ಮೆರವಣಿಗೆಯಲ್ಲಿನ ಶ್ರೀರಾಮ ಮಂದಿರ ರಾರಾಜಿಸಿದ್ದರಿಂದ ಭಾರತೀಯ ಮೂಲದ ಅಮೇರಿಕನ್ ಮುಸ್ಲಿಮರು ಭಾಗವಹಿಸಲಿಲ್ಲ !
ನ್ಯೂಯಾರ್ಕ್ (ಅಮೇರಿಕಾ) – ಅಮೇರಿಕಾದಲ್ಲಿ ವಾಸಿಸುವ ಅನಿವಾಸಿ ಭಾರತೀಯರು ಆಗಸ್ಟ್ 18 ರಂದು ಭಾರತದ ಸ್ವಾತಂತ್ರ್ಯ ದಿನವನ್ನು ಅತ್ಯಂತ ವೈಭವದಿಂದ ಆಚರಿಸಿದರು. ಈ ನಿಮಿತ್ತದಿಂದ ನ್ಯೂಯಾರ್ಕ್‌ನಲ್ಲಿ 42ನೇ `ಭಾರತ ದಿನಾಚರಣೆ ಮೆರವಣಿಗೆ’ (ಇಂಡಿಯಾ ಡೇ ಪರೇಡ) ಅನ್ನು ಆಯೋಜಿಸಿದ್ದರು; ಆದರೆ ಆ ಆಂದೋಲನದಲ್ಲಿ ಶ್ರೀರಾಮ ಮಂದಿರವನ್ನು ತೋರಿಸಿದ್ದಕ್ಕೆ ವಿವಾದ ನಿರ್ಮಾಣವಾಯಿತು.
ಭಾರತೀಯ ಅಮೆರಿಕನ್ ಮುಸ್ಲಿಮರು ‘ಮುಸ್ಲಿಂ ವಿರೋಧಿ’ ಎನ್ನುತ್ತಾ ಅದನ್ನು ತೆಗೆದುಹಾಕಬೇಕೆಂದು ಒತ್ತಾಯಿಸುತ್ತಿದ್ದರು; ಆದರೆ ಆಯೋಜಕರು ಈ ಕೋರಿಕೆಯನ್ನು ಧಿಕ್ಕರಿಸಿ, ಈ ಮೆರವಣಿಗೆಯಲ್ಲಿ ಈ ಪ್ರತಿಕೃತಿಯನ್ನು ಸಮಾವೇಶಗೊಳಿಸಿದ್ದರು. ಭಾರತೀಯ ಅಮೇರಿಕನ್ ಮುಸಲ್ಮಾನರನ್ನು ಪ್ರತಿನಿಧಿಸುವ ಒಂದು ಗುಂಪು ಶ್ರೀರಾಮಮಂದಿರವನ್ನು ಪ್ರತಿಕೃತಿಯನ್ನು ಸಮಾವೇಶಗೊಳಿಸಿರುವುದನ್ನು ನಿಷೇಧಿಸಿ ಈ ಮೆರವಣಿಗೆಯಿಂದ ತಮ್ಮ ಪ್ರತಿಕೃತಿಯನ್ನು ಹಿಂಪಡೆದಿದ್ದರು. ಹಾಗೆಯೇ ಈ ಗುಂಪಿನ ಸದಸ್ಯರು ಇದರಲ್ಲಿ ಭಾಗವಹಿಸುವುದರಿಂದ ಹಿಂದಕ್ಕೆ ಸರಿದರು.
ಶ್ರೀರಾಮ ಮಂದಿರದ ಪ್ರತಿಕೃತಿ ಹೇಗಿತ್ತು?
ಶ್ರೀರಾಮಮಂದಿರದ ಪ್ರತಿಕೃತಿಗಾಗಿ 18 ಅಡಿ ಉದ್ದ, 9 ಅಡಿ ಅಗಲ ಮತ್ತು 8 ಅಡಿ ಎತ್ತರದ ಮರದ ದೋಣಿಯನ್ನು ಸಿದ್ಧಪಡಿಸಲಾಗಿತ್ತು. ಅದನ್ನು ಭಾರತದಲ್ಲಿ ತಯಾರಿಸಲಾಗಿತ್ತು ಮತ್ತು ವಿಮಾನದಲ್ಲಿ ಅಮೇರಿಕಕ್ಕೆ ಕಳುಹಿಸಲಾಗಿತ್ತು. ಈ ದೋಣಿಯಲ್ಲಿ ಅಯೋಧ್ಯೆಯ ಭಗವಾನ್ ಶ್ರೀರಾಮನಿಗೆ ಬಳಸಿದ ಗುಲಾಬಿ ಮರಳಿನ ಕಲ್ಲುಗಳನ್ನು ಬಳಸಿ ಸಣ್ಣ ಶ್ರೀರಾಮ ಮಂದಿರವನ್ನು ತೋರಿಸಲಾಗಿತ್ತು. ಶ್ರೀರಾಮಮಂದಿರವನ್ನು ಹೂವುಗಳಿಂದ ಅಲಂಕರಿಸಲಾಗಿತ್ತು. ಹಾಗೆಯೇ ಶ್ರೀರಾಮ ಲಲ್ಲಾನ ಪ್ರತಿಕೃತಿಯನ್ನೂ ದೋಣಿಯಲ್ಲಿ ಇಡಲಾಗಿತ್ತು.
ಈ ಮೆರವಣಿಗೆಯಲ್ಲಿ ನಟ ಸಂಸದ ಮನೋಜ್ ತಿವಾರಿ, ನಟಿ ಸೋನಾಕ್ಷಿ ಸಿನ್ಹಾ ಮತ್ತು ನಟ ಪಂಕಜ್ ತ್ರಿಪಾಠಿ ಭಾಗವಹಿಸಿದ್ದರು.
India Day Parade held in New York, showcases Shri Ram Mandir float despite protest
Indian American Mu$l!ms withdrew its float from the Parade following the inclusion of the Shri Ram Mandir float#IndiaDayParade #JaiSriRam #Hinduphobia@USHindus @CoHNAOfficial pic.twitter.com/HfZMKibtN2
— Sanatan Prabhat (@SanatanPrabhat) August 19, 2024