1992 ರಅಜ್ಮೇರ (ರಾಜಸ್ಥಾನ)ಲೈಂಗಿಕ ದೌರ್ಜನ್ಯದ ಪ್ರಕರಣ
ಅಜ್ಮೇರ(ರಾಜಸ್ಥಾನ) – 1992 ರಲ್ಲಿ ಅಂದರೆ 32 ವರ್ಷಗಳ ಹಿಂದೆ ದೇಶದಲ್ಲಿ ನಡೆದ ಅತಿದೊಡ್ಡ ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ, ಜಿಲ್ಲಾ ನ್ಯಾಯಾಲಯವು ಆರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 5 ಲಕ್ಷ ರೂಪಾಯಿಗಳ ದಂಡದ ಶಿಕ್ಷೆಯನ್ನು ವಿಧಿಸಿದೆ. ನಫೀಸ್ ಚಿಶ್ತಿ, ನಸೀಮ್ ಉರ್ಫ ಟಾರ್ಜನ್, ಸಲೀಂ ಚಿಶ್ತಿ, ಇಕ್ಬಾಲ್ ಭಾಟಿ, ಸೋಹಿಲ್ ಗನಿ ಮತ್ತು ಸೈಯದ್ ಜಮೀರ್ ಹುಸೇನ್ ಇವರ ಹೆಸರುಗಳಾಗಿವೆ. ತೀರ್ಪು ನೀಡಿದ ಸಮಯದಲ್ಲಿ ಆರೋಪಿಗಳೆಲ್ಲ ನ್ಯಾಯಾಲಯದಲ್ಲಿ ಹಾಜರಿದ್ದರು. ಈ ಆರೋಪಿಗಳ ಮೇಲೆ 2001ರ ಜೂನ್ 23ರಂದು ಆರೋಪಪತ್ರವನ್ನು ದಾಖಲಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ಜುಲೈ 2024ರಲ್ಲಿ ಪೂರ್ಣಗೊಂಡಿತು. (1992ರ ಪ್ರಕರಣದ ಆರೋಪಪತ್ರವು 9 ವರ್ಷಗಳ ಬಳಿಕ ದಾಖಲಾಗುತ್ತದೆ ಮತ್ತು ವಿಚಾರಣೆ 2024ರಲ್ಲಿ ಪೂರ್ಣವಾಗುತ್ತದೆ. ಇದು ಭಾರತೀಯ ವ್ಯವಸ್ಥೆಗೆ ನಾಚಿಕೆಗೇಡು !- ಸಂಪಾದಕರು) 1992ರಲ್ಲಿ 100ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿನಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಅವರ ನಗ್ನ ಛಾಯಾಚಿತ್ರಗಳನ್ನು ಪ್ರಸಾರ ಮಾಡಿದ್ದ ಎಲ್ಲೆಡೆ ಸಂಚಲನ ಮೂಡಿಸಿತ್ತು. ಈ ಪ್ರಕರಣದಲ್ಲಿ ಒಟ್ಟು 18 ಆರೋಪಿಗಳಿದ್ದರು. ಇದರಲ್ಲಿ 4 ಜನರಿಗೆ ಈಗಾಗಲೇ ಶಿಕ್ಷೆಯಾಗಿದೆ, ಹಾಗೆಯೇ 4 ಜನರನ್ನು ಉಚ್ಚನ್ಯಾಯಾಲಯವು ಖುಲಾಸೆಗೊಳಿಸಿದೆ. 30 ವರ್ಷಗಳ ಹಿಂದೆ ಓರ್ವ ಆರೋಪಿಯು ಆತ್ಮಹತ್ಯೆ ಮಾಡಿಕೊಂಡಿದ್ದನು. 2 ಆರೋಪಿಗಳ ವಿರುದ್ಧ ಮಕ್ಕಳ ಮೇಲೆ ಅತ್ಯಾಚಾರ ಮಾಡಿದ ಅಪರಾಧವನ್ನು ದಾಖಲಿಸಲಾಗಿತ್ತು. ಈ ಪೈಕಿ ಒಬ್ಬನಿಗೆ ಶಿಕ್ಷೆಯಾಗಿದ್ದು, ಮತ್ತೊಬ್ಬನ ವಿರುದ್ಧ ಪ್ರಕರಣ ನಡೆಯುತ್ತಿದೆ.
ಅಪರಾಧಿ ಅಂದಿಬ ಕಾಂಗ್ರೆಸ್ಸಿನ ಪದಾಧಿಕಾರಿ !
ಈ ಅಪರಾಧದ ಸೂತ್ರಧಾರನು ಅಜಮೇರ ಯುವ ಕಾಂಗ್ರೆಸ್ಸಿನ ಆಗಿನ ಅಧ್ಯಕ್ಷ ಫಾರೂಕ್ ಚಿಶ್ತಿ, ನಫೀಸ್ ಚಿಶ್ತಿ (ಅಂದಿನ ಯುವ ಕಾಂಗ್ರೆಸ್‌ನ ಜಂಟಿ ಕಾರ್ಯದರ್ಶಿ), ಅನ್ವರ್ ಚಿಶ್ತಿ (ಅಂದಿನ ಯುವ ಕಾಂಗ್ರೆಸ್ ಉಪಾಧ್ಯಕ್ಷ) ಮತ್ತು ಇತರ ಆರೋಪಿಗಳು ಓರ್ವ ಉದ್ಯಮಿಯ ಪುತ್ರನೊಂದಿಗೆ ಸ್ನೇಹ ಬೆಳೆಸಿದ್ದರು. ಅವನ ಮೇಲೆ ಬಲಾತ್ಕಾರ ಮಾಡಿ ಅವನ ಛಾಯಾಚಿತ್ರಗಳನ್ನು ತೆಗೆದಿದ್ದರು. ಅವನನ್ನು ಬ್ಲಾಕ್‌ಮೇಲ್ ಮಾಡಿದ ನಂತರ ಅವನ ಸ್ನೇಹಿತೆಗೆ `ಪೌಲ್ಟ್ರಿ ಫಾರ್ಮ’ನಲ್ಲಿ ತಂದು ಅವಳ ಮೇಲೆ ಬಲಾತ್ಕಾರ ಮಾಡಿದರು. ಅವಳ ನಗ್ನ ಛಾಯಾಚಿತ್ರಗಳನ್ನು ತೆಗೆದಿದ್ದರು. ಅವಳಿಗೂ ಅವಳ ಸ್ನೇಹಿತೆಯರನ್ನು ಅವರ ಬಳಿಗೆ ಕರೆದುಕೊಂಡು ಬರುವಂತೆ ಒತ್ತಡ ಹೇರಿದರು. ತದನಂತರ ಅವರು ಒಬ್ಬರ ನಂತರ ಒಬ್ಬರಂತೆ ಅನೇಕ ಹುಡುಗಿಯರ ಮೇಲೆ ಬಲಾತ್ಕಾರ ಮಾಡಿ ಆ ಹುಡುಗಿಯರ ನಗ್ನ ಛಾಯಾಚಿತ್ರಗಳನ್ನು ತೆಗೆದರು. ತದನಂತರ ಅವರನ್ನು ಬೇರೆ ಬೇರೆ ಸ್ಥಳಕ್ಕೆ ಕರೆಸಿ ಬ್ಲಾಕ್ ಮೇಲ್ ಮಾಡಲು ಪ್ರಾರಂಭಿಸಿದರು. ಇದರಲ್ಲಿ 6 ಹುಡುಗಿಯರು ಆತ್ಮಹತ್ಯೆ ಮಾಡಿಕೊಂಡಿದ್ದರು.
ಸಂಪಾದಕೀಯ ನಿಲುವುಇಷ್ಟು ಗಂಭೀರ ಪ್ರಕರಣವನ್ನು 32 ವರ್ಷಗಳ ನಂತರ ತೀರ್ಪು ಬರುವುದು ಇದು ನ್ಯಾಯವಲ್ಲ, ಅನ್ಯಾಯವೇ ಆಗಿದೆ ! |