ಅಲ್ಪಸಂಖ್ಯಾತರಿಗೆ ತೊಂದರೆ ನೀಡುವವರನ್ನು ಸುಮ್ಮನೆ ಬಿಡುವುದಿಲ್ಲ ! – ಬಾಂಗ್ಲಾದೇಶದಲ್ಲಿನ ಮಧ್ಯಂತರ ಸರಕಾರ

ಬಾಂಗ್ಲಾದೇಶದಲ್ಲಿನ ಮಧ್ಯಂತರ ಸರಕಾರದ ಆಶ್ವಾಸನೆ !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಿರುವವರ ಮೇಲೆ ಅಥವಾ ಅವರಿಗೆ ಕಿರುಕುಳ ನೀಡಿದವರ ಮೇಲೆ ತ್ವರಿತ ಮತ್ತು ಕಠಿಣ ಕ್ರಮ ಕೈಗೊಳ್ಳಲಾಗುವುದು, ಎಂದು ಇಲ್ಲಿಯ ಮಧ್ಯಂತರ ಸರಕಾರ ಆಶ್ವಾಸನೆ ನೀಡಿದೆ.

೧. ‘ಇಸ್ಕಾನ್ ನ ನಿಯೋಗ ಮಧ್ಯಂತರ ಸರಕಾರದಲ್ಲಿನ ಗೃಹ ಸಲಹೆಗಾರರಾಗಿರುವ ನಿವೃತ್ತ ಬ್ರಿಗೇಡಿಯರ್ ಜನರಲ್ ಎಂ. ಸಖಾವತ್ ಹುಸೇನ್ ಇವರನ್ನು ಇತ್ತೀಚಿಗೆ ಭೇಟಿ ಮಾಡಿತು. ಆ ಸಮಯದಲ್ಲಿ ಹುಸೇನ್ ಇವರು, ಬಾಂಗ್ಲಾದೇಶದಲ್ಲಿ ಸಾಮಾಜಿಕ ಸೌಹಾರ್ದತೆ ಇದೆ. ಇಲ್ಲಿ ಎಲ್ಲಾ ಧರ್ಮದ ಜನರು ಭೇದಭಾವವಿಲ್ಲದೆ ವಾಸಿಸುತ್ತಾರೆ. ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುವ ಯಾರನ್ನು ನಾವು ಬಿಡುವುದಿಲ್ಲ.

೨. ಈ ಭೇಟಿಯಲ್ಲಿ ‘ಇಸ್ಕಾನ್ ಬಾಂಗ್ಲಾದೇಶ’ದ ಅಧ್ಯಕ್ಷ ಸತ್ಯರಂಜನ್ ಬರೋಯಿ ಇವರು ಅಲ್ಪಸಂಖ್ಯಾತರ ರಕ್ಷಣೆಗೆ ಬೇಡಿಕೆ ಸಲ್ಲಿಸುತ್ತಾ, ಅದರ ಕುರಿತು ೮ ಪ್ರಸ್ತಾವ ಮಂಡಿಸಿದರು. ಅದರಲ್ಲಿ ನಿರ್ವಹಣೆ ಶಾಖೆ ಸ್ಥಾಪನೆ ಮಾಡುವುದರಿಂದ ಅಲ್ಪಸಂಖ್ಯಾತ ಆಯೋಗ ಸ್ಥಾಪನೆ ಮಾಡುವವರೆಗಿನ ಬೇಡಿಕೆಗಳು ಸಲ್ಲಿಸಿದೆ. ಜೊತೆಗೆ ದೇವಸ್ಥಾನಗಳಿಗೆ ಸ್ವತಂತ್ರ ಭದ್ರತೆ ಪೂರೈಸಬೇಕೆಂದು ಕೂಡ ಹೇಳಲಾಗಿದೆ. ಇದರ ಕುರಿತು ಹುಸೇನ್ ಇವರು ಎಲ್ಲಾ ಪ್ರಸ್ತಾವಗಳಿಗೆ ಬೆಂಬಲ ನೀಡುವ ಆಶ್ವಾಸನೆ ನೀಡಿದ್ದಾರೆ.

ಸಂಪಾದಕೀಯ ನಿಲುವು

  • ತಪ್ಪಿತಸ್ಥರ ಮೇಲೆ ಕೇವಲ ಕ್ರಮ ಕೈಗೊಂಡರೆ ಸಾಲದು, ಸಂತ್ರಸ್ತ ಹಿಂದುಗಳಿಗೆ ನಷ್ಟಪರಿಹಾರ ನೀಡುವುದು ಕೂಡ ಆವಶ್ಯಕವಾಗಿದೆ !
  • ಈ ಮಧ್ಯಂತರ ಸರಕಾರ ಎಲ್ಲಿಯವರೆಗೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವುದಿಲ್ಲವೋ, ಅಲ್ಲಿಯವರೆಗೆ ಹಿಂದೂ ಸಂಘಟನೆಗಳು ಅವರನ್ನು ಬೆಂಬೇತ್ತುವಿಕೆ ಮಾಡುತ್ತಾ ಸರಕಾರದ ಮೇಲೆ ಶಾಶ್ವತವಾಗಿ ಒತ್ತಡ ಇರಿಸಬೇಕು !