ಅಮೇರಿಕಾದಿಂದ ರಷ್ಯಾ ಮತ್ತು ಚೀನಾ ದೇಶಗಳ 400ಕ್ಕಿಂತ ಹೆಚ್ಚು ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ನಿರ್ಬಂಧ!

ರಷ್ಯಾ ಉಕ್ರೇನ್ ಮೇಲೆ ನಡೆಸಿದ ದಾಳಿಯನ್ನು ಬೆಂಬಲಿಸುವವರ ಮೇಲೆ ನಿರ್ಬಂಧ

ವಾಷಿಂಗ್ಟನ – ಅಮೇರಿಕೆಯ ರಾಷ್ಟ್ರಾಧ್ಯಕ್ಷ ಜೋ ಬೈಡನ ಅವರ ಸರಕಾರವು ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ದಾಳಿಯನ್ನು ಬೆಂಬಲಿಸಿದ ರಷ್ಯಾ ಮತ್ತು ಚೀನಾದ 400 ಕ್ಕಿಂತ ಅಧಿಕ ವ್ಯಕ್ತಿ ಮತ್ತು ಸಂಸ್ಥೆಗಳ ಮೇಲೆ ನಿರ್ಬಂಧ ಹೇರಿದೆ. ನಿರ್ಬಂಧದ ಪಟ್ಟಿಯಲ್ಲಿ ರಷ್ಯಾದ ರಕ್ಷಣ ಸಚಿವ ಆಂದ್ರೆ ಬೆಲೊಸೊವ್ ಇವರ ಪುತ್ರ ಪಾವೆಲ ಬೆಲೊಸೊವ್ ಇವರು ಸೇರಿದಂತೆ ಇತರೆ 34 ರಷ್ಯನ್ ವ್ಯಕ್ತಿಗಳ ಹೆಸರುಗಳಿವೆ. ರಷ್ಯಾ ಮತ್ತು ಚೀನಾ ಸೇರಿದಂತೆ ಅಮೇರಿಕಾವು ಬೆಲಾರೂಸ, ಇಟಲಿ, ತುರ್ಕಿ, ಆಸ್ಟ್ರಿಯಾ ಲಿಕ್ಟೆನ್ ಸ್ಟಾಯಿನ್ ಮತ್ತು ಸ್ವಿಟ್ಜರ್ಲೆಂಡ್ ಈ ದೇಶಗಳ ನಾಗರಿಕರ ಮೇಲೆಯೀ ನಿರ್ಬಂಧ ಹೇರಿದೆ.

1. ಅಮೇರಿಕಾದ ನಿರ್ಬಂಧದ ಪಟ್ಟಿಯಲ್ಲಿ ಆ ದೇಶಗಳ 123 ಸಂಸ್ಥೆಗಳನ್ನು ಸೇರಿಸಲಾಗಿದೆ. ಇವುಗಳಲ್ಲಿ ರಷ್ಯಾ ಅಥವಾ ಉಕ್ರೇನ್‌ನ ಕ್ರೈಮಿಯಾ ಪ್ರದೇಶದಲ್ಲಿನ 63 ಸಂಸ್ಥೆಗಳು, ಹಾಂಗ್ ಕಾಂಗ್ ಸೇರಿದಂತೆ ಚೀನಾದ 42 ಸಂಸ್ಥೆಗಳು ಮತ್ತು ತುರ್ಕಿಯೆ, ಇರಾನ್ ಮತ್ತು ಸೈಪ್ರಸ್‌ನಲ್ಲಿರುವ 14 ಸಂಸ್ಥೆಗಳು ಸೇರಿವೆ.

2. ‘ಉಕ್ರೇನ್‌ನ ಸ್ವಾತಂತ್ರ್ಯವನ್ನು ರಕ್ಷಿಸುತ್ತಿರುವಾಗ ಅಮೇರಿಕಾ ಉಕ್ರೇನ್‌ಗೆ ಬೆಂಬಲ ನೀಡುವುದನ್ನು ಮುಂದುವರಿಸುತ್ತದೆ’ ಎಂದು ಅಮೇರಿಕಾದ ಹಣಕಾಸು ಇಲಾಖೆ ಹೇಳಿದೆ.

3. ಈ ನಿರ್ಧಾರವನ್ನು ತೆಗೆದುಕೊಂಡಿದ್ದಕ್ಕಾಗಿ ಉಕ್ರೇನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯವರು ಅಮೇರಿಕಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಅಮೇರಿಕಾ ಈ ರೀತಿ ನಿರ್ಧರಿಸಿ ರಷ್ಯಾದ ಇಂಧನ ಮತ್ತು ಇಂಧನ ಕ್ಷೇತ್ರಗಳನ್ನು ಗುರಿಯಾಗಿಸಿದೆಯೆಂದು ಎಂದು ಅವರು ಹೇಳಿದರು.