ಹಿಂದೂ ಪೋಷಕರಿಂದ ವಿರೋಧ
ಭರೂಚ (ಗುಜರಾತ) – ಇಲ್ಲಿಯ ಜಿ.ಎನ್.ಎಫ್.ಸಿ. ನರ್ಮದಾ ವಿದ್ಯಾಲಯದಲ್ಲಿ ಎಂಟನೆಯ ತರಗತಿ ವಿದ್ಯಾರ್ಥಿಗಳ ಪರೀಕ್ಷೆಯಲ್ಲಿ ಇಸ್ಲಾಂಗೆ ಸಂಬಂಧಿಸಿದ ಪ್ರಶ್ನೆಗಳ ಕೊಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಈ ಶಾಲೆಯಲ್ಲಿ ಆಗಸ್ಟ್ ೭ ರಂದು ಪರೀಕ್ಷೆಗಳು ನಡೆದಿದೆ. ಈ ಪರೀಕ್ಷೆಯಲ್ಲಿ ವಿವಾದಿತ ಪ್ರಶ್ನೆ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಇದಕ್ಕೆ ಹಿಂದೂ ಪೋಷಕರು ವಿರೋಧಿಸಿದ್ದಾರೆ. ಇದನ್ನು ನೋಡಿ ಕೆಲವರು, ಈ ಶಾಲೆ ಭಾರತದಲ್ಲಿ ಇದೆಯೋ ಅಥವಾ ಪಾಕಿಸ್ತಾನದಲ್ಲಿ ? ಎಂದು ಪ್ರಶ್ನೆ ಕೇಳುತ್ತಿದ್ದಾರೆ.
೧. ಒಂದು ವಾಕ್ಯದಲ್ಲಿ ಖಾಲಿ ಜಾಗ ತುಂಬಿಸುವುದಿತ್ತು. ಈ ವಾಕ್ಯ ದೇವರ ಇಚ್ಛೆ ಇದ್ದರೆ, ಆಗ ಪ್ರತಿಯೊಬ್ಬರೂ (—) ಓಡಿ ಹೋಗಬಹುದು’. ಎಂದು ಇತ್ತು. ಅದರ ಉತ್ತರದಲ್ಲಿ ಪರ್ಯಾಯದಲ್ಲಿ ಕಿಸ್ಮತ್ (ಹಣೆಬರಹದ ಪ್ರಕಾರ) ಮನ್ನತ (ಇಚ್ಛೆಯ ಪ್ರಕಾರ), ದಾವತ (ಔತಣಕ್ಕಾಗಿ) ಮತ್ತು ಆಫತ (ಕಷ್ಟಗಳಿಂದ) ಹೀಗೆ ಪದಗಳನ್ನು ನೀಡಿದ್ದರು.
೨. ಇನ್ನೊಂದು ಪ್ರಶ್ನೆಯಲ್ಲಿ ‘ಈದ್ ನಮಾಜದ ಸ್ಥಳದ ಹೆಸರು ಏನು ? ಎಂದು ಕೇಳಲಾಗಿತ್ತು. ಇದರಲ್ಲಿ ‘ಈದಬಾಗ, ಇದಮೇದಾನ, ಈದಘರ ಮತ್ತು ಈದಗಾಹ’ ಹೀಗೆ ಪರ್ಯಾಯ ನೀಡಲಾಗಿತ್ತು.
ಯಾವಾಗ ಮಕ್ಕಳು ಈ ಪ್ರಶ್ನೆ ಪತ್ರಿಕೆ ಮನೆಯಲ್ಲಿ ತೋರಿಸಿದರು ಆಗ ಪೋಷಕರು ಅದರ ಛಾಯಾಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡುತ್ತಾ ಮಕ್ಕಳಿಗೆ ಇಂತಹ ಪ್ರಶ್ನೆ ಕೇಳಿರುವುದರ ಕುರಿತು ವಿರೋಧ ವ್ಯಕ್ತಪಡಿಸಿದರು.
ಕೇವಲ ಸರಕಾರಿ ಪಠ್ಯ ಪುಸ್ತಕದಿಂದ ತೆಗೆದುಕೊಂಡಿರುವ ಪ್ರಶ್ನೆಗಳು ! – ಶಾಲೆಯ ಆಡಳಿತದಿಂದ ದಾವೆ
ಶಾಲೆಯ ಆಡಳಿತದ ಹೇಳಿಕೆಯ ಪ್ರಕಾರ, ಈ ಪ್ರಶ್ನೆಗಳು ಕೇವಲ ಸರಕಾರಿ ಪಠ್ಯಪುಸ್ತಕದಿಂದ ತೆಗೆದುಕೊಳ್ಳಲಾಗಿದ್ದು ಹೊರಗಿನ ವಿಷಯದ ಯಾವುದೇ ಪ್ರಶ್ನೆ ಕೇಳಲಾಗಿಲ್ಲ. ಇದರ ಹಿಂದೆ ಶಾಲೆ ಅಥವಾ ಶಿಕ್ಷಕರ ಯಾವುದೇ ಬೇರೆ ಉದ್ದೇಶ ಇರಲಿಲ್ಲ. ಈ ಪ್ರಕರಣದಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ಕೂಡ ಉತ್ತರ ಪ್ರಸ್ತುತಪಡಿಸಲಾಗಿದೆ ಎಂದು ಹೇಳಿದೆ.
ಸಂಪಾದಕೀಯ ನಿಲುವುಗುಜರಾತದಲ್ಲಿ ಅನೇಕ ವರ್ಷ ಭಾಜಪದ ಸರಕಾರ ಇರುವಾಗ ಈ ರೀತಿ ನಡೆಯಬಾರದು, ಎಂದು ಹಿಂದುಗಳಿಗೆ ಅನಿಸುತ್ತದೆ ! |