Conversion Jihad: ಬಡ ಹಿಂದೂ ಮಹಿಳೆಗೆ ಆಮಿಷವೊಡ್ಡಿ ಇಸ್ಲಾಂ ಸ್ವೀಕರಿಸಲು ಅನಿವಾರ್ಯ ಗೊಳಿಸುವುದು ಗಂಭೀರ ಘಟನೆ ! – ಕರ್ನಾಟಕ ಉಚ್ಚನ್ಯಾಯಾಲಯ

ಬೆಂಗಳೂರು – ಓರ್ವ ಅಮಾಯಕ ಮತ್ತು ಬಡ ಮಹಿಳೆಗೆ ಆಮಿಷವೊಡ್ಡಿ ಬಲವಂತವಾಗಿ ಇಸ್ಲಾಂ ಸ್ವೀಕರಿಸಲು ಅನಿವಾರ್ಯಗೊಳಿಸುವುದು ಒಂದು ಗಂಭೀರ ಘಟನೆಯಾಗಿದೆ. ಇಂತಹ ಘಟನೆಗಳನ್ನು ತಡೆಯಲು ನ್ಯಾಯಾಲಯಗಳು ಜಾಗೃತವಾಗಿವೆ. ‘ಸಮಾಜದ ಮುಗ್ಧ ಮತ್ತು ವಂಚಿತ ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸುತ್ತವೆ’ ಎಂಬ ಸಂದೇಶವನ್ನು ಸಮಾಜಕ್ಕೆ ರವಾನಿಸುವುದು ಅಗತ್ಯವಾಗಿದೆಯೆಂದು ಹೇಳುತ್ತಾ ಕರ್ನಾಟಕ ಉಚ್ಚ ನ್ಯಾಯಾಲಯವು ಹಿಂದೂ ಮಹಿಳೆಯ ಮೇಲೆ ಬಲಾತ್ಕಾರ ನಡೆಸಿ ಇಸ್ಲಾಂ ಧರ್ಮ ಸ್ವೀಕರಿಸುವಂತೆ ಅನಿವಾರ್ಯಗೊಳಿಸಿದ ಪ್ರಕರಣದಲ್ಲಿ ರಫೀಕ ಬೇಪಾರಿ ಹೆಸರಿನ ಮುಸಲ್ಮಾನನಿಗೆ ಜಾಮೀನು ನೀಡಲು ನಿರಾಕರಿಸಿದೆ.

ರಫೀಕ್ ಬೇಪಾರಿ ಮೊದಲು ಓರ್ವ ಹಿಂದೂ ಮಹಿಳೆಯೊಂದಿಗೆ ಸಾಮಿಪ್ಯ ಸಾಧಿಸಿದನು ಮತ್ತು ನಂತರ ಅವಳೊಂದಿಗೆ ಸ್ನೇಹ ಬೆಳಸಿದನು. ರಫೀಕ್ ಹಿಂದೂ ಮಹಿಳೆಗೆ ‘ಉದ್ಯೋಗ ಕೊಡಿಸುತ್ತೇನೆ’ ಎಂದು ಹೇಳುತ್ತಿದ್ದನು. ಇದಕ್ಕಾಗಿ ರಫೀಕ್ ತನ್ನ ಜೊತೆ ಬರುವಂತೆ ಮಹಿಳೆ ಮೇಲೆ ಒತ್ತಡ ಹೇರಿದ್ದನು. ರಫೀಕ್ ಮಹಿಳೆಯನ್ನು ನಿರಂತರವಾಗಿ ಲೈಂಗಿಕ ಶೋಷಣೆ ನೀಡಿದನು. ನಂತರ ರಫೀಕ್ ಆಕೆಯನ್ನು ಬಲವಂತವಾಗಿ ಬೆಳಗಾವಿಗೆ ಕರೆದೊಯ್ದು ಅಲ್ಲಿ ಒಂದು ಸ್ಥಳದಲ್ಲಿ ಬಂಧಿಸಿಟ್ಟನು. ಮಹಿಳೆ ಎಲ್ಲಿಗೂ ಹೋಗಬಾರದು ಎಂದು ಅಲ್ಲಿ ಇನ್ನೊಬ್ಬ ಮಹಿಳೆಯನ್ನು ಕಾವಲುಗಾರಳಾಗಿ ಇರಿಸಿದನು. ಸಂತ್ರಸ್ತ ಹಿಂದೂ ಮಹಿಳೆ ಹಲವಾರು ದಿನಗಳ ಕಾಲ ಇಲ್ಲಿಯೇ ಬಂಧಿಯಾಗಿದ್ದಳು. ಬೆಳಗಾವಿಯಲ್ಲಿ ಅನೇಕ ಬಾರಿ ಈ ಮಹಿಳೆಯ ಮೇಲೆ ಬಲಾತ್ಕಾರವಾಯಿತು. ತದನಂತರ ರಫೀಕನು ಹಿಂದೂ ಮಹಿಳೆಗೆ ಮದುವೆಯಾಗಲು ಇಸ್ಲಾಂ ಧರ್ಮವನ್ನು ಸ್ವೀಕರಿಸುವಂತೆ ಅನಿವಾರ್ಯಗೊಳಿಸಿದನು. ಕೆಲವು ದಿನಗಳ ಬಳಿಕ ಮಹಿಳೆಯು ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋದಳು. ಮತ್ತು ಎಲ್ಲ ಘಟನೆಯನ್ನು ಗಂಡನಿಗೆ ತಿಳಿಸಿದಳು. ತದನಂತರ ಮಹಿಳೆಯು ರಫೀಕ ವಿರುದRemove term: ಕನ್ನಡ ಸಾಪ್ತಾಹಿಕ ವರ್ಷ 25 ಸಂಚಿಕೆ 51 ಕನ್ನಡ ಸಾಪ್ತಾಹಿಕ್ಧ ಬಲಾತ್ಕಾರ ಮತ್ತು ಅನಧಿಕೃತವಾಗಿ ಮತಾಂತರಗೊಳಿಸಿರುವ ದೂರನ್ನು ನೀಡಿದಳು.

ಸಂಪಾದಕೀಯ ನಿಲುವು

ಉಚ್ಚ ನ್ಯಾಯಾಲಯವು ಮತಾಂತರ ವಿರೋಧಿ ಕಠಿಣ ಕಾನೂನು ಜಾರಿಗೊಳಿಸುವಂತೆ ಕೇಂದ್ರ ಸರಕಾರಕ್ಕೆ ಆದೇಶಿಸಬೇಕು ಎಂದೇ ಹಿಂದೂಗಳಿಗೆ ಅನಿಸುತ್ತದೆ !