Kolkata Hospital Murder Case : ತಮ್ಮನ್ನೇ ಕಾಪಾಡಿಕೊಳ್ಳಲಾಗದ ಪೊಲೀಸರು ವೈದ್ಯರನ್ನು ಹೇಗೆ ಕಾಪಾಡುವರು ? – ಕೊಲಕಾತಾ ಹೈಕೋರ್ಟ್

  • ಕೋಲಕಾತಾ ಆಸ್ಪತ್ರೆಯ ಧ್ವಂಸ ಪ್ರಕರಣ

  • ಮಮತಾ ಬ್ಯಾನರ್ಜಿ ಸರಕಾರ ಮತ್ತು ಪೊಲೀಸರಿಗೆ ಛೀಮಾರಿ ಹಾಕಿದ ಕೊಲಕಾತಾ ಹೈಕೋರ್ಟ್ !

ಕೊಲಕಾತಾ (ಬಂಗಾಳ) – ಆಸ್ಪತ್ರೆಯನ್ನು ಧ್ವಂಸಗೊಳಿಸಲು 7 ಸಾವಿರ ಜನರ ಗುಂಪು ಬಂದಾಗ ಪೊಲೀಸರು ಏನು ಮಾಡುತ್ತಿದ್ದರು ? ಪೊಲೀಸರಿಗೆ ತಮ್ಮನ್ನೇ ರಕ್ಷಿಸಿಕೊಳ್ಳಲು ಸಾಧ್ಯವಾಗದಿದ್ದರೆ ನೀವು ವೈದ್ಯರನ್ನು ಹೇಗೆ ರಕ್ಷಿಸುವಿರಿ?, ಎಂದು ಹೈಕೋರ್ಟ್ ಅಲ್ಲಿನ ರಾಜ್ಯ ಸರಕಾರ ಹಾಗೂ ಪೊಲೀಸರನ್ನು ಪ್ರಶ್ನಿಸಿದೆ.

ಆರ್.ಜಿ.ಕಾರ್ ವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲಿ ಆಗಸ್ಟ 14ರ ರಾತ್ರಿ ನಡೆದ ದಾಳಿಗೆ ಸಂಬಂಧಿಸಿದ ವಿಚಾರಣೆಯನ್ನು ಹೈಕೋರ್ಟ್ ನಡೆಸುತ್ತಿತ್ತು.

1. ಬಂಗಾಲ ಸರಕಾರದ ಪರವಾಗಿ ವಾದ ಮಂಡಿಸಿದ ನ್ಯಾಯವಾದಿಗಳು ನ್ಯಾಯಾಲಯದ ಈ ಪ್ರಶ್ನೆಗೆ ಉತ್ತರಿಸುತ್ತಾ, ಹಿಂಸಾಚಾರವನ್ನು ನಿಯಂತ್ರಿಸಲು ಅಶ್ರುವಾಯು ಪ್ರಯೋಗಿಸಲಾಯಿತು. ಈ ಹಿಂಸಾಚಾರದಲ್ಲಿ 15 ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಉಪ ಪೊಲೀಸ್ ಆಯುಕ್ತರು ಕೂಡ ಗಾಯಗೊಂಡಿದ್ದಾರೆ. ನೆರೆದ ಗುಂಪು ಪೊಲೀಸ್ ವಾಹನಗಳನ್ನು ಧ್ವಂಸಗೊಳಿಸಿತು ಎಂದು ತಿಳಿಸಿದರು.

2. ಈ ಬಗ್ಗೆ ಹೈಕೋರ್ಟ್, ಇಂತಹ ಸಮಯದಲ್ಲಿ 144ನೇ ವಿಧಿಯನ್ನು (ನಿಷೇಧಾಜ್ಞೆ) ಜಾರಿಗೊಳಿಸಬಹುದಿತ್ತು. ಹಾಗೆ ಮಾಡಿದ್ದರೆ ಒಂದೇ ಬಾರಿಗೆ 7 ಸಾವಿರ ಜನ ಸೇರಲು ಸಾಧ್ಯವಾಗುತ್ತಿರಲಿಲ್ಲ. ಇದು ರಾಜ್ಯ ಸರಕಾರದ ವೈಫಲ್ಯವಾಗಿದೆ. ಗೂಂಡಾಗಳು ಮೂರನೇ ಮಹಡಿಗೆ (ತರಬೇತಿ ಮಹಿಳಾ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆಯಾದ ಸ್ಥಳಕ್ಕೆ) ಹೋಗುವವರಿದ್ದರು. ಘಟನೆ ನಡೆದ ಸ್ಥಳ ಎರಡನೇ ಮಹಡಿಯಲ್ಲಿದೆ ಎಂದು ಅವರು ಭಾವಿಸಿದ್ದರು, ಹಾಗಾಗಿ ಅವರು ಬದುಕುಳಿದರು. ಇಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಆಸ್ಪತ್ರೆಯ ಘಟನಾಸ್ಥಳವನ್ನು ರಕ್ಷಿಸಲು ಪೊಲೀಸರು ಮತ್ತು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಇಂತಹ ಸಂದರ್ಭಗಳಲ್ಲಿ ನಾವು ಆಸ್ಪತ್ರೆಯನ್ನು ಮುಚ್ಚುತ್ತೇವೆ. ಎಲ್ಲರನ್ನೂ ವರ್ಗಾವಣೆ ಮಾಡುತ್ತೇವೆ. ಅಲ್ಲಿ ಎಷ್ಟು ಮಂದಿ ರೋಗಿಗಳಿದ್ದಾರೆ?

3. ಈ ಬಗ್ಗೆ ಸರಕಾರಿ ನ್ಯಾಯವಾದಿಗಳು ಉತ್ತರಿಸುತ್ತಾ, ಘಟನೆಗೂ ಪೊಲೀಸರಿಗೂ ಯಾವುದೇ ಸಂಬಂಧವಿಲ್ಲ. ಆಸ್ಪತ್ರೆಯಲ್ಲಿನ ಘಟನಾಸ್ಥಳ ಸುರಕ್ಷಿತವಾಗಿದೆ ಎಂದು ತಿಳಿಸಿದರು.

4. ಈ ಬಗ್ಗೆ ನ್ಯಾಯಾಲಯವು ಮಾತನಾಡಿ, ಸರಿ, ನಾವು ನಿಮ್ಮ ವಾದವನ್ನು ಒಪ್ಪುತ್ತೇವೆ. ನಗರದ ನಾಗರೀಕರಾದ ನಿಮಗೂ ಕೂಡ ಕಾಳಜಿ ಅನಿಸಬೇಕಿತ್ತು. ನನಗೆ ದುಃಖವಾಗುತ್ತಿದೆ, ನಿಮಗೂ ದುಃಖವಾಗಬೇಕು. ಆಸ್ಪತ್ರೆಯ ಧ್ವಂಸವನ್ನು ತಡೆಯಬಹುದಿತ್ತೇ?, ಎಂಬುದು ಪ್ರಶ್ನೆಯಾಗಿದೆ. ಈ ಉಧ್ವಂಸ ಯಾರು ಮಾಡಿದರು ಎಂಬುದು ನಂತರದ ವಿಷಯವಾಗಿದೆ. ಆಗಸ್ಟ್ 14ರಂದು ನಡೆದದ್ದು ಮತ್ತೊಮ್ಮೆ ಪುನರಾವರ್ತನೆಯಾದರೆ? ಪೊಲೀಸರು ಗಾಯಗೊಂಡು ಗುಂಪನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ, ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರಿಗೆ ಕರ್ತವ್ಯ ನಿರ್ವಹಿಸಲು ಸೂಕ್ತ ಭದ್ರತೆ ನೀಡಬೇಕು ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿತು.

ಸಂಪಾದಕೀಯ ನಿಲುವು

ಕೊಲಕಾತಾ ಹೈಕೋರ್ಟಿನ ಛೀಮಾರಿ, ಇದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರಕಾರಕ್ಕೆ ನಾಚಿಕೆಗೇಡಿನ ಸಂಗತಿ ! ಅವರು ಈ ಘಟನೆಯ ಹೊಣೆಯನ್ನು ಸ್ವೀಕರಿಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು !