“ಕಟುಕರಿಂದ ರಕ್ಷಿಸಿದ ಗೋವುಗಳನ್ನು ಗೋಶಾಲೆಯಲ್ಲೇ ಇಡಿ!”

  • ಪಾಚೋರಾ (ಜಳಗಾವ ಜಿಲ್ಲೆ) ಇಲ್ಲಿಯ ನ್ಯಾಯಾಲಯದ ಮಹತ್ವಪೂರ್ಣ ಮತ್ತು ಶ್ಲಾಘನೀಯ ನಿರ್ಣಯ !

  • ಕಟುಕರೇ ಗೋವುಗಳಿಗೆ ಬೇಕಾಗುವ ಮೇವಿನ ಖರ್ಚು ಗೋಶಾಲೆಗೆ ನೀಡಬೇಕು

ಸಾಂದರ್ಭಿಕ ಚಿತ್ರ

ಜಳಗಾವ, ಆಗಸ್ಟ್ ೬ (ವಾರ್ತೆ) – ಪಾಚೋರಾ ತಾಲೂಕಿನ ವರಖೇಡಿ-ಅಂಬೆ ವಡಗಾವ ರಸ್ತೆಯಲ್ಲಿರುವ ಅಕ್ಬರ್ ಯೂಸುಫ್ ಕುರೇಶಿ ಇವರ ಹೊಲದಲ್ಲಿನ ಒಂದು ಶೆಡ್ ನಲ್ಲಿ ಎಪ್ರಿಲ್ ೧೫, ೨೦೨೪ ರಂದು ಪೊಲೀಸರು ವಿಚಾರಣೆ ನಡೆಸಿದಾಗ ಗೋವುಗಳ ಅವಯವ ಕತ್ತರಿಸಿರುವ ಸ್ಥಿತಿಯಲ್ಲಿ ಕಂಡು ಬಂದವು. ಹಾಗೂ ಶೆಡ್ ನಿಂದ ಸ್ವಲ್ಪ ದೂರದಲ್ಲಿ ರಕ್ತದಿಂದ ಕೂಡಿದ ಮಣ್ಣು ಮತ್ತು ಹತ್ತಿರದ ನೀರಿನ ಟ್ಯಾಂಕಿನಲ್ಲಿ ಮಂಜುಗಡ್ಡೆಯಂತಹ ವಸ್ತುಗಳು ಕಂಡು ಬಂದವು. ಆ ಸಮಯದಲ್ಲಿ ಕುರೇಶಿ ಇವನ ವಿರುದ್ಧ ಪಿಂಪಳಗಾವ ಹರೇಶ್ವರ ಪೊಲೀಸ ಠಾಣೆಯಲ್ಲಿ ಮೂಕ ಪ್ರಾಣಿ ಕ್ರೌರ್ಯ ತಡೆ ಕಾಯ್ದೆ ೧೯೬೦ ರ ಅಧಿನಿಯಮ ೧೧, ಮಹಾರಾಷ್ಟ್ರ ಪಶು ಸಂರಕ್ಷಣೆ ಅಧಿನಿಯಮ ೧೯೭೬ ರ ಕಲಂ ೫,೫c, ೯, ೯ಎ ಅಂತರ್ಗತ ಕ್ರ, ೮೩/೨೦೨೪ ರ ಪ್ರಕಾರ ಕಾನೂನು ರೀತಿಯಲ್ಲಿ ದೂರು ದಾಖಲಿಸಿ ಇಲ್ಲಿಯ ಗೋವುಗಳನ್ನು ಒಂದು ಸ್ಥಳೀಯ ಗೋಶಾಲೆಗೆ ಒಪ್ಪಿಸಲಾಗಿತ್ತು.

೧. ಆರೋಪಿ ಅಕ್ಬರ್ ಯುಸುಫ್ ಕುರೇಶಿ ಇವನು ದನಗಳನ್ನು ತನ್ನ ಸ್ವಾಧೀನಕ್ಕೆ ಬೇಕು; ಅದಕ್ಕಾಗಿ ಪಾಚೋರಾ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದನು. ಆ ಸಮಯದಲ್ಲಿ ನ್ಯಾಯಾಲಯದಲ್ಲಿ ಗೋಶಾಲೆಯ ಸಂಚಾಲಕರು ಕೂಡ ಉಪಸ್ಥಿತರಿದ್ದರು. ಅವರು ದನಗಳ ತಮ್ಮ ಗೋಶಾಲೆಯ ಸ್ವಾಧೀನಕ್ಕೆ ನೀಡಬೇಕು ಎಂಬ ಉದ್ದೇಶದಿಂದ ತಮ್ಮ ಪಕ್ಷ ಮಂಡಿಸಿದರು.

೨. ನ್ಯಾಯಾಲಯ ಎರಡು ಪಕ್ಷದ ಯುಕ್ತಿವಾದ ಕೇಳಿ ಗೋಶಾಲೆಗೆ ನೀಡಲಾಗಿರುವ ದನಗಳು ಅಕಬರ ಯುಸುಫ್ ಕುರೇಶಿಯ ಬಳಿ ನೀಡದೇ ಗೋಶಾಲೆಯಲ್ಲಿಯೇ ಶಾಶ್ವತವಾಗಿ ಇರಿಸಿಕೊಳ್ಳುವ ತೀರ್ಪು ನೀಡಿತು. ಹಾಗೂ ‘ಕುರೇಶಿಗೆ ಏಪ್ರಿಲ್ ೧೬, ೨೦೨೪ ರಿಂದ ಜುಲೈ ೨೫, ೨೦೨೪ ವರೆಗೆ ಒಟ್ಟು ೧೨ ಜಾನುವಾರು ಕಾನೂನಿನ ಪ್ರಕಾರ ತಗಲುವ ಸಂಪೂರ್ಣ ವೆಚ್ಚ ಅಂದರೆ ೧ ಲಕ್ಷ ೮೧ ಸಾವಿರದ ೮೦೦ ರೂಪಾಯಿ ೩ ದಿನದ ಒಳಗೆ ಗೋಶಾಲೆಗೆ ನೀಡಬೇಕೆಂದು’, ಮಹತ್ವಪೂರ್ಣತೀರ್ಪು ನೀಡಿದೆ.

೩. ಗೋಶಾಲೆಯ ಕಾರ್ಯವನ್ನು ನಿರ್ವಹಿಸುವ ವಿಶ್ವ ಹಿಂದೂ ಪರಿಷತ್, ಭಜರಂಗದಳದ ಗೋರಕ್ಷಕ ನ್ಯಾಯವಾದಿ ಹೇಮಂತ ಗಣೇಶ ಗುರವ ಇವರು ಈ ತೀರ್ಪನ್ನು ಸ್ವಾಗತಿಸಿದ್ದಾರೆ.