ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲಿನ ದಾಳಿಯ ಹಿಂದೆ ಅಲ್ಲಿಯ ಸೈನ್ಯ ಮತ್ತು ಪೊಲೀಸರ ಕೈವಾಡ ! – ಗುಪ್ತಚರರಿಂದ ಮಾಹಿತಿ

ಸೈನಿಕರು ಮತ್ತು ಪೊಲೀಸರಿಂದಲೇ ಹಿಂದುಗಳ ಮನೆಗಳ ಲೂಟಿ !

ಢಾಕಾ (ಬಾಂಗ್ಲಾದೇಶ) – ಅಶಾಂತಿಯ ವಾತಾವರಣವಾಗಿರುವ ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದಾಳಿಗಳು ಹೆಚ್ಚುತ್ತಿವೆ. ಈ ಪರಿಸ್ಥಿತಿಯನ್ನು ಹಿಡಿತಕ್ಕೆ ತರಲು ಪೊಲೀಸರು ಮತ್ತು ಸೈನ್ಯ ಕಣ್ಣ ಮುಚ್ಚಾಲೆ ಆಡುತ್ತಿದೆ. ಅವರೆ ಹಿಂಸಾಚಾರಕ್ಕೆ ಕಾರಣವಾಗಿದ್ದಾರೆ. ಗುಪ್ತಚರ ಇಲಾಖೆಯ ಪ್ರಕಾರ, ಅನೇಕ ಮೂರ್ತಿಗಳು ಮತ್ತು ದೇವಸ್ಥಾನಗಳನ್ನು ನಾಶಗೊಳಿಸಿದ್ದಾರೆ. ಸೈನ್ಯದಿಂದ ಆಶ್ವಾಸನೆ ನೀಡಿದ್ದರು ಕೂಡ ಬಾಂಗ್ಲಾದೇಶದಲ್ಲಿನ ಹಿಂದುಗಳ ರಕ್ಷಣೆಗಾಗಿ ಯಾವುದೇ ಪ್ರಯತ್ನ ನಡೆದಿಲ್ಲ. ಬದಲಾಗಿ ಸೈನ್ಯ ಮತ್ತು ಪೊಲೀಸರೇ ಹಿಂದೂಗಳ ಮನೆಗಳ ಲೂಟಿ ಮಾಡುತ್ತಿದ್ದಾರೆ ಎಂದು ಹೇಳಿದೆ.

ಗುಪ್ತಚರ ಇಲಾಖೆ ಹೇಳಿದ ಅಂಶಗಳು,

೧. ಹಿಂದೂ ಕುಟುಂಬದ ಮೇಲೆ ದಾಳಿಗಳು ನಡೆಯುತ್ತಿವೆ. ಓರ್ವ ಹಿಂದೂ ಪ್ರಾಧ್ಯಾಪಕರನ್ನು ಸುತ್ತಿಗೆಯಿಂದ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಬಾಂಗ್ಲಾದೇಶದಲ್ಲಿನ ಹಿಂದೂ ಕುಟುಂಬಗಳು ಸರ್ವಸ್ವವನ್ನೇ ಕಳೆದುಕೊಂಡಿದ್ದಾರೆ ಮತ್ತು ಈಗಲೂ ಕೂಡ ಹಿಂದೂ ಸಂಘಟನೆಗಳು ಬಹಿರಂಗವಾಗಿ ಮಾತನಾಡಲು ಹೆದರುತ್ತದ್ದಾರೆ.

೨. ಹಿಂದುಗಳ ಮೇಲೆ ಕೇವಲ ಕಟ್ಟರವಾದಿಗಳಿಂದ ಅಷ್ಟೇ ದಾಳಿಗಳು ನಡೆಯುತ್ತಿಲ್ಲ, ಹಿಂದುಗಳ ವಿರುದ್ಧ ಇದು ಭಯೋತ್ಪಾದಕ ಪ್ರತಿಭಟನೆ ಆಗುತ್ತಿದೆ. ಇದು ಅನೇಕ ವರ್ಷಗಳಿಂದ ನಡೆಯುತ್ತಿರುವುದರಿಂದ ಯಾವ ನೇತಾರರು ಅವರ ಮೇಲೆ ಹಿಡಿತ ಇಡಲು ಸಾಧ್ಯವಿಲ್ಲ. ಸೌದಿ ಅರೇಬಿಯಾ ಮತ್ತು ಕೊಲ್ಲಿ ದೇಶಗಳಿಂದ ಬೃಹತ್ ಪ್ರಮಾಣದಲ್ಲಿ ಹರಿದು ಬರುತ್ತಿರುವ ಹಣದಿಂದ ಇಸ್ಲಾಮಿ ತಂಡಗಳಿಗೆ ಚಾಲನೆ ದೊರೆತಿದೆ. ಸೈನ್ಯ ಮತ್ತು ಪೊಲೀಸರು ಈ ಇಸ್ಲಾಮಿವಾದಿಗಳಿಗೆ ಸ್ವಾತಂತ್ರ್ಯ ನೀಡಿದ್ದಾರೆ, ಅವರು ಈ ರೌಡಿಗಳಿಗೆ ಬೆಂಬಲ ನೀಡುತ್ತಿರುವುದು ಸ್ಪಷ್ಟವಾಗುತ್ತಿದೆ.

೩. ಸ್ಥಳೀಯ ಪ್ರಸಾರ ಮಾಧ್ಯಮಗಳು ಮತ್ತು ಢಾಕಾದಲ್ಲಿನ ಹಿಂದೂ ಅಲ್ಪಸಂಖ್ಯಾತ ತಂಡದ ಅಧಿಕಾರಿಗಳ ವರದಿಯ ಪ್ರಕಾರ ಈಗ ಸುಮಾರು ೯೭ ಸ್ಥಳಗಳಲ್ಲಿ ಹಿಂದುಗಳ ಮೇಲೆ ದಾಳಿಗಳು ನಡೆದಿವೆ.

ಜನವರಿ ೨೦೧೩ ರಿಂದ ಬಾಂಗ್ಲಾದೇಶದಲ್ಲಿ ಹಿಂದೂ ಜನಾಂಗದ ಮೇಲೆ ಸುಮಾರು ೪ ಸಾವಿರ ದಾಳಿಗಳು

ಬಾಂಗ್ಲಾದೇಶದಲ್ಲಿ ೨೦೧೩ ರಿಂದ ಹಿಂದುಗಳ ಮೇಲೆ ೪ ಸಾವಿರ ದಾಳಿಗಳು ನಡೆದಿವೆ, ಎಂದು ಬೇಹುಗಾರಿಕೆಯಿಂದ ಮಾಹಿತಿ ದೊರೆತಿದೆ. ಇದು ಯೋಜನಾಬದ್ಧ ದಾಳಿಗಳಾಗಿವೆ. ಶೇಖ ಹಸೀನಾ ಇವರು ರಾಜೀನಾಮೆ ನೀಡಿದ ನಂತರ ಆರಂಭವಾಗಿರುವ ಹಿಂಸಾಚಾರ ಅನಿರೀಕ್ಷಿತವಾಗದೆ ಉದ್ದೇಶಪೂರ್ವಕ ಮತ್ತು ನಿಯೋಜಿತವಾಗಿದೆ. ಇದರಲ್ಲಿ ಅನೇಕ ಜನರು ಮಹತ್ವದ ಪಾತ್ರ ವಹಿಸಿದ್ದಾರೆ. ಸರಕಾರಿ ವ್ಯವಸ್ಥೆಯ ನಿಷ್ಕ್ರಿಯತೆ; ಕಾರಣ ಅವರು ಇದನ್ನು ಕೆಲವು ಸಮಯ ಮುಂದವರೆಸುವ ನಿರ್ಣಯ ತೆಗೆದುಕೊಂಡಿದ್ದಾರೆ. ಈಗ ಇಸ್ಲಾಮಿ ಗುಂಪುಗಳು ಹಿಂದುಗಳ ಮೇಲೆ ದಾಳಿ ಮಾಡುವ ಕಾರಣ ದೊರೆತಿದೆ ಮತ್ತು ಭಾರತೀಯ ನೀತಿ ಮುಸಲ್ಮಾನವಿರೋಧಿ ಆಗಿದೆ.

ಸಂಪಾದಕೀಯ ನಿಲುವು

ಇದರಿಂದ, ಬಾಂಗ್ಲಾದೇಶದಲ್ಲಿ ಮುಂದೆ ಹಿಂದುಗಳ ಕಥೆ ಏನಾಗಬಹುದು ಎಂಬುದು ಸ್ಪಷ್ಟವಾಗಿದೆ ! ಬೇಲಿನೆ ಎದ್ದು ಹೊಲ ಮೆಯ್ದರೆ ಹೇಗೆ ಎಂಬುದು ಗಮನಕ್ಕೆ ಬರುತ್ತದೆ ! ಈಗ ಭಾರತ ಅಲ್ಲಿಯ ಹಿಂದುಗಳ ರಕ್ಷಣೆ ಮಾಡುವುದಕ್ಕಾಗಿ ಹಸ್ತಕ್ಷೇಪ ಮಾಡುವುದೇ? ಎಂಬ ಪ್ರಶ್ನೆ ಉದ್ಭವಿಸಿದೆ!