Congress Niranjan Hiremath : ನಮ್ಮ (ಕಾಂಗ್ರೆಸ್) ಪಕ್ಷದ ನಾಯಕರೇ ನನ್ನ ಮಗಳನ್ನು ಕೊಂದಿದ್ದಾರೆ ! – ತಂದೆ ನಿರಂಜನ ಹಿರೇಮಠ ಆರೋಪ

ನೇಹಾ ಹಿರೇಮಠ್ ಕೊಲೆ ಪ್ರಕರಣ

ಹುಬ್ಬಳ್ಳಿ – 18 ಎಪ್ರಿಲ್ 2024ರಂದು ಬಿವಿಬಿ ಕಾಲೇಜಿನ ವಿದ್ಯಾರ್ಥಿನಿ ನೇಹಾ ಹಿರೇಮಠ ಎಂಬ ಯುವತಿ ತನ್ನ ಪ್ರೀತಿಯನ್ನು ನಿರಾಕರಿಸಿದ್ದಾಳೆಂದು ಫೈಯಾಜ್ ಎಂಬಾತನು ಆಕೆಯ ಹತ್ಯೆ ಮಾಡಿದ್ದನು. ‘ರಾಜಕೀಯ ಷಡ್ಯಂತ್ರದಿಂದ ನನ್ನ ಮಗಳನ್ನು ಹತ್ಯೆ ಮಾಡಲಾಗಿದ್ದು, ಶೇಕಡಾ 100ರಷ್ಟು ನಮ್ಮ (ಕಾಂಗ್ರೆಸ್) ಪಕ್ಷದ ನಾಯಕರೇ ಆಕೆಯನ್ನು ಕೊಂದಿದ್ದಾರೆ’ ಎಂದು ನೇಹಾ ಅವರ ತಂದೆ ಹಾಗೂ ಕಾಂಗ್ರೆಸ್ ಕೌನ್ಸಿಲರ್ ನಿರಂಜನ ಹಿರೇಮಠ ಅವರು ಗಂಭೀರ ಆರೋಪ ಮಾಡಿದ್ದಾರೆ. ‘ಈ ಪ್ರಕರಣದಲ್ಲಿ ಕಾಣದ ಕೈಗಳು ಸಂಚು ರೂಪಿಸುತ್ತಿವೆ’ ಎಂದೂ ಅವರು ಹೇಳಿದ್ದಾರೆ. ‘ಈ ಪ್ರಕರಣದಲ್ಲಿ ತ್ವರಿತ ನ್ಯಾಯಾಲಯದ ಅಗತ್ಯವಿಲ್ಲ’, ಎಂದು ಗೃಹ ಸಚಿವ ಪರಮೇಶ್ವರ್ ಅವರ ಹೇಳಿಕೆಗೆ ನಿರಂಜನ ಅವರು ಆಕ್ರೋಶ ವ್ಯಕ್ತಪಡಿಸಿದರು. ಗೃಹ ಸಚಿವರ ಹೇಳಿಕೆ ಕೇಳಿ ನನಗೆ ಆಶ್ಚರ್ಯ ಮತ್ತು ಅಷ್ಟೇ ದುಃಖವಾಯಿತು. ಸರಕಾರದ ಪತ್ರದ ಪ್ರಕಾರ, ಅವರು ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸುವವರಿದ್ದರು. ಮುಖ್ಯಮಂತ್ರಿ, ಕಾನೂನು ಸಚಿವರು ನನ್ನ ಮನೆಗೆ ಬಂದು ಸರಕಾರದ ಪತ್ರ ತೋರಿಸಿದ್ದರು. ನೇಹಾ ಹತ್ಯೆಯಾದ 32 ದಿನಗಳ ನಂತರ ಆಕೆಗೆ ಸಾಂತ್ವನ ಹೇಳಲು ಬಂದ ಗೃಹ ಸಚಿವ ಪರಮೇಶ್ವರ್ ಅವರು ನನಗೆ ನ್ಯಾಯದ ಭರವಸೆ ನೀಡಿದ್ದರು. ಇದೀಗ ತ್ವರಿತ ನ್ಯಾಯಾಲಯದ ಅಗತ್ಯವಿಲ್ಲ ಎಂದು ಯು ಟರ್ನ್ ಮಾಡಿದ್ದಾರೆ. ಇದರಿಂದ ಸಮಾಜಕ್ಕೆ ಏನು ಸಂದೇಶ ನೀಡುವುದಿದೆ ? ಆರೋಪಿಗಳಿಗೆ ಸಹಾಯ ಮಾಡುವುದರಿಂದ ನಿಮಗೇನು ಲಾಭ? ರಾಜ್ಯ ಸರಕಾರ ತನ್ನ ಮಾತಿನಂತೆ ನಡೆದುಕೊಳ್ಳಬೇಕು ಎಂಬುದೇ ನನ್ನ ಬೇಡಿಕೆಯಾಗಿದೆ. ಆರೋಪಿಗಳಿಗೆ ಜಾಮೀನು ನೀಡುವ ಪ್ರಯತ್ನ ನಡೆಯುತ್ತಿದೆ. ಕೊಲೆ ಪ್ರಕರಣದ ಚಾರ್ಜ್ ಶೀಟ್ ನನಗೆ ಇನ್ನೂ ಸಿಕ್ಕಿಲ್ಲ. ಚಾರ್ಜ್ ಶೀಟ್ ತಿದ್ದಿರುವ ಶಂಕೆ ವ್ಯಕ್ತವಾಗಿದೆ. ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮಾತನಾಡುತ್ತೇನೆ ಎಂದು ಹಿರೇಮಠ ಅವರು ಹೇಳಿದರು.

ಸಂಪಾದಕೀಯ ನಿಲುವು

  • ಕಾಂಗ್ರೆಸ್ ಪಕ್ಷದ ಕೌನ್ಸಿಲರ್ ಆಗಿ ನಿರಂಜನ ಹಿರೇಮಠ ಅವರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಅವರ ಈ ಹೇಳಿಕೆಯಿಂದ ರಾಜ್ಯದ ಕಾಂಗ್ರೆಸ್ ಸರ್ಕಾರ ಮುಸ್ಲಿಂ ಆರೋಪಿಯನ್ನು ಬಚಾವ್ ಮಾಡಲು ಎಷ್ಟು ಪ್ರಯತ್ನ ಮಾಡುತ್ತಿದೆ ಎಂಬುದು ತಿಳಿಯುತ್ತದೆ.
  • ಮುಸ್ಲಿಮರ ಓಲೈಕೆಗಾಗಿ ಸ್ವಪಕ್ಷದ ನಾಯಕ ಹಾಗೂ ಕೌನ್ಸಿಲರ್ ಗೆ ನ್ಯಾಯ ನೀಡದ ಕಾಂಗ್ರೆಸ್ ಹಿಂದೂಗಳಿಗೆ ನ್ಯಾಯ ನೀಡಲು ಸಾಧ್ಯವೇ ?