ಉಕ್ರೇನ್‌ನಲ್ಲಿ ವ್ಯಾಪಾರ ಮಾಡಲು ಭಾರತೀಯ ಕಂಪನಿಗಳಿಗೆ ಅವಕಾಶ ನೀಡುವೆವು ! – ಅಧ್ಯಕ್ಷ ಝೆಲೆನ್ಸ್ಕಿ

ಕೀವ್ (ಉಕ್ರೇನ್) – ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಆಗಸ್ಟ್ 23 ರಂದು ಕೀವ್ ನಲ್ಲಿ ಭೇಟಿಯಾದರು. ಈ ಭೇಟಿಯ ವೇಳೆ ಭಾರತದಲ್ಲಿ ತಯಾರಾದ ಉತ್ಪನ್ನಗಳನ್ನು ಉಕ್ರೇನ್ ಖರೀದಿಸಲಿದೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ಕೀವ್ ನಲ್ಲಿ ಭಾರತೀಯ ಸಂಸ್ಥೆಗಳಿಗೆ ವ್ಯಾಪಾರ ಮಾಡಲು ಅವಕಾಶ ನೀಡುವ ಮೂಲಕ ಉಕ್ರೇನ್ ಭಾರತದೊಂದಿಗೆ ಸಂಪರ್ಕ ಸಾಧಿಸಲು ಸಹ ಸಿದ್ಧವಿದೆ. ನಾವು ಭಾರತದಲ್ಲಿ ನಮ್ಮ ಕಂಪನಿಗಳನ್ನು ಸ್ಥಾಪಿಸಲು ಬಯಸುತ್ತೇವೆ ಎಂದು ಹೇಳಿದರು.

ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯನ್ನು ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನಿಸಿದರು. ಈ ಬಗ್ಗೆ ಭಾರತೀಯ ಪತ್ರಕರ್ತರೊಬ್ಬರು ಕೇಳಿದಾಗ, ಝೆಲೆನ್ಸ್ಕಿ, ನಾನು ಭಾರತಕ್ಕೆ ಭೇಟಿ ನೀಡಲು ಯೋಜಿಸುತ್ತಿದ್ದೇನೆ; ಏಕೆಂದರೆ ನೀವು ಒಂದು ದೇಶದೊಂದಿಗೆ ಕಾರ್ಯತಂತ್ರದ ಪಾಲುದಾರಿಕೆ ಮತ್ತು ಮಾತುಕತೆಯನ್ನು ಪ್ರಾರಂಭಿಸಿದಾಗ, ನೀವು ಸಮಯವನ್ನು ವ್ಯರ್ಥ ಮಾಡುವುದನ್ನು ತಪ್ಪಿಸಬೇಕು ಎಂದು ನಾನು ಭಾವಿಸುತ್ತೇನೆ. ಹಾಗಾಗಿ ನಾವು ಮತ್ತೆ ಒಟ್ಟಿಗೆ ಸೇರುವುದು ಉತ್ತಮ ಎಂದು ನಾನು ಭಾವಿಸುತ್ತೇನೆ. ನಾವು ಭಾರತದಲ್ಲಿ ಭೇಟಿಯಾದರೆ ನನಗೆ ಸಂತೋಷವಾಗುತ್ತದೆ. ನಾನು ನಿಮ್ಮ ದೊಡ್ಡ ಮತ್ತು ಮಹಾನ್ ದೇಶದ ಬಗ್ಗೆ ಸಾಕಷ್ಟು ಓದಿದ್ದೇನೆ. ಅದು ತುಂಬಾ ಆಸಕ್ತಿದಾಯಕವಾಗಿದೆ; ಆದರೆ ನಿಮ್ಮ ದೇಶವನ್ನು ನೋಡಲು ನನಗೆ ಸದ್ಯ ಸಮಯವಿಲ್ಲದಿರುವುದು ಕಳವಳಕಾರಿಯಾಗಿದೆ; ಏಕೆಂದರೆ ಯುದ್ಧದ ಸಮಯದಲ್ಲಿ ಬೇರೆ ಏನನ್ನೂ ನೋಡಲು ನನಗೆ ಸಮಯವಿಲ್ಲ ಎಂದು ಅವರು ಖೇದ ವ್ಯಕ್ತಪಡಿಸಿದರು.