ಪೂರ್ಣಾವತಾರ ಭಗವಾನ ಶ್ರೀಕೃಷ್ಣನ ಯುದ್ಧತಂತ್ರ !

‘ಭಗವಾನ ಶ್ರೀಕೃಷ್ಣನು ತನ್ನ ಜೀವನ ಕಾಲದಲ್ಲಿ ಬೇರೆ ಬೇರೆ ಯುದ್ಧನೀತಿಗಳನ್ನು ಉಪಯೋಗಿಸಿದನು. ಈ ಯುದ್ಧನೀತಿಗಳ ಮಾಹಿತಿಯನ್ನು ನೀಡುವ ಲೇಖನವನ್ನು ಇಲ್ಲಿ ನೀಡುತ್ತಿದ್ದೇವೆ.

ಮಹಾಭಾರತ ಯುದ್ಧದ ಸಮಯದಲ್ಲಿ ದುರ್ಯೋಧನ ಮತ್ತು ಕರ್ಣನ ಬಳಿ ಇರುವ ವಿವಿಧ ಶಕ್ತಿ ಮತ್ತು ಆಯುಧಗಳ ಸಂಪೂರ್ಣ ಕಲ್ಪನೆ ಇದ್ದುದರಿಂದ ಭಗವಾನ ಶ್ರೀಕೃಷ್ಣನು ಒಂದು ಬೇರೆಯೇ ಯುದ್ಧತಂತ್ರವನ್ನು ರಚಿಸಿದನು. ಕರ್ಣನಿಗೆ ೨ ಶಾಪಗಳಿದ್ದವು. ಒಂದೆಂದರೆ ಅವನಿಗೆ ಆವಶ್ಯಕವಿದ್ದಾಗ ಬ್ರಹ್ಮಾಸ್ತ್ರವನ್ನು ಮರೆಯುವುದು ಮತ್ತು ಎರಡನೇಯದೆಂದರೆ ಭೂಮಿಯು ರಥಚಕ್ರವನ್ನು ನುಂಗುವುದು ! ಭಗವಾನ ಕೃಷ್ಣನಿಗೆ ಇವು ಗೊತ್ತಿದ್ದವು. ಮೊದಲು ಕರ್ಣನ ವಾಸವಿ ಶಕ್ತಿಯನ್ನು (ಅಜೇಯವಾದ ಭರ್ಚಿ) ದುರ್ಬಲಗೊಳಿಸುವುದು ಅತ್ಯಾವಶ್ಯಕವಾಗಿತ್ತು. ಇದಲ್ಲದೇ ಅವನ ಮನೋಧೈರ್ಯ ಕುಸಿಯಲು ಜನ್ಮರಹಸ್ಯವನ್ನು ಹೇಳುವುದು ಮತ್ತು ಅವನ್ನಲ್ಲಿದ್ದ ಪರಶುರಾಮಧನಸ್ಸನ್ನು ಕೆಳಗೆ ಇಡುವಂತೆ ಮಾಡಿ ಅವನನ್ನು ವಧಿಸುವುದು. ಶ್ರೀಕೃಷ್ಣನು ೩ ಸ್ತರಗಳಲ್ಲಿ ಈ ರೀತಿಯ ಯುದ್ಧ ತಂತ್ರವನ್ನು ರಚಿಸಿದನು.

ಅ. ಮೊದಲನೇಯದಾಗಿ ವಾಸವಿ ಶಕ್ತಿಯನ್ನು ದುರ್ಬಲಗೊಳಿಸುವುದು.

ಆ. ಎರಡನೇಯದಾಗಿ ಅವನ ಮನೋಧೈರ್ಯವನ್ನು ಕುಗ್ಗಿಸುವುದು.

ಇ. ಮೂರನೇಯದು ಪರಶುರಾಮಧನಸ್ಸನ್ನು ಕೆಳಗಿಡುವಂತೆ ಮಾಡಿ ಅವನನ್ನು ವಧಿಸುವುದು.

೧. ಕರ್ಣನಿಗೆ ಅವನ ಬಳಿ ಇರುವ ವಾಸವಿಶಕ್ತಿ ಬಳಸುವಂತೆ ಒತ್ತಡ ಹೇರುವುದು

ದುರ್ಯೋಧನನಿಗೆ ಅಲಾಯುಧ ಎಂಬ ಹೆಸರಿನ ಅಸುರ ಮಿತ್ರನಿದ್ದನು. ಅವನು ದುರ್ಯೋಧನನ ಸಹಾಯಕ್ಕೆ ಬಂದನು, ಆಗ ದುರ್ಯೋಧನನು ಯುದ್ಧವನ್ನು ರಾತ್ರಿಯ ಸಮಯದಲ್ಲಿಯೂ ಮುಂದುವರಿಸುವುದಾಗಿ ಘೋಷಿಸಿದನು. ಯಾವಾಗಲೂ ನಿಯಮಕ್ಕನುಸಾರ ಯುದ್ಧವು ಪ್ರತಿದಿನ ಸೂರ್ಯಾಸ್ತಕ್ಕೆ ಮುಗಿಯುತ್ತಿತ್ತು. ಅಲಾಯುಧ ಈ ಅಸುರನು ಸಹಾಯಕ್ಕೆ ಬಂದುದರಿಂದ ಅವನು ಈ ನಿಯಮವನ್ನು ಉಲ್ಲಂಘಿಸಿ ರಾತ್ರಿಯ ಸಮಯದಲ್ಲಿಯೂ ಯುದ್ಧವನ್ನು ಮಾಡಲು ನಿಶ್ಚಯಿಸಿದನು ಮತ್ತು ಆ ರೀತಿ ಘೋಷಣೆ ಮಾಡಿದನು. ಅಸುರರು ಮಾಯಾವಿ ವಿದ್ಯೆಯಲ್ಲಿ ನಿಪುಣರಾಗಿರುತ್ತಾರೆ ಮತ್ತು ರಾತ್ರಿ ಅವರ ಸಾಮರ್ಥ್ಯ ಎಷ್ಟೋ ಪಟ್ಟು ಹೆಚ್ಚುತ್ತದೆ. ಆದುದರಿಂದ ಅವರನ್ನು ಎದುರಿಸುವುದು ಅಸಾಧ್ಯವಾಗುತ್ತದೆ. ಈ ಅಸುರನೊಂದಿಗೆ ಯುದ್ಧ ಮಾಡಿ ಅವನ ನಾಶ ಮಾಡಬೇಕೆಂದರೆ ಅಷ್ಟೇ ಮಾಯಾವಿ ಶಕ್ತಿ ಇರುವ ಅಸುರನ ಆವಶ್ಯಕತೆ ಇದೆ ಎಂದು ಶ್ರೀಕೃಷ್ಣನಿಗೆ ಗೊತ್ತಿತ್ತು. ಆ ಸಮಯದಲ್ಲಿ ಶ್ರೀಕೃಷ್ಣನು ಭೀಮನಿಗೆ ಅವನ ಪುತ್ರ ಘಟೋತ್ಕಚನನ್ನು ಕರೆಯಲು ಹೇಳಿದನು. ಅದರಂತೆ ಭೀಮನು ಘಟೋತ್ಕಚನನ್ನು ಕರೆದ ತಕ್ಷಣ ಅವನು ಅಲ್ಲಿ ಕಾಣಿಸಿಕೊಂಡನು. ಅಲಾಯುಧ ಮತ್ತು ಘಟೋತ್ಕಚರ ನಡುವಿನ ಭೀಕರ ಮಾಯಾವಿ ಯುದ್ಧದಲ್ಲಿ ಘಟೋತ್ಕಜನು ಅಲಾಯುಧನನ್ನು ವಧಿಸಿದನು ಮತ್ತು ಅವನ ಮಹಾಪರಾಕ್ರಮದಿಂದ ಕೌರವ ಸೇನೆಯ ಮಹಾವಿನಾಶವಾಗಿ ಅವರು ಪಾಂಡವರ ಸೇನೆಗೆ ಸಮನಾದರು. ದುರ್ಯೋಧನನು ಹತಾಶನಾದನು. ಕರ್ಣನ ಸ್ಥಿತಿಯೂ ಅದೇ ರೀತಿಯಾಯಿತು. ಆಗ ದುರ್ಯೋಧನನು ಕರ್ಣನಿಗೆ ವಾಸವಿ ಶಕ್ತಿಯನ್ನು ಬಿಡಲು ಹೇಳಿದನು; ಆದರೆ ಕರ್ಣನು ಸಿದ್ಧನಿರಲಿಲ್ಲ, ಆಗ ದುರ್ಯೋಧನನು ಆವೇಶದಿಂದ ‘ನಾವೆಲ್ಲರೂ ನಾಶವಾದ ಮೇಲೆ ನೀನೇನು ಮಾಡುವೆ ?’, ಎಂದು ಕೊನೆಯ ಆದೇಶ ನೀಡಿದನು. ಆಗ ಕರ್ಣನು ವಾಸವಿ ಶಕ್ತಿಯನ್ನು ಬಿಟ್ಟು ಘಟೋತ್ಕಜನನ್ನು ವಧಿಸಿದನು. ಆ ಸಮಯದಲ್ಲಿ ಎಲ್ಲ ಪಾಂಡವರು ದುಃಖಿತರಾದರು ಮತ್ತು ಭಗವಾನ ಶ್ರೀಕೃಷ್ಣನು ಆನಂದವನ್ನು ವ್ಯಕ್ತಪಡಿಸಿದನು; ಏಕೆಂದರೆ ಅರ್ಜುನನಿಗೆ ಇರುವ ಅಪಾಯ ತಪ್ಪಿತು ಮತ್ತು ಕರ್ಣನ ಬಳಿಯಿರುವ ಏಕೈಕ ರಕ್ಷಣಾ ಆಯುಧವು ನಾಶವಾಯಿತು. ಇದರಿಂದ ಕರ್ಣನ ಸಾಮರ್ಥ್ಯ ಇತರ ಸಾಮಾನ್ಯ ಮಹಾರಥಿಯರಂತಾಯಿತು. ಇದು ಮೊದಲ ಮೆಟ್ಟಲು, ಅಂದರೆ ಯುದ್ಧನೀತಿಯು ಯಶಸ್ವಿಯಾಯಿತು.

೨. ಶ್ರೀಕೃಷ್ಣನು ಕರ್ಣನಿಗೆ ಕುಂತಿಯ ಬಳಿಗೆ ಹೋಗಲು ಹೇಳಿ ಅವನ ಮನೋಧೈರ್ಯವನ್ನು ಕುಗ್ಗಿಸುವುದು

ಈಗ ಇನ್ನೊಂದು ಆಟವೆಂದರೆ ಯುದ್ಧನೀತಿ ಎಂದು ಕರ್ಣನ ಮನೋಧೈರ್ಯವನ್ನು ಕುಗ್ಗಿಸುವುದು ! ಅದಕ್ಕಾಗಿ ಶ್ರೀಕೃಷ್ಣನು ಕುಂತಿಯನ್ನು ಕರ್ಣನ ಬಳಿಗೆ ಅವನ ಜನ್ಮರಹಸ್ಯವನ್ನು ಹೇಳಲು ಕಳುಹಿಸಿದನು ! ಕುಂತಿಯು ಆ ಜನ್ಮರಹಸ್ಯವನ್ನು ಹೇಳಿದ ನಂತರವೂ ಕರ್ಣನು ದುರ್ಯೋಧನನ ಪಕ್ಷವನ್ನು ಬಿಡಲು ಸಿದ್ಧನಾಗಲಿಲ್ಲ. ಅವನು ‘ಕೇವಲ ಅರ್ಜುನನನ್ನು ಬಿಟ್ಟು ನಿನ್ನ ೪ ಮಕ್ಕಳನ್ನು ನಾನು ವಧಿಸುವುದಿಲ್ಲ. ನಾನು ಮತ್ತು ಅರ್ಜುನ ಇವರಿಬ್ಬರ ಯುದ್ಧದಲ್ಲಿ ಯಾರಾದರೊಬ್ಬರಿಗೆ ಸಾವು ಬಂದರೂ ನಿನ್ನ ೫ ಪುತ್ರರು ಉಳಿಯುವರು’, ಎಂದು ಹೇಳಿದನು;  ಮನಸ್ಸಿನಿಂದ ಕುಗ್ಗಿದರೂ, ಅವನು ಅದನ್ನು ಬಹಿರಂಗಪಡಿಸಲಿಲ್ಲ. ಈ ಎರಡನೇ ಆಟವೂ ಯಶಸ್ವಿಯಾಯಿತು.

೩. ಶತ್ರುವಿನ ಆಕ್ರಮಣವನ್ನು ಹೇಗೆ ವಿಫಲಗೊಳಿಸಬೇಕು ? ಈ ಯುದ್ಧತಂತ್ರವನ್ನು ಕಲಿಸುವ ಶ್ರೀಕೃಷ್ಣ !

ಕರ್ಣ ಮತ್ತು ಅರ್ಜುನ ಇವರ ನಡುವಿನ ಯುದ್ಧದಲ್ಲಿ ಖಾಂಡವವನವು ಸುಟ್ಟು ಹೋಗಿದ್ದರಿಂದ ಕೋಪಗೊಂಡ ‘ತಕ್ಷಕ’ ನಾಗನು ಪಾಂಡವರ ಶತ್ರುವಾದನು ಮತ್ತು ಅವನು ಅರ್ಜುನನನ್ನು ಕಚ್ಚಿ ಕೊಲ್ಲಲು ಬಯಸಿದನು. ಅವನು ಆ ಅವಕಾಶದ ದಾರಿಯನ್ನು ಕಾಯುತ್ತಿದ್ದನು. ಆಗ ಅವನು ಕರ್ಣನಿಗೆ ತನ್ನ ವ್ಯಥೆಯನ್ನು ಹೇಳಿ ‘ನನ್ನನ್ನು ನಿನ್ನ ಬಾಣದ ಮೇಲೆ ಇರಿಸಿಕೋ ಮತ್ತು ಅದನ್ನು ಅರ್ಜುನನ ಮೇಲೆ ಬಿಡು. ಅಲ್ಲಿ ನಾನು ಅವನನ್ನು ಕಚ್ಚಿ ಕೊಲ್ಲುವೆನು ಮತ್ತು ನನ್ನ ಹಗೆಯನ್ನು ತೀರಿಸಿಕೊಂಡು ಧನ್ಯನಾಗುವೆನು’, ಎಂದು ಹೇಳಿದನು. ಕರ್ಣನು ಅದಕ್ಕೆ ಒಪ್ಪಿದನು; ಏಕೆಂದರೆ ‘ಶತ್ರುವಿನ ಶತ್ರು ಮಿತ್ರ’, ಈ ನ್ಯಾಯದಿಂದ ಮತ್ತು ಅವನು ವಾಸವಿಶಕ್ತಿಯನ್ನು ಕಳೆದುಕೊಂಡಿದ್ದರಿಂದ ಕರ್ಣನು ಒಪ್ಪಿದನು. ಅದರಂತೆ ಅವನು ತಕ್ಷಕನನ್ನು ಬಾಣದ ಮೇಲೆ ಕೂರಿಸಿಕೊಂಡು, ಆ ಅಸ್ತ್ರವನ್ನು ಅರ್ಜುನನ ಮೇಲೆ ಬಿಟ್ಟನು. ಬಹಳ ವೇಗದಿಂದ ‘ಬರುವ ಅಸ್ತ್ರದ ಮೇಲೆ ತಕ್ಷಕನಿದ್ದಾನೆ’, ಎಂದು ಶ್ರೀಕೃಷ್ಣನು ತಕ್ಷಣ ಗುರುತಿಸಿದನು ಮತ್ತು ‘ಅವನು ಅರ್ಜುನನ ಕಂಠವನ್ನು ಕಚ್ಚಲಿದ್ದಾನೆ ಎಂದು ಅವನ ಗಮನಕ್ಕೆ ಬಂದಿತು. ಸಕಾಲದಲ್ಲಿ ಶ್ರೀಕೃಷ್ಣನು ರಥದ ಅಶ್ವಗಳ ಮೇಲೆ ಭಾರವನ್ನು ನೀಡಿ ರಥವನ್ನು ಕೆಳಗೆ ಬಾಗಿಸಿದನು ಮತ್ತು ಆ ಬಾಣ ಅರ್ಜುನನ ಕಿರೀಟಕ್ಕೆ ತಾಗಿತು ಮತ್ತು ತಕ್ಷಕನ ವಿಷದಿಂದ ಕಿರೀಟವು ಸುಟ್ಟು ಕೆಳಗೆ ಬಿದ್ದಿತು. ಅರ್ಜುನನು ರಕ್ಷಿಸಲ್ಪಟ್ಟನು. ತಕ್ಷಕನಿಗೆ ನಿರಾಶೆಯಾಗಿ ಪುನಃ ಕರ್ಣನ ಬಳಿಗೆ ಹೋಗಿ ಬಾಣದ ಮೇಲೆ ಕೂರಿಸಿಕೊಳ್ಳಲು ವಿನಂತಿಸತೊಡಗಿದನು; ಆದರೆ ‘ನಾನು ಒಂದು ಅಸ್ತ್ರವನ್ನು ಒಂದೇ ಬಾರಿ ಪ್ರಯೋಗಿಸುತ್ತೇನೆ. ಒಂದೇ ಅಸ್ತ್ರವನ್ನು  ಪುನಃ ಪುನಃ ಪ್ರಯೋಗಿಸುವುದಿಲ್ಲ’, ಎಂದು ಕರ್ಣನು ಹೇಳಿದನು. ಇಲ್ಲಿ ಶ್ರೀಕೃಷ್ಣನು ‘ಶತ್ರುವಿನ ದಾಳಿಯನ್ನು ಹೇಗೆ ವಿಫಲಗೊಳಿಸ ಬೇಕು ?’, ಎಂಬ ಯುದ್ಧತಂತ್ರವನ್ನು ತೋರಿಸಿದನು. ಇದು ಅತ್ಯಂತ ಬುದ್ಧಿವಂತ ಮತ್ತು ಉತ್ತಮ ಯುದ್ಧತಂತ್ರವಾಗಿದ್ದು ಮರುದಾಳಿ ಮಾಡದೇ ಶತ್ರುವಿನ ದಾಳಿಯನ್ನು ನಿಷ್ಕ್ರಿಯ ಮಾಡುತ್ತದೆ !

೪. ಕರ್ಣನನ್ನು ಕೊಲ್ಲುವ ಸಮಯದಲ್ಲಿ ಶ್ರೀಕೃಷ್ಣನು ಬಳಸಿದ ಯುದ್ಧತಂತ್ರ !

ಈ ಕರ್ಣ-ಅರ್ಜುನರ ಯುದ್ಧದಲ್ಲಿ ಶ್ರೀಕೃಷ್ಣನು ಅರ್ಜುನನ ರಥವನ್ನು ಎಂತಹ ಭೂಮಿಯ ಮೇಲೆ ತೆಗೆದುಕೊಂಡು ಹೋದನೆಂದರೆ ಅದನ್ನು ಬೆಂಬತ್ತಿದ ಕರ್ಣನ ರಥ ದುರ್ಬಲ ಭೂಮಿಯಲ್ಲಿ ಸಿಕ್ಕಿಕೊಂಡಿತು. ಇದು ಆಟದ ಕೊನೆಯ ೩ ನೇ ಆಯೋಜನೆಯಾಗಿತ್ತು ! ಚಕ್ರವು ಸಿಕ್ಕಿ ಹಾಕಿಕೊಂಡಿದ್ದರಿಂದ ಕರ್ಣನು ಧನಸ್ಸನ್ನು ಇಟ್ಟು ರಥದ ಚಕ್ರವನ್ನು ತೆಗೆಯತೊಡಗಿದನು. ಅದೇ ಸಮಯಕ್ಕೆ ಶ್ರೀಕೃಷ್ಣನು ಅರ್ಜುನನಿಗೆ ಬಾಣ ಬಿಟ್ಟು ಅವನನ್ನು ವಧಿಸಲು ಆದೇಶ ನೀಡಿದನು. ‘ಇದು ಅಧರ್ಮ ವಾಗಿದೆ’, ಎಂದು ಕರ್ಣನು ಉದ್ಗರಿಸುತ್ತಲೇ ಭಗವಾನ ಶ್ರೀಕೃಷ್ಣನು ಅವನ ಎಲ್ಲ ದುಷ್ಕೃತ್ಯಗಳನ್ನು ತಕ್ಷಣ ತೆರೆದಿಟ್ಟು, ‘ಆಗ ಎಲ್ಲಿ ಹೋಗಿತ್ತು ರಾಧಾಸುತ (ರಾಧಾಳ ಮಗ) ನಿನ್ನ ಧರ್ಮ ?’, ಎಂದು ಹೇಳಿ ಅವನನ್ನು ನಿರುತ್ತರನನ್ನಾಗಿ ಮಾಡಿದನು ಮತ್ತು ಅದೇ ಕ್ಷಣ ಅರ್ಜುನನು ಬಾಣ ಬಿಟ್ಟು ಅವನನ್ನು ಕೊಂದನು. ಕರ್ಣ ರಥಚಕ್ರವನ್ನು ತೆಗೆಯುತ್ತಿರುವಾಗಲೇ ಅರ್ಜುನನಿಗೆ ಬಾಣ ಬಿಡುವ ಆದೇಶವನ್ನು ನೀಡುವ ಕಾರಣವೇನೆಂದರೆ, ‘ಒಂದು ವೇಳೆ ಅವನು ರಥಾರೂಢನಾಗಿ ಪರಶುರಾಮ ಧನಸ್ಸನ್ನು ಕೈಯಲ್ಲಿ ತೆಗೆದುಕೊಂಡಿದ್ದರೆ, ಅದನ್ನು ಜಗತ್ತಿನ ಯಾವುದೇ ಧನುರ್ಧರನು ಸೋಲಿಸಲು ಸಾಧ್ಯವಿಲ್ಲ, ಎಂದು ಅವನಿಗೆ ಪರಶುರಾಮರಿಂದ ವರ ಲಭಿಸಿತ್ತು’, ಶ್ರೀಕೃಷ್ಣನಿಗೆ ಇದು ಗೊತ್ತಿತ್ತು. ಕರ್ಣನು ನೆಲಕ್ಕೆ ಬಿದ್ದಾಗ ಅವನ ಅಗ್ನಿಸಂಸ್ಕಾರವನ್ನು ಭಗವಾನ ಶ್ರೀಕೃಷ್ಣನು ಮಾಡಿದನು; ಏಕೆಂದರೆ ಅವನ ದಾನಶೂರತ್ವ ಮತ್ತು ವೀರತ್ವವನ್ನೂ ಗಮನಕ್ಕೆ ತೆಗೆದುಕೊಳ್ಳಬೇಕು. ‘ಮರಣಾಂತಿ ವೈರಾಣಿ’ ಈ ಯುದ್ಧತಂತ್ರವನ್ನು ಶ್ರೀಕೃಷ್ಣನು ಇಲ್ಲಿ ತೋರಿಸಿದನು.

೫. ಶ್ರೀಕೃಷ್ಣನ ಆತ್ಮತತ್ತ್ವದ ಭಾಗ ಜಗನ್ನಾಥಪುರಿಯ ಶ್ರೀಕೃಷ್ಣನ ಮೂರ್ತಿಯಲ್ಲಿದೆ !

ಮುಂದೆ ಯಾದವಕುಲದ ನಾಶವನ್ನು ನೋಡಿದ ನಂತರವೇ ಶ್ರೀಕೃಷ್ಣನು ಅವತಾರವನ್ನು ಸಮಾಪ್ತಗೊಳಿಸಿದನು. ಪಾಂಡವರು ಅವನ ಪಾರ್ಥಿವವನ್ನು ಹುಡುಕಿ ತೆಗೆದು ಅಗ್ನಿಸಂಸ್ಕಾರವನ್ನು ಮಾಡಿದರು; ಆದರೆ ಅದರಲ್ಲಿ ಸುಡದ ಭಾಗವನ್ನು ಅವರು ಸಮುದ್ರದಲ್ಲಿ ವಿಸರ್ಜಿಸಿದರು. ಆ ಆತ್ಮತತ್ತ್ವದ ಭಾಗ ಮುಂದೆ ಜಗನ್ನಾಥಪುರಿಯ ರಾಜರಿಗೆ ದೊರಕಿತು ಮತ್ತು ಅದು ಅಲ್ಲಿನ ಶ್ರೀಕೃಷ್ಣನ ಮೂರ್ತಿಯಲ್ಲಿದೆ, ಎಂದು ಹೇಳುತ್ತಾರೆ; ಏಕೆಂದರೆ ಅದು ಅಮರ ಅಕ್ಷಯ ಈಶತತ್ತ್ವವಾಗಿದೆ !’

– ಶ್ರೀ. ವಸಂತ ಗೊಡಬೊಲೆ (ಆಧಾರ : ಅಜ್ಞಾತ)