ನ್ಯಾಯಾಲಯದ ಮದುರೈ ವಿಭಾಗೀಯ ಪೀಠದ ನಿರ್ಣಯ 

‘ಅನುಮತಿ ಇಲ್ಲದೆ ರಜೆ ಮಾಡುವುದು ಹಾಗೂ ಗಡ್ಡ ಬೆಳೆಸುವುದು, ಇವೆರಡು ಕಾರಣಗಳಿಗಾಗಿ ತಮಿಳುನಾಡು ಪೊಲೀಸ್‌ ದಳದ ಒಬ್ಬ ಮುಸಲ್ಮಾನ ಪೇದೆಯ ವಿರುದ್ಧ ವಿಚಾರಣೆ ನಡೆಸಿ ಅವನನ್ನು ದೋಷಿಯೆಂದು ನಿರ್ಧರಿಸಲಾಯಿತು ಹಾಗೂ ಅವನ ವೇತನ ಹೆಚ್ಚಳವನ್ನು ನಿಲ್ಲಿಸಲಾಯಿತು. ಈ ನಿರ್ಣಯದ ವಿರುದ್ಧ ಅವನು ಮದ್ರಾಸ್‌ ಉಚ್ಚ ನ್ಯಾಯಾಲಯದ ಮದುರೈ ವಿಭಾಗೀಯ ಪೀಠದಲ್ಲಿ ಅರ್ಜಿಯನ್ನು ಸಲ್ಲಿಸಿದನು. ಅವನು ನ್ಯಾಯಾಲಯಕ್ಕೆ, ”ನಾನು ಶ್ರದ್ಧಾವಂತ ಮುಸಲ್ಮಾನನಾಗಿದ್ದೇನೆ ಹಾಗೂ ಅದಕ್ಕನುಸಾರ ನಾನು ಗಡ್ಡ ಬೆಳೆಸುತ್ತೇನೆ’’ ಎಂದು ಹೇಳಿದನು. ಮದುರೈ ವಿಭಾಗೀಯ ಪೀಠ ಅವನಿಗೆ ಗಡ್ಡ ಬೆಳೆಸಲು ಅನುಮತಿ ನೀಡಿತು ಹಾಗೂ ಅವನ ವೇತನ ಹೆಚ್ಚಳವನ್ನು ನಿಲ್ಲಿಸುವ ನಿರ್ಣಯವನ್ನೂ ರದ್ದುಪಡಿಸಿತು.

‘ಸೈನ್ಯ ಮತ್ತು ಪೊಲೀಸ್‌ ದಳದ ಕಾರ್ಮಿಕರು ಗಡ್ಡ ಬೆಳೆಸಬಹುದೇ ?’ ಎನ್ನುವ ವಿಷಯದಲ್ಲಿ ಇನ್ನಿತರ ಉಚ್ಚ ನ್ಯಾಯಾಲಯಗಳ ತೀರ್ಪುಗಳಿವೆ. ಅವುಗಳಲ್ಲಿ ಸ್ಪಷ್ಟವಾಗಿ ಮುಂದಿನಂತೆ ಹೇಳಲಾಗಿದೆ, ‘ಮೂರೂ ಸಶಸ್ತ್ರ ದಳಗಳು ಮತ್ತು ಪೊಲೀಸ್‌ ದಳದವರು ಗಡ್ಡ ಬೆಳೆಸುವಂತಿಲ್ಲ ಹಾಗೂ ಅಲ್ಲಿ ಕೇವಲ ಮುಸಲ್ಮಾನರೆಂದು ಅವರ ಪಂಥದಲ್ಲಿ ಗಡ್ಡ ಬೆಳೆಸುತ್ತಾರೆ, ಎನ್ನುವ ಕಾರಣವೂ ನಡೆಯುವುದಿಲ್ಲ. ಸಾರ್ವಜನಿಕ ವ್ಯವಸ್ಥೆಯಲ್ಲಿ ಸಮಾನತೆ ಕಾಣಿಸಬೇಕು ಹಾಗೂ ವೈವಿಧ್ಯವನ್ನು ತಪ್ಪಿಸಬೇಕು’, ಎಂಬುದು ಇದರ ಹಿಂದಿನ ಉದ್ದೇಶವಾಗಿದೆ. ಪ್ರಾಥಮಿಕ ತರಗತಿಯಿಂದ ಮಹಾವಿದ್ಯಾಲಯದ ವರೆಗೆ ನಮಗೆ ಸರ್ವಧರ್ಮಸಮಭಾವದ ಮಹತ್ವವನ್ನು ಹೇಳಲಾಗುತ್ತದೆ. ಭಾರತದ ಸಶಸ್ತ್ರದಳಗಳಲ್ಲಿ ಸಮಾನತೆ, ಹೋಲುವಿಕೆ, ಒಂದು ಸಮವಸ್ತ್ರ, ಒಂದು ರೂಪ ಹಾಗೂ ಒಂದು ಉಡುಗೆಗೆ ಮಹತ್ವವಿದೆ. ಕೇವಲ ಮದ್ರಾಸಿನ ‘ಮೆನ್ಯುವಲ್’ (ನಿಯಮಾವಳಿ) ಧರ್ಮಕ್ಕೆ ಅಂತಹ ಅನುಮತಿ ನೀಡಿದರೆ ಇದು ದೇಶದಾದ್ಯಂತದ ‘ಮೆನ್ಯುವಲ್‌’ನ ವಿರುದ್ಧವಾಗುತ್ತದೆ. ಆದ್ದರಿಂದ ಇಲ್ಲಿ ಸಮಾನ ನಾಗರಿಕ ಕಾನೂನನ್ನು ಗಮನಿಸಿ ಅವನಿಗೆ ಗಡ್ಡ ಬೆಳೆಸಲು ಅನುಮತಿ ನೀಡಬಾರದು. ಅವನು ಹಾಗೆ ಮಾಡದಿದ್ದರೆ, ಅವನ ವೇತನವನ್ನು ನಿಲ್ಲಿಸುವ ಶಿಕ್ಷೆಯನ್ನು ರದ್ದು ಪಡಿಸಲು ಮದುರೈ ವಿಭಾಗೀಯ ಪೀಠಕ್ಕೆ ಏನೂ ಕಾರಣವಿರಲಿಲ್ಲ. ‘ಈ ನಿರ್ಣಯವು ನೇರವಾಗಿ ಮತಾಂಧರನ್ನು ಉತ್ತೇಜಿಸುವ ಹಾಗೂ ನ್ಯಾಯವ್ಯವಸ್ಥೆ ಮತಾಂಧ ಮುಸಲ್ಮಾನರನ್ನು ಓಲೈಸುತ್ತದೆ ?’, ಎನ್ನುವ ಸಂಶಯ ಜನಸಾಮಾನ್ಯರಲ್ಲಿ ಉತ್ಪನ್ನವಾದರೆ ಆಶ್ಚರ್ಯವಾಗಲಿಕ್ಕಿಲ್ಲ.

(ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ

೨. ಮಹಾರಾಷ್ಟ್ರದ ವಿಶಾಲಗಡದ ಮೇಲೆ ಅನಧಿಕೃತ ಅತಿಕ್ರಮಣ ಮಾಡುವವರನ್ನು ಬೆಂಬಲಿಸುವ (?) ಮುಂಬಯಿ ಉಚ್ಚ ನ್ಯಾಯಾಲಯದ ತೀರ್ಪು

ವಿಶಾಲಗಡ ಹಾಗೂ ಇನ್ನಿತರ ಎಲ್ಲ ಕೋಟೆಗಳ ಮೇಲೆ ಮತಾಂಧರು ಅತಿಕ್ರಮಣ ಮಾಡಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ಜೀವಿತಾವಧಿಯಲ್ಲಿ ೫ ಜನ ಮುಸಲ್ಮಾನ ಬಾದಶಾಹರನ್ನು ಮಣ್ಣುಮುಕ್ಕಿಸಿ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದರು. ಅವರ ಕೋಟೆಗಳ ಮೇಲೆ ಮುಸಲ್ಮಾನರು ಅತಿಕ್ರಮಣ ಮಾಡಿದ್ದಾರೆ ಎನ್ನುವುದನ್ನು ನಂಬಲು ಸಾಧ್ಯವಿಲ್ಲ; ಆದರೆ ಪುರಾತತ್ತ್ವ ವಿಭಾಗವು ಮತಾಂಧರ ವಿಷಯದಲ್ಲಿ ಬಾಲವನ್ನು ಅಡಿಗೆ ಹಾಕಿ ಕುಳಿತುಕೊಳ್ಳುತ್ತದೆ. ಅದರ ಪರಿಣಾಮದಿಂದ ಮತಾಂಧರು ಅಫ್ಝಲಖಾನ, ರೆಹಾನಬಾಬಾ ಇವರ ಗೋರಿಯನ್ನು ವಿಸ್ತಾರಗೊಳಿಸಿದರು ಹಾಗೂ ವಿವಿಧ ಕೋಟೆಗಳ ಮೇಲೆ ಅನಧಿಕೃತವಾಗಿ ಅತಿಕ್ರಮಣ ಮಾಡಿ ಅವುಗಳನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದರು. ಇವುಗಳಲ್ಲಿ ಒಂದಾಗಿರುವ ವಿಶಾಲಗಡದಲ್ಲಿನ ಅತಿಕ್ರಮಣವನ್ನು ಆಡಳಿತದವರು ತೆರವುಗೊಳಿಸಬೇಕೆಂದು ಎಲ್ಲ ಹಿಂದೂಗಳು ಕಾನೂನುಮಾರ್ಗವನ್ನು ಅವಲಂಬಿಸಿದರು. ಕೆಲವು ಹಿಂದೂಗಳು ಅತಿಕ್ರಮಣವನ್ನು ಕೆಡವಿದರು. ಅನಂತರ ಮುಸಲ್ಮಾನರ ಮೇಲೆ ಹೇಗೆ ಅನ್ಯಾಯವಾಯಿತು, ಎನ್ನುವ ಗೋಳಾಟ ಆರಂಭವಾಯಿತು. ಅನಂತರ ತಕ್ಷಣ ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಲಾಯಿತು. ಅರ್ಜಿದಾರರ ಕೇಂದ್ರಬಿಂದು ಯಾವುದು ? ಅವರಿಗೆ ಮತ್ತು ಅರ್ಜಿಗೆ ಏನು ಸಂಬಂಧ ? ಹಾಗೂ ನ್ಯಾಯಾಲಯಕ್ಕೆ ಬರುವಾಗ ಸ್ವಚ್ಛ ಕೈಗಳಿಂದ ಬರಬೇಕು’, ಎನ್ನುವ ತತ್ತ್ವವನ್ನು ಕಾಲಿನಡಿ ತುಳಿಯಲಾಯಿತು. ಇವೆಲ್ಲ ಅತಿಕ್ರಮಣಗಳು ಸರಕಾರಿ ಭೂಮಿ, ವಾಸ್ತು, ಪುರಾತತ್ತ್ವ ವಿಭಾಗದ ಅಧೀನದಲ್ಲಿರುವ ವಾಸ್ತುಗಳು ಮತ್ತು ಕೋಟೆಗಳ ಮೇಲಿವೆ. ಈ ಅತಿಕ್ರಮಣಗಳನ್ನು ಕೆಡವದಂತೆ ರದ್ದತಿಯನ್ನು ನೀಡಿ ನ್ಯಾಯಾಲಯವು ಮತಾಂಧರಿಗೆ ಅತಿಕ್ರಮಣಕ್ಕೆ ಅನುಮತಿಯನ್ನೇ ನೀಡಿದೆ, ಎಂದು ಧರ್ಮಪ್ರೇಮಿ ಹಿಂದೂಗಳಿಗೆ ಅನಿಸಿದರೆ, ತಪ್ಪೇನು ? ಯಾವಾಗಲೂ ಉಚ್ಚ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಲು ಬಹಳಷ್ಟು ಪ್ರಯತ್ನ ಮಾಡಬೇಕಾಗುತ್ತದೆ. ಅನಂತರ ಅರ್ಜಿದಾರರ ಮುಂದೆ ಅನೇಕ ಪ್ರಶ್ನೆಗಳನ್ನಿಡಲಾಗುತ್ತದೆ. ಆ ಮೇಲಾದರೂ ಅವರ ಪರವಾಗಿ ಎಲ್ಲಿ ಆದೇಶ ನೀಡಲಾಗುತ್ತದೆಯೇ; ಇಲ್ಲ. ಆದರೆ ಇಲ್ಲಿ ಮತಾಂಧರಿಗೆ ಆಶ್ವಾಸನೆಯೇ ಸಿಕ್ಕಿ ಬಿಡುತ್ತದೆಯಲ್ಲ ? ಎನ್ನುವ ಸಂಶಯ ಜನಸಾಮಾನ್ಯರ ಮನಸ್ಸಿನಲ್ಲಿ ಬರುತ್ತದೆ. ಇತ್ತೀಚೆಗೆ ಮತಾಂಧರ ಮೇಲೆ ಅನ್ಯಾಯವಾಗುತ್ತಿದೆ ಎಂದು ವಿವಿಧ ಮಾಧ್ಯಮಗಳಿಂದ ಬೊಬ್ಬೆ ಹೊಡೆಯಲಾಗುತ್ತದೆ. ಕೊನೆಗೆ ಅವರಿಗೆ ಕೇವಲ ನ್ಯಾಯಾಲಯಗಳಿಂದ ಮಾತ್ರ ಆಧಾರ ಸಿಗಬಹುದು ಎನ್ನುವ ಚಿತ್ರಣವನ್ನು ಬಣ್ಣಿಸಲಾಗುತ್ತದೆ. ಈ ಎಲ್ಲ ವಿಷಯಗಳಿಂದ ಮತಾಂಧರಿಗೆ ಮಾತ್ರ ಅನುಕೂಲಕರ ಪರಿಣಾಮವಾಗುತ್ತದೆ ಎಂಬುದೇ ಇಂದಿನ ವರೆಗಿನ ಅನುಭವವಾಗಿದೆ.

೩. ಅಂಗಡಿಗಳು ಮತ್ತು ಉಪಹಾರಗೃಹಗಳ ನಾಮಫಲಕದ ಮೇಲೆ ಮಾಲೀಕನ ಹೆಸರನ್ನು ಬರೆಯುವ ನಿರ್ಣಯಕ್ಕೆ ಸರ್ವೋಚ್ಚ ನ್ಯಾಯಾಲಯದ ತಡೆಯಾಜ್ಞೆ !

ಉತ್ತರಾಖಂಡ, ಉತ್ತರಪ್ರದೇಶ, ಮಧ್ಯಪ್ರದೇಶದಲ್ಲಿನ ಭಾಜಪ ಸರಕಾರಗಳಿಂದ ಕಾವಡ ಯಾತ್ರೆಯ ಮಾರ್ಗದಲ್ಲಿನ ಅಂಗಡಿಯವರು ಹೆಸರಿನ  ಫಲಕ ಬರೆಯಬೇಕೆಂದು ಆದೇಶ ನೀಡಲಾಯಿತು. ಈ ಆದೇಶದ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸ ಲಾಯಿತು. ಅದನ್ನು ಸರ್ವೋಚ್ಚ ನ್ಯಾಯಾಲಯ ಸಂವಿಧಾನದ ಪರಿಚ್ಛೇದ ೩೨ ನ್ನು ಉಪಯೋಗಿಸಿ ತಕ್ಷಣ ಸ್ವೀಕರಿಸಿತು. ಅಷ್ಟು ಮಾತ್ರವಲ್ಲ, ಅದಕ್ಕೆ ತಡೆಯಾಜ್ಞೆಯನ್ನೂ ನೀಡಿತು. ಈ ಅರ್ಜಿದಾರರು ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಮಾಡದೆ ನೇರವಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗುವಂತಹ ಯಾವ ಆಪತ್ತು ನಿರ್ಮಾಣವಾಗಿತ್ತು ? ಹೆಚ್ಚಿನ ಎಲ್ಲ ಪ್ರಕರಣಗಳಲ್ಲಿ ಉಚ್ಚ ನ್ಯಾಯಾಲಯದಲ್ಲಿ ಅಥವಾ ದಿವಾಣಿ ನ್ಯಾಯಾಲಯಕ್ಕೆ ಹೋಗಲು ಹೇಳಲಾಗುತ್ತದೆ. ಇಲ್ಲಿ ಮಾತ್ರ ಕಥಿತ ಅನ್ಯಾಯದ ವಿರುದ್ಧ ನ್ಯಾಯವ್ಯವಸ್ಥೆ ತಕ್ಷಣ ಸಹಾಯಕ್ಕಾಗಿ ಓಡೋಡಿ ಬಂದಿದೆ ಎಂದು ಧರ್ಮಪ್ರೇಮಿ ಹಿಂದೂಗಳಿಗೆ ಅನಿಸುತ್ತದೆ.

ಇತ್ತೀಚೆಗೆ ಹಿಂದೂಗಳ ಎಲ್ಲ ಆಹಾರಪದಾರ್ಥಗಳಲ್ಲಿ ‘ಉಗುಳು ಜಿಹಾದ್’ ನಡೆಸಲಾಗುತ್ತಿದೆ. ಬಹುಶಃ ಸರ್ವೋಚ್ಚ ನ್ಯಾಯಾಲಯಕ್ಕೆ ‘ಉಗುಳು ಜಿಹಾದ್‌’ನ ಚಿತ್ರಸುರುಳಿಗಳ ಮಾಹಿತಿ ಇಲ್ಲವೆಂದು ಅನಿಸುತ್ತದೆ.

೪. ಮಂದಿರದ ಪಕ್ಕದಲ್ಲಿ ನಿರ್ಮಿಸಿದ ಶೌಚಾಲಯದ ವಿರುದ್ಧದ ಅರ್ಜಿಯನ್ನು ಆಲಿಸಲು ಮಧ್ಯಪ್ರದೇಶದ ಉಚ್ಚ ನ್ಯಾಯಾಲಯದ ನಿರಾಕರಣೆ !

ಹಿಂದೂಗಳು ತಮ್ಮ ನ್ಯಾಯಕ್ಕಾಗಿ ನ್ಯಾಯಾಲಯಕ್ಕೆ ಹೋದಾಗ ಅವರಿಗೆ ಬೇರೆಯೆ ನಿಯಮವನ್ನು ಹೇರಲಾಗುತ್ತದೆ. ಹಿಂದೂಗಳ ಶ್ರದ್ಧೆಯ ವಿಷಯದಲ್ಲಿನ ಖಟ್ಲೆಗಳಲ್ಲಿ ಹಸ್ತಕ್ಷೇಪ ಮಾಡಲು ನ್ಯಾಯಾಲಯಗಳಿಗೆ ಉತ್ಸಾಹ ಇರುವುದಿಲ್ಲ. ಗಾಡರವಾರಾ (ಮಧ್ಯಪ್ರದೇಶ)ದಲ್ಲಿನ ನಗರಪಾಲಿಕೆ ಹನುಮಾನ ಮಂದಿರದ ಪಕ್ಕದಲ್ಲಿ ಸುಲಭ ಶೌಚಾಲಯವನ್ನು ನಿರ್ಮಿಸಿತು. ಅದರಿಂದ ಜನರ ಆರೋಗ್ಯಕ್ಕೆ ಹೇಗೆ ಆಪಾಯವಾಗಬಹುದು, ಎಂಬ ವಿಷಯದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದಲ್ಲಿ ಒಂದು ಅರ್ಜಿಯನ್ನು ದಾಖಲಿಸಲಾಯಿತು. ಈ ಅರ್ಜಿಯನ್ನು ಮಧ್ಯಪ್ರದೇಶ ಉಚ್ಚ ನ್ಯಾಯಾಲಯ ನಿರಾಕರಿಸಿತು. ಇಲ್ಲಿ ನ್ಯಾಯಾಧೀಶರು, ‘ಅರ್ಜಿದಾರರ ಕ್ರಿಮಿನಲ್‌ ಹಿನ್ನೆಲೆ ಇರುವುದರಿಂದ ನಾವು ಈ ಅರ್ಜಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ’ ಎಂದರು. ನ್ಯಾಯಾಲಯದ ಈ ನಿರ್ಣಯಪತ್ರ ಮತ್ತು ಮೇಲೆ ನೀಡಿರುವ ಇನ್ನಿತರ ನಿರ್ಣಯಪತ್ರಗಳು ಎಷ್ಟು ಅಸಂಬದ್ಧವಾಗಿವೆ, ಅದೇ ರೀತಿ ಅವು ತಮ್ಮ ಇಚ್ಛೆಗನುಸಾರ ಹೇಗೆ ನಿರ್ಣಯ ನೀಡುತ್ತಾರೆ, ಎಂಬುದು ಇದರಿಂದ ಧರ್ಮಪ್ರೇಮಿ ಹಿಂದೂಗಳ ಗಮನಕ್ಕೆ ಬರುತ್ತದೆ.’ (೩೧.೭.೨೦೨೪)

(ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ