ಮುಜಾಫ್ಫರ್‌ಪುರ (ಬಿಹಾರ) – ಉತ್ತರ ಪ್ರದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ಲವ್ ಜಿಹಾದಿಗಳು ಅಥವಾ ಇತರ ಕ್ರಿಮಿನಲ್‌ಗಳ ಅಕ್ರಮ ಮನೆಗಳನ್ನು ಬುಲ್ಡೋಜರ್‌ಗಳ ಮೂಲಕ ನೆಲಸಮಗೊಳಿಸಲಾಗುತ್ತಿದ್ದು, ಇದೀಗ ಬಿಹಾರ ಸರ್ಕಾರವೂ ಸಹ ಅದೇ ಕ್ರಮ ಕೈಗೊಂಡಿದೆ ಎಂದು ತಿಳಿದುಬಂದಿದೆ. ರಾಜ್ಯದ ಮುಜಾಫ್ಫರ್‌ಪುರದಲ್ಲಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಅತ್ಯಾಚಾರಿ ಸಂಜಯ್ ರಾಯನ ಮನೆಯನ್ನು ಪೊಲೀಸರು ಬುಲ್ಡೋಜರ್ ನಿಂದ ನೆಲಸಮಗೊಳಿಸಿದರು.
1. 7 ದಿನಗಳ ಹಿಂದೆ 5 ಮಂದಿ ಬಂದೂಕು ತೋರಿಸಿ ಅಪ್ರಾಪ್ತ ಬಾಲಕಿಯನ್ನು ಆಕೆಯ ಮನೆಯಿಂದ ಅಪಹರಿಸಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಸಾಯಿಸಿದ್ದರು. ಘಟನೆ ನಡೆದ ಎರಡನೇ ದಿನ ಸಂತ್ರಸ್ತೆಯ ಶವ ಬೆತ್ತಲೆಯಾಗಿ ಪತ್ತೆಯಾಗಿತ್ತು.
2. ಪ್ರಮುಖ ಆರೋಪಿ ಸಂಜಯ ರಾಯ ಸೇರಿದಂತೆ 5 ಆರೋಪಿಗಳು ತಲೆಮರೆಸಿಕೊಂಡಿದ್ದು, ಕಳೆದ 7 ದಿನಗಳಿಂದ ಪೊಲೀಸರಿಗೆ ಯಾರನ್ನೂ ಬಂಧಿಸಲು ಸಾಧ್ಯವಾಗಿಲ್ಲ. (ಇದು ಪೋಲೀಸರ ದಕ್ಷತೆ! ಇಂತಹ ಪೊಲೀಸರನ್ನು ಜನತೆಯ ಹಣದಿಂದ ಏಕೆ ಪೋಷಿಸಬೇಕು ! – ಸಂಪಾದಕರು)
3. ನ್ಯಾಯಾಲಯದ ಆದೇಶದಂತೆ ಪೊಲೀಸ್ ಅಧಿಕಾರಿ ಕುಮಾರ ಚಂದನ ಅವರು ಸಂಜಯನ ಮನೆಗೆ ಜಾಹೀರಾತು ಅಂಟಿಸಿ, ‘ಆಗಸ್ಟ್ 17ರ ಮಧ್ಯಾಹ್ನ 12 ಗಂಟೆಯೊಳಗೆ ಆರೋಪಿಗಳು ಪೊಲೀಸರ ಮುಂದೆ ಶರಣಾಗದಿದ್ದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು’ ಎಂದು ಘೋಷಿಸಿದ್ದರು. ಈ ಎಚ್ಚರಿಕೆಯ ನಂತರವೂ ಆರೋಪಿ ಶರಣಾಗದ ಕಾರಣ ಪೊಲೀಸರು ಬುಲ್ಡೋಜರ್‌ನಿಂದ ಸಂಜಯ ರಾಯನ ಮನೆಯನ್ನು ಕೆಡವಿದರು.
ಸಂಪಾದಕೀಯ ನಿಲುವುಉತ್ತರ ಪ್ರದೇಶದಲ್ಲಿ ಇಂತಹ ಕ್ರಮ ಕೈಗೊಂಡರೂ ಸಹ ಈ ಘಟನೆಗಳು ನಿಂತಿಲ್ಲ. ಹಾಗಾಗಿ ಈಗ ಇಂತಹ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ಕಾನೂನು ತರಬೇಕು! ‘ಕಾನೂನು ಸುವ್ಯವಸ್ಥೆ ರಾಜ್ಯದ ಸಮಸ್ಯೆ’ ಎಂದು ಹೇಳುವ ಬದಲು ಕೇಂದ್ರ ಸರಕಾರವು ಇದಕ್ಕಾಗಿ ರಾಷ್ಟ್ರವ್ಯಾಪಿ ಕಾನೂನು ರೂಪಿಸಬೇಕು ಎಂಬುಡೇ ಆಕ್ರೋಶಿತ ಜನರ ಮನದ ಮಾತಾಗಿದೆ ! |