ದಾಳಿಯ ಹೊಣೆ ಹೊತ್ತ ಬಲೂಚಿಸ್ತಾನ ಲಿಬ್ರೇಶನ್ ಆರ್ಮಿ
ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಸ್ವಾತಂತ್ರ್ಯ ದಿನದ ಹಿಂದಿನ ದಿನದಂದು ಕ್ವೆಟ್ಟಾ ನಗರದಲ್ಲಿ ನಡೆದಿರುವ ಬಾಂಬ್ ಸ್ಫೋಟದಲ್ಲಿ ೩ ಜನರು ಸಾವನ್ನಪ್ಪಿದ್ದು ೬ ಜನರು ಗಾಯಗೊಂಡಿದ್ದಾರೆ. ಈ ಸ್ಫೋಟದ ಹೊಣೆಯನ್ನು ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುವ ‘ಬಲೂಚಿಸ್ತಾನ್ ಲಿಬರೇಷನ್ ಆರ್ಮಿ’ ವಹಿಸಿಕೊಂಡಿದೆ. ಬಲೂಚಿಸ್ತಾನದ ರಾಜಧಾನಿ ಕ್ವೆಟ್ಟದ ಲಿಯಾಕತ ಮಾರುಕಟ್ಟೆಯಲ್ಲಿ ಪಾಕಿಸ್ತಾನದ ರಾಷ್ಟ್ರಧ್ವಜ ಮಾರುತ್ತಿದ್ದ ಅಂಗಡಿಯ ಮೇಲೆ ಗ್ರಾನೈಟ್ ಎಸೆಯಲಾಗಿತ್ತು.
೧. ‘ಬಲೂಚಿಸ್ತಾನ ಲಿಬ್ರೇಶನ್ ಆರ್ಮಿ’ಯು, ನಾವು ಪರಿಸರದಲ್ಲಿನ ಅಂಗಡಿಯವನಿಗೆ ಧ್ವಜಮಾರಲು ನಿಷೇಧಿಸಿದ್ದೆವು. ಅಂಗಡಿಯವನು ಕೇಳಿಲಿಲ್ಲ, ಹಾಗಾಗಿ ದಾಳಿ ನಡೆಸಲಾಗಿದೆ.
೨. ಪಾಕಿಸ್ತಾನದಲ್ಲಿ ಆಗಸ್ಟ್ ೧೪ ಕ್ಕೆ ೭೮ ನೆ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ‘ಬಲೂಚಿಸ್ತಾನ್ ಲಿಬ್ರೇಶನ್ ಆರ್ಮಿ’ಯ ಜನರು ಆಗಸ್ಟ್ ೧೪ ರಂದು ರಜೆ ಕೊಡುವುದು ಬೇಡ ಎಂದು ಹೇಳಿದ್ದರು.
೩. ಇತ್ತೀಚಿನ ಸಮಯದಲ್ಲಿ ಬಲೂಚಿಸ್ತಾನದಲ್ಲಿ ಪಾಕಿಸ್ತಾನದ ಸ್ವಾತಂತ್ರ್ಯ ದಿನದಂದು ನಡೆಯುವ ದಾಳಿಯ ಘಟನೆ ಹೆಚ್ಚಾಗಿವೆ. ರಾಷ್ಟ್ರಧ್ವಜ ಮಾರುವ ಅಂಗಡಿಗಳನ್ನು ಗುರಿ ಮಾಡಲಾಗುತ್ತದೆ. ಆದ್ದರಿಂದ ಅನೇಕ ಅಂಗಡೀದಾರರು ರಾಷ್ಟ್ರಧ್ವಜ ಮಾರುವ ಕೆಲಸ ಬಿಡಬೇಕಾಗುತ್ತಿದೆ. ಇಲ್ಲಿ 2022 ಮತ್ತು ೨೦೨೩ ರಲ್ಲಿ ಪಾಕಿಸ್ತಾನದ ಧ್ವಜಗಳು ಮಾರುವವರ ಮೇಲೆ ದಾಳಿಗಳು ನಡೆದಿವೆ.
ಬಲೂಚಿಸ್ತಾನ ಲಿಬರೆಶನ್ ಆರ್ಮಿ ಎಂದರೆ ಏನು ?
ಬಲೂಚಿಸ್ತಾನದಲ್ಲಿನ ಅನೇಕ ಜನರಿಗೆ ಭಾರತದ ವಿಭಜನೆಯ ನಂತರ ಸ್ವತಂತ್ರ ದೇಶ ಎಂದು ಬದುಕುವುದಿತ್ತು; ಆದರೆ ಅವರ ಒಪ್ಪಿಗೆ ಇಲ್ಲದೆ ಅವರನ್ನು ಪಾಕಿಸ್ತಾನದಲ್ಲಿ ಸೇರಿಸಲಾಯಿತು. ಆದ್ದರಿಂದ ಬಲೂಚಿಸ್ತಾನದಲ್ಲಿ ಸೈನ್ಯ ಮತ್ತು ಜನರಲ್ಲಿ ಸಂಘರ್ಷ ನಡೆಯುತ್ತಿದೆ. ‘ಬಲೂಚಿಸ್ತಾನ ಲಿಬರೇಶನ್ ಆರ್ಮಿ’ ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದೆ. ಬಲೂಚಿಸ್ತಾನದ ಸಾಧನ ಸಂಪತ್ತಿಯ ಮೇಲೆ ಅವರ ಅಧಿಕಾರ ಇದೆ ಎಂದು ಅವರ ವಿಶ್ವಾಸವಿದೆ. ಪಾಕಿಸ್ತಾನ ಸರಕಾರವು ೨೦೦೭ ರಲ್ಲಿ ಬಲೂಚಿಸ್ತಾನ ಲಿಬರೇಶನ್ ಆರ್ಮಿಯನ್ನು ಭಯೋತ್ಪಾದಕ ಸಂಘಟನೆಯ ಪಟ್ಟಿಯಲ್ಲಿ ಸೇರಿಸಿದೆ.
ಸಂಪಾದಕೀಯ ನಿಲುವುಮಾಡಿದ್ದುಣ್ಣೋ ಮಾರಾಯ ಎಂದು ಹೇಳಲಾಗುತ್ತದೆ, ಅದು ಈಗ ಪಾಕಿಸ್ತಾನದ ಸಂದರ್ಭದಲ್ಲಿ ಘಟಿಸುತ್ತಿದೆ. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸುತ್ತಿರುವ ಪಾಕಿಸ್ತಾನದಲ್ಲಿ ಇಂತಹ ಘಟನೆಗಳು ಘಟಿಸುವುದು ಇದು ಅದರದೇ ಕರ್ಮದ ಫಲವಾಗಿದೆ ! |