ಬಾಂಗ್ಲಾದೇಶದಲ್ಲಿಯೇ ‘ಹಿಂದೂ ಬಂಗಾಳ’ ರಚಿಸಿ, ಅಲ್ಲಿ ಹಿಂದೂಗಳನ್ನು ನೆಲೆಸುವಂತೆ ಮಾಡಿ ! – ಹಿಂದೂ ಮಕ್ಕಲ್ ಕಚ್ಚಿ

ತಮಿಳುನಾಡಿನ ‘ಹಿಂದೂ ಮಕ್ಕಲ್ ಕಚ್ಚಿ’ಪಕ್ಷದ (ಹಿಂದೂ ಜನತಾ ಪಕ್ಷ) ಬೇಡಿಕೆ!

ಕೊಯಂಬತ್ತೂರು (ತಮಿಳುನಾಡು) – ಬಾಂಗ್ಲಾದೇಶ, ಅಮೇರಿಕ ಮತ್ತು ತದನಂತರ ಈಗ ಭಾರತವೂ ಬಾಂಗ್ಲಾದೇಶದ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಚಳವಳಿಗಳನ್ನು ಮಾಡುತ್ತಿದೆ. ಆಗಸ್ಟ್ 10ರಂದು ಸಂಜೆ ಇಲ್ಲಿನ ಗಾಂಧಿ ಪಾರ್ಕನಲ್ಲಿ ಈ ಕುರಿತು ಚಳವಳಿ ಹಮ್ಮಿಕೊಂಡಿತ್ತು. ಚಳುವಳಿಯ ಆಯೋಜನೆಯನ್ನು ಹಿಂದೂ ಮಕ್ಕಲ್ ಕಚ್ಚಿ (ಹಿಂದೂ ಜನತಾ ಪಕ್ಷ) ಈ ಹಿಂದುತ್ವನಿಷ್ಠ ಸಂಘಟನೆಯು ಮಾಡಿತ್ತು. ಈ ಸಮಯದಲ್ಲಿ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಶ್ರೀ. ಅರ್ಜುನ ಸಂಪಥ್ ಇವರು ನೆರೆದಿದ್ದವರೊಂದಿಗೆ ಮಾತನಾಡುತ್ತಾ, ಭಾರತ ಸರಕಾರ, ವಿಶ್ವಸಂಸ್ಥೆ ಮತ್ತು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಯು ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ದುಃಸ್ಥಿತಿಯ ವಿರುದ್ಧ ಧ್ವನಿ ಎತ್ತಬೇಕು. ಬಾಂಗ್ಲಾದೇಶದಲ್ಲಿ ಹೊಸ ‘ಹಿಂದೂ ಬಂಗಾಳ’ ರಚಿಸಿ, ಅಲ್ಲಿ ಹಿಂದೂಗಳ ವಾಸ್ತವ್ಯದ ವ್ಯವಸ್ಥೆಯನ್ನು ಮಾಡಬೇಕು. ಅಲ್ಲಿ ಹಿಂದೂಗಳ ಸುರಕ್ಷತೆಯ ಬಗ್ಗೆ ಭರವಸೆ ನೀಡಬೇಕು ಎಂದು ಹೇಳಿದರು.

ಸಂಪಥ್ ಇವರು ಮಂಡಿಸಿರುವ ಪ್ರಮುಖ ಅಂಶಗಳು !

1. ಬಾಂಗ್ಲಾದೇಶದಲ್ಲಿ ದೌರ್ಜನ್ಯಗಳನ್ನು ಸಹಿಸಿಕೊಂಡುರವ ಮತ್ತು ಭಾರತದಲ್ಲಿ ನಿರಾಶ್ರಿತರಾಗಿ ಜೀವಿಸುತ್ತಿರುವ ಹಿಂದೂಗಳಿಗೆ ಪೌರತ್ವ ತಿದ್ದುಪಡಿ ಕಾಯ್ದೆಯಡಿ ತ್ವರಿತ ಪೌರತ್ವ ನೀಡಬೇಕು.

2. ವಿಶ್ವಸಂಸ್ಥೆಯ ಶಾಂತಿ ಸೈನ್ಯವನ್ನು ಬಾಂಗ್ಲಾದೇಶದ ಗಲಭೆಗಳನ್ನು ನಿಯಂತ್ರಿಸಲು ಕಳುಹಿಸಬೇಕು.

3. ಬಾಂಗ್ಲಾದೇಶವು ಪಾಕಿಸ್ತಾನದಂತೆಯೇ ಮುಸ್ಲಿಂ ಕಟ್ಟರವಾದಿ ರಾಷ್ಟ್ರವಾಗಿದೆ; ಆದರೆ ಭಾರತ ಜಾತ್ಯತೀತ ರಾಷ್ಟ್ರವಾಗಿದೆ. ಹಿಂದೂಗಳಿಗೆ ಯಾವುದೇ ರಾಷ್ಟ್ರವಿಲ್ಲ. ಆದ್ದರಿಂದ ಹಿಂದೂಗಳನ್ನು ರಕ್ಷಿಸುವ ಜವಾಬ್ದಾರಿ ಭಾರತದ್ದಾಗಿದೆ.

4. ಇಂಡಿ ಒಕ್ಕೂಟ, ದ್ರಮುಕ ಮತ್ತು ಕಾಂಗ್ರೆಸ್ ಪ್ಯಾಲೇಸ್ಟಿನಿಯನ್ ಮುಸ್ಲಿಮರಿಗಾಗಿ ಪ್ರತಿಭಟನೆಗಳನ್ನು ನಡೆಸುತ್ತವೆ; ಆದರೆ ಬಾಂಗ್ಲಾದೇಶಿ ಹಿಂದೂಗಳಿಗಾಗಿ ಏನನ್ನೂ ಮಾಡುವುದಿಲ್ಲ ! ಮಣಿಪುರದ ಮಹಿಳೆಯರು ನ್ಯಾಯಕ್ಕಾಗಿ ಧ್ವನಿ ಎತ್ತುವ ತಮಿಳುನಾಡಿನ ಆಡಳಿತಾರೂಢ ದ್ರಮುಕ ಪಕ್ಷವು ಬಾಂಗ್ಲಾದೇಶದ ಪರಿಸ್ಥಿತಿಯ ಬಗ್ಗೆ ಕನಿಷ್ಠ ಮೌಖಿಕ ನಿಷೇಧವನ್ನೂ ವ್ಯಕ್ತಪಡಿಸಿಲ್ಲ.

5. ಭಾರತೀಯ ಮುಸ್ಲಿಂ ಸಂಘಟನೆಗಳು ಕೂಡ ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಒಂದೇ ಒಂದು ನಿಷೇಧದ ಮಾತನ್ನು ಹೇಳಿಲ್ಲ. ಭಾರತದ ಹಿಂದೂಗಳು ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಸಂಪಾದಕೀಯ ನಿಲುವು

ಭಾರತ ಸರಕಾರವೇ ಈ ನ್ಯಾಯಯುತ ಬೇಡಿಕೆಗಾಗಿ ಬಾಂಗ್ಲಾದೇಶದ ಮೇಲೆ ಒತ್ತಡ ಹೇರಬೇಕು. ಅದಕ್ಕಾಗಿ ಇತರ ದೇಶಗಳೂ ಈ ಬೇಡಿಕೆಯನ್ನು ಬೆಂಬಲಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನಗಳನ್ನು ಮಾಡಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !