|
ಢಾಕಾ (ಬಾಂಗ್ಲಾದೇಶ) – ಶೇಖ ಹಸೀನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ, ದೇಶವನ್ನು ಬಿಟ್ಟ ಬಳಿಕ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯಗಳು ಪ್ರಾರಂಭವಾಗಿವೆ. ಬಾಂಗ್ಲಾದೇಶದ ಮಾಧ್ಯಮಗಳಲ್ಲಿ ದೇಶಾದ್ಯಂತ ಹಿಂದೂ ಸಮುದಾಯದ ಮನೆಗಳು ಮತ್ತು ದೇವಾಲಯಗಳ ಮೇಲೆ ದಾಳಿಯ ಸುದ್ದಿ ಪ್ರಸಾರವಾಗುತ್ತಿದೆ. ಈ ಸುದ್ದಿಯ ನಂತರ ಜಗತ್ತಿನಾದ್ಯಂತ ಅನೇಕ ಕಟ್ಟರವಾದಿ ಮುಸ್ಲಿಮರು ಸಂತಸ ವ್ಯಕ್ತಪಡಿಸಿದ್ದಾರೆ. ಕೆಲವರಂತೂ `ಬಾಂಗ್ಲಾದೇಶದಲ್ಲಿ ಹಿಂದೂಗಳ ನರಸಂಹಾರವಾಗಬೇಕು’ ಎನ್ನುವ ಅಪೇಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ತನ್ನನ್ನು ‘ಇಸ್ಲಾಮಿಕ್ ವಿದ್ವಾಂಸ’ ಎಂದು ಹೇಳಿಕೊಳ್ಳುವ ಅಮೇರಿಕಾದ ಅಬು ನಜಾಮ್ ಫರ್ನಾಂಡೋ ಬಿನ್ ಅಲ್-ಇಸ್ಕಂದರ್’ ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಸಂಪೂರ್ಣವಾಗಿ ನಾಶಮಾಡಬೇಕೆಂದು ಕರೆ ನೀಡಿದ್ದಾರೆ. ಇಸ್ಲಾಮಿಕ್ ನ್ಯಾಯಶಾಸ್ತ್ರವನ್ನು ಉಲ್ಲೇಖಿಸಿ, ಅವರು ಎಕ್ಸನಲ್ಲಿ ಪೋಸ್ಟ ಮಾಡಿ, ಹಿಂದೂಗಳಿಗೆ ಎರಡೇ ಆಯ್ಕೆಗಳಿವೆ, ಮೊದಲ ಆಯ್ಕೆ ಸಾವನ್ನಪ್ಪಿಕೊಳ್ಳುವುದು ಮತ್ತು ಎರಡನೆಯದು ಇಸ್ಲಾಂ ಸ್ವೀಕರಿಸುವುದು ಎಂದು ಬರೆದಿದ್ದಾರೆ.
ಅವರು ತಮ್ಮ ಮಾತನ್ನು ಮುಂದುವರಿಸಿ, ಹಿಂದೂಗಳು ಇಸ್ಲಾಮಿಕ್ ದೇಶಗಳಲ್ಲಿ ವಾಸಿಸಿ ಎರಡನೇಯ ಜೀವನವನ್ನು ಸ್ವೀಕರಿಸಿದ್ದಾರೆ, ಅದು ಯೋಗ್ಯವಾಗಿದೆ ಎಂದು ಹೇಳಿದರು. ಅಲ್ಲಿನ ಹಿಂದೂಗಳು ಮೂರ್ತಿ ಪೂಜೆಯನ್ನು ಕೈಬಿಟ್ಟು ಇಸ್ಲಾಮಿಕ್ ನಿಯಮಗಳು ಮತ್ತು ನಿಬಂಧನೆಗಳಂತೆ ವರ್ತಿಸುವುದು ಅವಶ್ಯಕ. `ಬಾಂಗ್ಲಾದೇಶದ ಮೇಲಿರುವ ಹಿಂದೂಗಳ ಪ್ರಭಾವ ಮತ್ತು ಅವರ ಹಸ್ತಕ್ಷೇಪದಿಂದ ಬಾಂಗ್ಲಾದೇಶ ಮುಕ್ತವಾಗಲಿದೆ’ ಎಂದು ಆಶಯವನ್ನು ವ್ಯಕ್ತಪಡಿಸಿದ್ದಾರೆ.
ಸಂಪಾದಕೀಯ ನಿಲುವು
|