
ಕಾಂಚೀಪುರಂ (ತಮಿಳುನಾಡು) – ಜಿಲ್ಲೆಯ ಕುರುವಿಮಲೈ ಗ್ರಾಮದ ನಾಗತಮ್ಮನ್ ಮತ್ತು ಸೆಲಿಯಮ್ಮನ್ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದೆ. ಈ ಪ್ರಯುಕ್ತ ಇಡೀ ದೇವಾಲಯವನ್ನು ಅಲಂಕರಿಸಲಾಗಿದೆ. ಆದರೆ ಕೆಲ ಯುವಕರು ಅಮೇರಿಕದ ‘ಪೋರ್ನ್‌ಸ್ಟಾರ್’ (ಅಶ್ಲೀಲ ಚಿತ್ರಗಳಲ್ಲಿ ಕೆಲಸ ಮಾಡುವ ನಟಿ) ಮಿಯಾ ಖಲೀಫಾ ಅವರ ಜೊತೆಗೆ ಪಾರ್ವತಿ ದೇವಿ ನಿಂತಿರುವ ಫಲಕವನ್ನು ತಯಾರಿಸಿದ್ದಾರೆ. ಈ ಫಲಕದಲ್ಲಿರುವ ಪೋರ್ನ್ ನಟಿಯು ಭಾರತೀಯ ಉಡುಗೆ ತೊಟ್ಟಿದ್ದು ಆಕೆ ದೇವಿಯ ಕಲಶವನ್ನು ತನ್ನ ತಲೆಯ ಮೇಲೆ ಇಟ್ಟುಕೊಂಡಿರುವಂತೆ ತೋರಿಸಲಾಗಿದೆ. ಈ ಫಲಕದ ವಿರುದ್ಧ ಸ್ಥಳೀಯ ಹಿಂದೂಗಳು ಆಕ್ರೋಶ ವ್ಯಕ್ತಪಡಿಸಿದ್ದು, ಘಟನೆಯ ಮಾಹಿತಿ ಪಡೆದ ಪೊಲೀಸರು ಕೂಡಲೇ ಈ ಫಲಕವನ್ನು ತೆಗೆದು ತನಿಖೆ ನಡೆಸುತ್ತಿದ್ದಾರೆ. ಈ ಫಲಕದಲ್ಲಿ ಕೆಲ ಸ್ಥಳೀಯ ಯುವಕರ ಛಾಯಾಚಿತ್ರಗಳನ್ನೂ ಸಹ ಮುದ್ರಿಸಲಾಗಿದೆ.
ಸಂಪಾದಕೀಯ ನಿಲುವುಬೇರೆ ಯಾವುದೇ ಧರ್ಮದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಇಂತಹ ಘಟನೆಗಳು ನಡೆದಿವೆಯೇ? ಹಿಂದೂಗಳಲ್ಲಿ ಧರ್ಮ ಶಿಕ್ಷಣದ ಕೊರತೆಯಿಂದಾಗಿಯೇ ಇಂತಹ ಘಟನೆಗಳು ನಡೆಯುತ್ತವೆ ಎಂಬುದನ್ನು ತಿಳಿಯಿರಿ! |
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath