ಬಾಂಗ್ಲಾದೇಶದಲ್ಲಿ ಮಧ್ಯಂತರ ಸರಕಾರ ಸ್ಥಾಪನೆ: ಮುಖ್ಯಸ್ಥರಾಗಿ ಮಹಮ್ಮದ್ ಯೂನಸ್ ಆಯ್ಕೆ !

ಯೂನಸ್ ನೊಬೆಲ್ ಪ್ರಶಸ್ತಿ ವಿಜೇತರು !

ಢಾಕಾ (ಬಾಂಗ್ಲಾದೇಶ) – ನೊಬೆಲ್ ಪ್ರಶಸ್ತಿ ವಿಜೇತ ಮಹಮ್ಮದ್ ಯೂನಸ್ ಅವರು ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯಸ್ಥರಾದರು. ಅವರಿಗೆ ಆಗಸ್ಟ್ 8 ರ ರಾತ್ರಿ ರಾಷ್ಟ್ರಪತಿ ಮಹಮ್ಮದ್ ಶಹಾಬುದ್ದೀನ್ ಅವರು ಸಚಿವ ಸ್ಥಾನದ ಪ್ರಮಾಣ ವಚನ ನೀಡಿದರು. ಇವರೊಂದಿಗೆ ಇತರ 13 ಮಂದಿ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಮಧ್ಯಂತರ ಸರಕಾರದ ಮುಖ್ಯಸ್ಥರು ಪ್ರಧಾನಿ ಹುದ್ದೆಗೆ ಸಮಾನರಾಗಿರುತ್ತಾರೆ.

‘ಢಾಕಾ ಟ್ರಿಬ್ಯೂನ್’ ವಾರ್ತೆಯಪ್ರಕಾರ, ಪ್ರಮಾಣವಚನ ಸಮಾರಂಭದಲ್ಲಿ ಸುಮಾರು 400 ಜನರು ಭಾಗವಹಿಸಿದ್ದರು. ಭಾರತಕ್ಕೂ ಅವರ ಆಹ್ವಾನ ಇತ್ತು; ಆದರೆ ಭಾರತದಿಂದ ಯಾರೂ ಭಾಗವಹಿಸಿರುವ ಬಗ್ಗೆ ಮಾಹಿತಿ ಇದುವರೆಗೂ ಬಂದಿಲ್ಲ.