ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗಳು ಮುಂದುವರಿಕೆ
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ಇನ್ನೂ ನಿಂತಿಲ್ಲ. ನೂರಾರು ಹಿಂದೂಗಳ ಮನೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಹಲವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರವೆಸಗಲಾಗಿದೆ ಮತ್ತು ಕೆಲವರನ್ನು ಅಪಹರಿಸಲಾಗಿದೆ. ಈ ದಾಳಿಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಬಾಂಗ್ಲಾದೇಶ ಒದಗಿಸಿಲ್ಲ; ಆದರೆ, ಸಂತ್ರಸ್ತ ಹಿಂದೂಗಳು ತಮ್ಮ ಮೇಲಿನ ಹಲ್ಲೆಯ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದು ಈ ದಾಳಿಯ ಗಂಭೀರತೆಯನ್ನು ತೋರಿಸುತ್ತದೆ.
ಜಮಾತ್-ಎ-ಇಸ್ಲಾಮಿ ಗುಂಪುಗಳು ಬಂದೂಕು ಹಿಡಿದು ಬೀದಿಗಳಲ್ಲಿ ನಡೆಯುತ್ತಿದ್ದಾರೆ !
ಮಾಧ್ಯಮಗಳೊಂದಿಗೆ ಮಾತನಾಡಿದ ಬಾಂಗ್ಲಾದೇಶದ ಹಿಂದೂ ಯುವಕನೊಬ್ಬ ಬಾಂಗ್ಲಾದೇಶದ ಕೆಲವರು ನಮಗೆ ಸಹಾಯ ಮಾಡುತ್ತಿದ್ದಾರೆ; ಆದರೆ ಕೆಲವು ಮತಾಂಧರು ದಾಳಿ ಮಾಡುತ್ತಿದ್ದಾರೆ. ಅವರು ಕೊಲ್ಲಲು ಹಿಂಜರಿಯುವುದಿಲ್ಲ. ಜಮಾತ-ಎ-ಇಸ್ಲಾಮಿ ಗುಂಪು ಬಾಂಗ್ಲಾದೇಶದ ಬೀದಿಗಳಲ್ಲಿ ಬಂದೂಕು ಹಿಡಿದು ಓಡಾಡುತ್ತಿರುವುದು ಹಿಂದೂಗಳ ಆತಂಕಕ್ಕೆ ಕಾರಣವಾಗಿದೆ. ಇಂಟರ್ನೆಟ್ ಸೌಲಭ್ಯವನ್ನು ಸ್ಥಗಿತಗೊಳಿಸಲಾಗುತ್ತಿದೆ. ಇದರಿಂದಾಗಿ ಸಂತ್ರಸ್ತ ಹಿಂದೂಗಳು ಯಾರನ್ನೂ ಸಂಪರ್ಕಿಸಲು ಆಗುತ್ತಿಲ್ಲ.
ಜಮಾತ-ಎ-ಇಸ್ಲಾಮಿಗಳಿಂದ ಹಿಂದೂ ಮನೆ, ಅಂಗಡಿಗಳ ಪಟ್ಟಿ ಮಾಡಿ ದಾಳಿ !
ಜಮಾತ-ಎ-ಇಸ್ಲಾಮಿ ಹಿಂದೂಗಳ ಮನೆ ಮತ್ತು ಅಂಗಡಿಗಳನ್ನು ಪಟ್ಟಿ ಮಾಡುತ್ತಿದೆ. ಅದರಂತೆ ಅವರ ಮೇಲೆ ದಾಳಿ ನಡೆಸಲಾಗುತ್ತಿದೆ. ‘ವಿಶ್ವ ಹಿಂದೂ ಮಹಾಸಂಘ, ಬಾಂಗ್ಲಾದೇಶ’ ಎಂಬ ಸಂಘಟನೆಯು ಅಪಹರಣಕ್ಕೊಳಗಾದ ಮತ್ತು ಚಿತ್ರಹಿಂಸೆಗೊಳಗಾದ ಮಹಿಳೆಯರ ಪಟ್ಟಿಯನ್ನು ಪ್ರಸಾರ ಮಾಡಿದೆ. ಇದರಲ್ಲಿ 3 ಹಿಂದೂ ಮಹಿಳೆಯರು ಸೇರಿದ್ದಾರೆ. ಆ ಮಹಿಳೆಯರನ್ನು ಅಪಹರಿಸಿದ್ದಾರೆ ಎನ್ನಲಾಗಿದೆ. ಅನೇಕ ಬಾಂಗ್ಲಾದೇಶಿ ಹಿಂದೂಗಳು ತಮ್ಮ ನಿಜವಾದ ಹೆಸರನ್ನು ಬಹಿರಂಗಪಡಿಸುವುದಿಲ್ಲ. ಅವರು ತಮ್ಮ ಪ್ರಾಣಕ್ಕಾಗಿ ಓಡಲು ಸಹ ಸಾಧ್ಯವಾಗುತ್ತಿಲ್ಲ.
ಶೇಖ್ ಹಸೀನಾ ರಾಜೀನಾಮೆಯ ನಂತರ, ಜೈಲಿನಲ್ಲಿರುವ 2 ಸಾವಿರದ 200 ಕ್ಕೂ ಹೆಚ್ಚು ಮತಾಂಧರಿಗೆ ಜಾಮೀನು ನೀಡಲಾಗಿದೆ. ಇದರಿಂದ ಹಿಂದೂಗಳ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಪ್ರಪಂಚದಲ್ಲಿ ಹಿಂದೂಗಳಿಗೆ ರಕ್ಷಕರಿಲ್ಲದ ಕಾರಣ, ಈ ಪರಿಸ್ಥಿತಿಯು ಅವರ ಅಳಿವಿನವರೆಗೂ ಮುಂದುವರಿಯುತ್ತದೆ, ಅದನ್ನು ಒಪ್ಪಿಕೊಳ್ಳಬೇಕು ! |