ಕೇಂದ್ರ ಸರಕಾರದ ಶ್ಲಾಘನೀಯ ನಿರ್ಣಯ !

ಈಗಿನ ಪ್ರಸ್ತುತ ಇಂಗ್ಲಿಷ್ ಶಿಕ್ಷಣ ಪದ್ಧತಿ ಬದಲಾಯಿಸಿ ಅದು ಕೂಡ ಸಂಪೂರ್ಣವಾಗಿ ಭಾರತೀಯ ಮಾಡುವುದಕ್ಕಾಗಿ ಕ್ರಮ ಕೈಗೊಳ್ಳಬೇಕು !

ನವ ದೆಹಲಿ – ದೇಶದಲ್ಲಿನ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ, ವಿಶೇಷವಾಗಿ ವೈದ್ಯಕೀಯ ಕಾಲೇಜುಗಳಲ್ಲಿ ನಡೆಯುವ ದೀಕ್ಷಾಂತ ಸಮಾರಂಭಗಳಲ್ಲಿ ವಿದ್ಯಾರ್ಥಿಗಳಿಗೆ ಕಪ್ಪು ಅಂಗಿ ಮತ್ತು ಟೋಪಿ ಹಾಕಿಕೊಳ್ಳುವ ಆವಶ್ಯಕತೆ ಇಲ್ಲ. ಕೇಂದ್ರ ಆರೋಗ್ಯ ಸಚಿವಾಲಯದಿಂದ ಒಂದು ಆದೇಶದ ಮೂಲಕ ಎಲ್ಲಾ ಕೇಂದ್ರ ಆಸ್ಪತ್ರೆಗಳಲ್ಲಿ ದೀಕ್ಷಾಂತ ಸಮಾರಂಭದಲ್ಲಿ ಈ ಬ್ರಿಟಿಷ ವಸಾಹತವಾದಿ ಚಿಹ್ನೆಗಳನ್ನು ಅವಲಂಬಿಸುವ ಬದಲು ಭಾರತೀಯ ಉಡುಪು ಧರಿಸಲು ಆದೇಶ ನೀಡಲಾಗಿದೆ.

ಆರೋಗ್ಯ ಸಚಿವಾಲಯವು, ಕಪ್ಪು ಅಂಗಿ ಮತ್ತು ಟೋಪಿ ಹಾಕಿಕೊಳ್ಳುವುದು, ಇದು ವಸಾಹತಶಾಹಿ ಕಾಲದ ಪರಂಪರೆ ಆಗಿದೆ. ಇದು ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ಇಲ್ಲ. ದೀಕ್ಷಾಂತ ಸಮಾರಂಭದಲ್ಲಿ ಧರಿಸುವ ಉಡುಪು ಈ ಸಂಸ್ಥೆ ಯಾವ ರಾಜ್ಯದಲ್ಲಿದೆ, ಆ ರಾಜ್ಯದಲ್ಲಿನ ಉಡುಪು ಮತ್ತು ಪರಂಪರೆ ಇದರ ಮೇಲೆ ಆಧಾರಿತವಾಗಿರಬೇಕು. ಈಗ ಈ ವಸಾಹತವಾದಿ ಪರಂಪರೆ ಬದಲಾಯಿಸುವ ಆವಶ್ಯಕತೆ ಇದೆ. ಈ ನಿರ್ಣಯ ಎಂದರೆ ಭಾರತದ ವಸಾಹತಶಾಹಿ ಪರಂಪರೆಯಿಂದ ದೂರ ಸರಿಯುವ ದಿಶೆಗೆ ಹಾಕಿರುವ ಮೊದಲ ಹೆಜ್ಜೆ ಆಗಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಈಗ ದೀಕ್ಷಾಂತ ಸಮಾರಂಭದಲ್ಲಿ ಬ್ರಿಟಿಷಕಾಲದ ಕಪ್ಪು ಅಂಗಿಯಲ್ಲಿ (ಗೌನ್ನಲ್ಲಿ) ಅಲ್ಲದೆ, ಭಾರತೀಯ ಉಡುಪಿನಲ್ಲಿ ನಡೆಯಲಿದೆ !