|
ಲಕ್ಷ್ಮಣಪುರಿ (ಉತ್ತರ ಪ್ರದೇಶ) – 1947 ರಲ್ಲಿ ನಡೆದ ಘಟನೆ ಇಂದು ಬಾಂಗ್ಲಾದೇಶದಲ್ಲಿ ಮತ್ತೆ ನಡೆಯುತ್ತಿದೆ. ಬಾಂಗ್ಲಾದೇಶದಲ್ಲಿರುವ ಹಿಂದೂಗಳು ತಮ್ಮ ಜೀವದ ರಕ್ಷಣೆಗಾಗಿ ಯಾಚಿಸುತ್ತಿದ್ದಾರೆ. ಬಾಂಗ್ಲಾದೇಶದಲ್ಲಿರುವ ಹಿಂದೂಗಳಿಗಾಗಿ ಯಾರೂ ಏನೂ ಮಾತನಾಡುತ್ತಿಲ್ಲ. ಭಾರತದಲ್ಲಿರುವ ಎಲ್ಲಾ ಜನರ ಬಾಯಿ ಹೊಲಿಯಲ್ಪಟ್ಟಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಟೀಕಿಸಿದ್ದಾರೆ. ಹಜರತಗಂಜನಲ್ಲಿ ವಿಭಜನೆಯ ಸ್ಮೃತಿ ದಿನದ ನಿಮಿತ್ತ ಆಯೋಜಿಸಲಾಗಿದ್ದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಾತನ್ನು ಮುಂದುವರಿಸಿ,
ಭಾರತದ ವಿಭಜನೆಗೆ ಕಾಂಗ್ರೆಸ ಹೊಣೆ !
ಭಾರತದ ವಿಭಜನೆಗೆ ಕಾಂಗ್ರೆಸ್ ಹೊಣೆಯಾಗಿದೆ. ವಿಭಜನೆಯ ದುರಂತವನ್ನು ಮತ್ತೆ ನಡೆಯಲು ಬಿಡುವುದಿಲ್ಲ. ಕಾಂಗ್ರೆಸ್ ಕೇವಲ ಮತಗಳಿಸುವುದರ ಬಗ್ಗೆ ಮಾತ್ರ ಚಿಂತಿಸುತ್ತಿದೆ. ಜಾತಿಯ ಆಧಾರದ ಮೇಲೆ ಒಡಕು ಮೂಡಿಸಲು ಪ್ರಯತ್ನಿಸುತ್ತಿದೆ.
ಪಾಕಿಸ್ತಾನ ಭಾರತದೊಂದಿಗೆ ವಿಲೀನಗೊಳ್ಳುವುದು ಅಥವಾ ಅದು ನಾಶವಾಗುತ್ತದೆ !
ಪಾಕಿಸ್ತಾನದ ಪರಿಸ್ಥಿತಿ ಹೇಗಿದೆಯೆಂದರೆ, ಒಂದೋ ಅದು ಭಾರತದೊಂದಿಗೆ ವಿಲೀನವಾಗುವುದು ಇಲ್ಲವೇ ಇತಿಹಾಸದಿಂದ ಅದು ಕಾಯಂಸ್ವರೂಪಿ ಅಳಿಸಿ ಹೋಗುವುದು. ಮಹರ್ಷಿ ಅರಬಿಂದೋ ಅವರು 1947 ರಲ್ಲಿಯೇ, ಆಧ್ಯಾತ್ಮಿಕ ಜಗತ್ತಿನಲ್ಲಿ ಪಾಕಿಸ್ತಾನದ ವಾಸ್ತವವಿಲ್ಲ ಎಂದು ಘೋಷಿಸಿದ್ದರು. ಆಧ್ಯಾತ್ಮಿಕ ಪ್ರಪಂಚದಲ್ಲಿ ಯಾವುದೇ ದೇಶದ ನಿಜವಾದ ಸ್ವರೂಪವಲ್ಲದಿದ್ದಾಗ, ಅದನ್ನು ನಾಶಪಡಿಸಬೇಕಾಗುತ್ತದೆ. ಅದರ ಸಾವನ್ನು ನಾವು ಅನುಮಾನದಿಂದ ನೋಡಬಾರದು. ಇದು ನಡೆಯುತ್ತದೆಯೆನ್ನುವ ಕಡೆಗೆ ನಾವು ವಿಶ್ವಾಸ ಇಡಬೇಕು. ಅದಕ್ಕಾಗಿ ನಾವು ಪ್ರಯತ್ನಿಸೋಣ ಎಂದು ಹೇಳಿದರು.
ಧ್ವಂಸಗೊಂಡಿರುವ ತೀರ್ಥಕ್ಷೇತ್ರಗಳನ್ನು ಪುನರುಜ್ಜೀವನಗೊಳಿಸಬೇಕಾಗಬಹುದು !
ವಿದೇಶಿ ಆಕ್ರಮಣಕಾರರು ಭಾರತವನ್ನು ಪ್ರವೇಶಿಸಿ ಧ್ವಂಸಗೊಳಿಸಿರುವ ಭಾರತದಲ್ಲಿನ ಪವಿತ್ರ ತೀರ್ಥಕ್ಷೇತ್ರಗಳನ್ನು ಪುನರುಜ್ಜೀವನಗೊಳಿಸಬೇಕಾಗುವುದು. ಇಂತಹ ಎಲ್ಲ ತಪ್ಪುಗಳನ್ನು ಹಾಗೂ ವಿಭಜನೆಯ ದುರಂತವನ್ನು ಮೆಟ್ಟಿ ನಿಲ್ಲಬೇಕಾಗುವುದು; ಕಾರಣ ಅದು ಧಾರ್ಮಿಕ, ಪ್ರಾದೇಶಿಕ ಮತ್ತು ಭಾಷಿಕವಾಗಿತ್ತು. ಈ ವಿಷಯಗಳನ್ನು ದೂರಗೊಳಿಸಿ `ದೇಶ ಮೊದಲು’ ಈ ದೃಷ್ಟಿಯಿಂದ ಕೆಲಸ ಮಾಡಬೇಕಾಗುವುದು.
ರಾಜಕೀಯ ಸ್ವಾರ್ಥಕ್ಕಾಗಿ ಭಾರತವನ್ನು ವಿಭಜನೆಯ ದುರಂತದೆಡೆಗೆ ದೂಡಿದರು !
ಈ ಕಾರ್ಯಕ್ರಮಕ್ಕೂ ಮುನ್ನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು `ಎಕ್ಸ್’ ಮೇಲೆ ಪೋಸ್ಟ ಮಾಡಿ, ‘ವಸುಧೈವ ಕುಟುಂಬಕಂ’ ಈ ಭಾವಪೂರ್ಣ ಭಾವನೆಯನ್ನು ಜಗತ್ತಿಗೆ ಪರಿಚಯಿಸಿದ ನಮ್ಮ ಭಾರತಮಾತೆಗೆ 1947 ರಂದು (ಅಗಸ್ಟ 14ರಂದು) ರಾಜಕೀಯ ಸ್ವಾರ್ಥಕ್ಕಾಗಿ ವಿಭಜನೆಯ ದುರಂತದೆಡೆಗೆ ದೂಡಲಾಯಿತು. ಈ ಅಮಾನುಷ ನಿರ್ಣಯದಿಂದ ಕೇವಲ ದೇಶವಷ್ಟೇ ವಿಭಜನೆಗೊಳ್ಳಲಿಲ್ಲ. ಬದಲಾಗಿ ಅಸಂಖ್ಯಾತ ಅಮಾಯಕ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಸ್ಥಳಾಂತರದ ಪೆಟ್ಟನ್ನು ಸಹಿಸಬೇಕಾಯಿತು, ಯಾತನೆಗಳನ್ನು ಸಹಿಸಬೇಕಾಯಿತು, ಈ ಅಮಾನವೀಯ ದುರ್ಘಟನೆಯಲ್ಲಿ ಬಲಿಯಾದ ಎಲ್ಲಾ ಅಮಾಯಕ ನಾಗರಿಕರಿಗೆ ಇಂದು (ಆಗಸ್ಟ್ 14) `ವಿಭಜನೆಯ ಸ್ಮೃತಿದಿನ’ದಂದು ವಿನಮ್ರ ಗೌರವಾರ್ಪಣೆಗಳನ್ನು ಸಮರ್ಪಿಸಿದ್ದಾರೆ ಎಂದು ಹೇಳಿದರು.