
ಢಾಕಾ – ಭಾರತ ಉಪಖಂಡದಲ್ಲಿ ಸಕ್ರಿಯವಾಗಿರುವ ‘ಅಲ್ ಕಾಯದಾ’ ಈ ಭಯೋತ್ಪಾದಕ ಸಂಘಟನೆ ಬಾಂಗ್ಲಾದೇಶದ ಜನತೆಗೆ 12 ಪುಟಗಳ ಸಂದೇಶವನ್ನು ಪ್ರಸಾರ ಮಾಡಿದೆ. ಇದರಲ್ಲಿ ‘ಅಲ್ ಕಾಯದಾ’ವು ಶೇಖ್ ಹಸೀನಾ ಪದಚ್ಯುತಿ ‘ಜನರ ಕ್ರಾಂತಿ’ ಎಂದು ಹೇಳಿದೆ. ಭಾರತದ ‘ಗುಲಾಮ’ರಾಗಿದ್ದ ಹಸೀನಾ ಸರಕಾರವನ್ನು ಕಿತ್ತೊಗೆದ ಬಾಂಗ್ಲಾದೇಶದ ಜನತೆಗೆ ಅಲ್ ಕಾಯದಾ ಅಭಿನಂದನೆ ಸಲ್ಲಿಸಿದೆ. ಈ ಸಂದೇಶದಲ್ಲಿ ಬಾಂಗ್ಲಾದೇಶದಲ್ಲಿ ಇಸ್ಲಾಮಿಕ್ ಸರಕಾರ ಸ್ಥಾಪಿಸುವಂತೆ ‘ಅಲ್ ಕಾಯದಾ’ ಸಲಹೆ ನೀಡಿದೆ. ಬಾಂಗ್ಲಾದೇಶದ ಹೊಸ ಸರಕಾರವು ಆಡಳಿತದಲ್ಲಿ ಇಸ್ಲಾಮಿಕ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಅಲ್ ಕಾಯದಾ ಹೇಳಿದೆ.
1. ಅಲ್ ಕಾಯದಾ ತನ್ನ ಸಂದೇಶದಲ್ಲಿ ಬಾಂಗ್ಲಾದೇಶದ ಜನರಿಗೆ ಈ ಕ್ರಾಂತಿಯಲ್ಲಿ ಭಾಗವಹಿಸಿರುವ ಸೇನೆಯನ್ನು ನಂಬಬೇಡಿ ಎಂದು ಎಚ್ಚರಿಕೆ ನೀಡಿದೆ. ಈ ಕ್ರಾಂತಿ ಯಶಸ್ವಿಯಾಗಬೇಕಾದರೆ ಸೇನೆಯ ನಾಯಕತ್ವ ತೊಲಗಬೇಕು ಎಂದು ಅಲ್ ಕಾಯದಾ ಹೇಳಿದೆ.
2. ಬಾಂಗ್ಲಾದೇಶದ ಸೇನಾ ಮುಖ್ಯಸ್ಥರೇ ಸೇನೆಯ ವಿಮಾನ ಮೂಲಕ ಶೇಖ ಹಸೀನಾರನ್ನು ಭಾರತಕ್ಕೆ ಕರೆದೊಯ್ದಿದ್ದಾರೆ ಎಂದು ‘ಅಲ್ ಕಾಯದಾ’ ಹೇಳಿದೆ.
3. ಅಲ್ ಕಾಯದಾ ನೀಡಿದ ಈ ಸಂದೇಶದ ಬಗ್ಗೆ ‘ಸಾಹಬ್ ಮೀಡಿಯಾ’ ಲೇಖನ ಬರೆದಿದೆ. ಈ ಲೇಖನದಲ್ಲಿ “ಅಲ್ ಕಾಯದಾದ ಚಟುವಟಿಕೆಗಳು ದಕ್ಷಿಣ ಏಷ್ಯಾದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಮೇಲೆ ಪರಿಣಾಮ ಬೀರಬಹುದು” ಎಂದು ಹೇಳಿದೆ.
4. ಇಸ್ಲಾಮಿಕ್ ಶಕ್ತಿಗಳು ಬಾಂಗ್ಲಾದೇಶದಲ್ಲಿ ಷರಿಯಾ ಕಾನೂನನ್ನು ಸಂಪೂರ್ಣವಾಗಿ ಜಾರಿಗೊಳಿಸುವತ್ತ ಒತ್ತು ನೀಡಬೇಕುಎಂದು ಅಲ್ ಕಾಯದಾ ತನ್ನ ಸಂದೇಶದಲ್ಲಿ ಹೇಳಿದೆ.
ಸಂಪಾದಕೀಯ ನಿಲುವುಇದನ್ನು ಗಮನದಲ್ಲಿಟ್ಟುಕೊಂಡು ಭಾರತವನ್ನು ಆದಷ್ಟು ಬೇಗ ಹಿಂದೂ ರಾಷ್ಟ್ರವೆಂದು ಘೋಷಿಸುವುದು ಆವಶ್ಯಕವಾಗಿದೆ. ಹಿಂದೂ ರಾಷ್ಟ್ರದಲ್ಲಿ ಜಿಹಾದಿಗಳು, ಮತಾಂಧರು ಮತ್ತು ಭಯೋತ್ಪಾದಕರಿಗೆ ತಕ್ಕ ಶಾಸ್ತಿ ಮಾಡಬಹುದು ! |
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid