Kolkata Rape Case: ಕೋಲಕಾತಾದಲ್ಲಿ ಮಹಿಳಾ ಡಾಕ್ಟರ್ ಮೇಲಿನ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣ

ಸಮೂಹದಿಂದ ಘಟನೆ ನಡೆದ ಆರ್.ಜಿ. ಕಾರ್ ಆಸ್ಪತ್ರೆಯ ಧ್ವಂಸ

ಕೋಲಕಾತಾ (ಬಂಗಾಳ) – ಇಲ್ಲಿಯ ಆರ್. ಜಿ. ಕಾರ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಕೆಲವು ದಿನಗಳ ಹಿಂದೆ ತರಬೇತಿಗಾಗಿ ಬಂದಿದ್ದ ಮಹಿಳಾ ಡಾಕ್ಟರ್ ಮೇಲೆ ಬಲಾತ್ಕಾರ ಮಾಡಿ ಹತ್ಯೆ ಮಾಡಿರುವ ಘಟನೆಯಿಂದ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಕೋಲಕಾತಾ ಉಚ್ಚ ನ್ಯಾಯಾಲಯವು ಈ ಘಟನೆಯ ತನಿಖೆಯನ್ನು ಸಿಬಿಐಗೆ ಒಪ್ಪಿಸಿದ ನಂತರ ಮರು ದಿನವೇ ಈ ಆಸ್ಪತ್ರೆಯ ಮೇಲೆ ೪೦ ಕ್ಕೂ ಹೆಚ್ಚಿನ ಜನರ ಸಮೂಹವು ದಾಳಿ ಮಾಡಿ ಬಹಳಷ್ಟು ಧ್ವಂಸ ಮಾಡಿದೆ. ಆಗಸ್ಟ್ ೧೪ ರಂದು ತಡರಾತ್ರಿ ಈ ದಾಳಿ ನಡೆಸಲಾಗಿದೆ. ಇದರಲ್ಲಿ ಪೊಲೀಸರ ಮೇಲೆ ಕೂಡ ದಾಳಿ ನಡೆದಿದೆ. ಆ ಸಮಯದಲ್ಲಿ ದಾಳಿಕೊರರನ್ನು ಚದುರಿಸಲು ಪೊಲೀಸರು ಅಶ್ರುವಾಯುವನ್ನು ಉಪಯೋಗಿಸಿದರು. ಈ ಘಟನೆಯ ಮಾಹಿತಿ ದೊರೆಯುತ್ತಲೇ ಆಸ್ಪತ್ರೆಯ ಹೊರಗೆ ನೂರಾರು ಸಂಖ್ಯೆಯಲ್ಲಿ ಜನರು ಒಟ್ಟಾಗಿದ್ದರು. ಈ ದಾಳಿ ನಡೆಸಿದವರು ಯಾರು ? ಇದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ. ಅವರು ಪೊಲೀಸರಿಗೆ ಜೀವ ಬೆದರಿಕೆ ನೀಡುತ್ತಿದ್ದಾರೆಂದು ಪೊಲೀಸ ಆಯುಕ್ತರು ಪ್ರಸಾರ ಮಾಧ್ಯಮಗಳ ಜೊತೆಗೆ ಮಾತನಾಡುವಾಗ ಹೇಳಿದರು. ಇದರಿಂದ ದಾಳಿಕೋರರು ಪ್ರತಿಭಟನಾಕಾರರು ಆಗಿರಲಿಲ್ಲ, ಅವರು ಗೂಂಡಾಗಳಾಗಿದ್ದರು ಎಂದು ಗಮನಕ್ಕೆ ಬರುತ್ತದೆ. ಈ ದಾಳಿ ಮಹಿಳಾ ಡಾಕ್ಟರ್ ಮೇಲೆ ನಡೆದಿರುವುದು ಬಲತ್ಕಾರದ ಸಾಕ್ಷಿ ನಾಶ ಮಾಡುವುದಕ್ಕಾಗಿ ಬಂದಿದ್ದರು ಎಂಬ ಸಂದೇಹ ವ್ಯಕ್ತವಾಗುತ್ತಿದೆ.

ಆಗಸ್ಟ್ ೧೪ ರಾತ್ರಿ ೧೧.೫೫ ಕ್ಕೆ ‘ರಿಕ್ಲೆಮ ದ ನೈಟ್’ ಅಭಿಯಾನದ ಭಾಗ ಎಂದು ಆಸ್ಪತ್ರೆಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದರು. ಫಲಕ ಹಿಡಿದು ಸಂತ್ರಸ್ತಾಗೆ ನ್ಯಾಯ ದೊರಕಿಸಿಕೊಡುವುದಕ್ಕಾಗಿ ಆಗ್ರಹಿಸಿ ಸಮಾಜದ ಎಲ್ಲಾ ವರ್ಗದ ಸಾವಿರಾರು ಮಹಿಳೆಯರು ರಸ್ತೆಗೆ ಇಳಿದಿದ್ದರು. ಈ ಪ್ರತಿಭಟನೆಗಳು ಶಾಂತಿಯುತವಾಗಿ ನಡೆಯುತ್ತಿದ್ದವು; ಆದರೆ ಕೆಲವು ಸಮಯದಲ್ಲಿಯೇ ಈ ಪ್ರತಿಭಟನೆಯು ಹಿಂಸಾಚಾರದ ರೂಪ ತಾಳಿತು. ಅಲ್ಲಿ ಹಾಕಲಾದ ಬ್ಯಾರಿಕೆಟ ಅನ್ನು ಸಮೂಹವು ಬಲವಂತವಾಗಿ ಧ್ವಂಸಗೊಳಿಸಿ ಆಸ್ಪತ್ರೆಯಲ್ಲಿ ಪ್ರವೇಶಿಸಿದರು ಮತ್ತು ಧ್ವಂಸ ಮಾಡಿದರು. ಸಮೂಹದಿಂದ ಆಸ್ಪತ್ರೆಯ ಆಪತ್ಕಾಲದ ವಾರ್ಡಿನ ಹಾಗೂ ಹೊರಗೆ ನಿಂತಿರುವ ಪೊಲೀಸರ ಕೆಲವು ವಾಹನವನ್ನು ಕೂಡ ಧ್ವಂಸ ಮಾಡಿದರು. ಆದ್ದರಿಂದ ಸಮೂಹವನ್ನು ಚದರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದರು ಮತ್ತು ಅಶ್ರುವಾಯುವನ್ನು ಉಪಯೋಗಿಸಿದರು.

ಧ್ವಂಸದ ಕೃತ್ಯಕ್ಕೆ ಪ್ರತಿಭಟನೆಯೇ ಹೊಣೆ ! – ಪೊಲೀಸ ಆಯುಕ್ತ

ಕೋಲಕಾತಾ ಪೊಲೀಸ ಆಯುಕ್ತ ವಿನೀತ ಗೋಯಲ್

ಕೋಲಕಾತಾ ಪೊಲೀಸ ಆಯುಕ್ತ ವಿನೀತ ಗೋಯಲ್ ಇವರು ಈ ಧ್ವಂಸಕ್ಕೆ ಸಾಮಾಜಿಕ ಜಾಲತಾಣದಲ್ಲಿನ ಅಭಿಯಾನವೇ ಹೊಣೆ ಎಂದು ಹೇಳಿದರು. ಅವರು, ಇಲ್ಲಿ ಏನೆಲ್ಲಾ ನಡೆದಿದೆ ಅದು ಸಾಮಾಜಿಕ ಜಾಲತಾಣದಲ್ಲಿನ ತಪ್ಪಾದ ರೀತಿಯ ಅಭಿಯಾನದಿಂದ ನಡೆದಿದೆ, ಇದು ದುರದೃಷ್ಟಕರವಾಗಿದೆ ಎಂದು ಹೇಳಿದರು. ಕೋಲಕಾತಾ ಪೊಲೀಸರು ಏನು ಮಾಡಲಿಲ್ಲ ? ನಾವು ಈ ಪ್ರಕರಣದಲ್ಲಿ ಎಲ್ಲವೂ ಮಾಡಿದ್ದೇವೆ. ನಾವು ಮಹಿಳಾ ಡಾಕ್ಟರರ ಕುಟುಂಬದವರಿಗೆ ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದೇವೆ; ಆದರೆ ನಮ್ಮ ವಿರುದ್ಧವೇ ವದಂತಿಗಳು ಹಬ್ಬಿಸಲಾಗುತ್ತಿವೆ. ನಾನು ಬಹಳ ಅಸಮಾಧಾನಗೊಂಡಿದ್ದೇನೆ. ನಾವು ತಪ್ಪಾಗಿ ನಡೆದುಕೊಂಡಿಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಧ್ವಂಸ ಮಾಡಿ ಸಾಕ್ಷಿ ನಾಶ ಮಾಡುವ ಪ್ರಯತ್ನ ?
  • ಪೊಲೀಸರ ಉಪಸ್ಥಿತಿಯಲ್ಲಿ ಒಂದು ಆಸ್ಪತ್ರೆಯನ್ನು ಧ್ವಂಸಗೊಳಿಸಗುತ್ತದೆ, ಇದರಿಂದ ಬಂಗಾಳದ ಪೊಲೀಸರ ಬಗ್ಗೆ ಸಂದೇಹ ನಿರ್ಮಾಣವಾಗುತ್ತದೆ. ಪೊಲೀಸರು ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್ಸಿನ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಬಂಗಾಳದ ಜನರ ರಕ್ಷಣೆಗಾಗಿ ಅಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವುದೇ ಆವಶ್ಯಕವಾಗಿದೆ !