ಬಂಗಾಲದ ಪ್ರತಿಪಕ್ಷದ ನಾಯಕ ಸುವೆಂದೂ ಅಧಿಕಾರಿ ಇವರಿಂದ ಗಂಭೀರ ಆರೋಪ
ಕೋಲಕಾತಾ (ಬಂಗಾಲ) – ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ ಬಂಗಾಲ ವಿಧಾನಸಭೆಯ ಪ್ರತಿಪಕ್ಷದ ನಾಯಕ ಮತ್ತು ಭಾಜಪದ ಶಾಸಕ ಸುವೆಂದೂ ಅಧಿಕಾರಿ ಇವರು ವಿಧಾನಸಭೆಯಲ್ಲಿ, ಕೆಲವು ದಿನಗಳಲ್ಲಿ ೧ ಕೋಟಿ ಹಿಂದೂಗಳು ನಿರಾಶ್ರಿತರಾಗಿ ಬಂಗಾಲ್‌ಗೆ ಬರುವರು. (ಬಾಂಗ್ಲಾದೇಶದಲ್ಲಿ ಈಗ ಒಂದು ಕೋಟಿ ೩೧ ಲಕ್ಷಕ್ಕಿಂತಲೂ ಹೆಚ್ಚಿನ ಹಿಂದೂಗಳು ವಾಸಿಸುತ್ತಿದ್ದಾರೆ.) ಆದ್ದರಿಂದ ನೀವು ಸಿದ್ದರಾಗಿರಬೇಕು ಎಂದು ಹೇಳಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ನರಸಂಹಾರವಾಗುತ್ತಿದೆ. ರಂಗಪುರದ ಕಾರ್ಪೊರೇಟರ್‍ಹರಧನ ನಾಯಕ ಇವರ ಹತ್ಯೆ ಮಾಡಲಾಗಿದೆ. ಸಿರಾಜಗಂಜ ಪೊಲೀಸ್ ಠಾಣೆಯಲ್ಲಿನ ೧೩ ಪೊಲೀಸರ ಹತ್ಯೆ ಮಾಡಲಾಗಿದೆ. ಇದರಲ್ಲಿನ ೯ ಹಿಂದೂಗಳಾಗಿದ್ದರು. ನೋವಾಖಲಿಯಲ್ಲಿ ಹಿಂದೂಗಳ ಮನೆಗಳನ್ನು ಸುಡಲಾಗಿದೆ. ನಾನು ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ರಾಜ್ಯಪಾಲ ಇವರಿಗೆ ಈ ಪ್ರಕರಣದ ಕುರಿತು ಭಾರತ ಸರಕಾರದೊಂದಿಗೆ ತಕ್ಷಣ ಮಾತಾಡಲು ಹೇಳುವೆನು ಎಂದು ಹೇಳಿದರು.
ಬಾಂಗ್ಲಾದೇಶ ಜಮಾತ್-ಎ-ಇಸ್ಲಾಮಿ ಮತ್ತು ಕಟ್ಟರವಾದಿಗಳ ಕೈ ಸೇರುವುದು !
ಪೌರತ್ವ ತಿದ್ದುಪಡಿ ಕಾನೂನು (ಸಿ.ಎ.ಎ.ಯ) ಸಂದರ್ಭ ನೀಡುತ್ತಾ ಸುವೆಂದೂ ಅಧಿಕಾರಿ ಇವರು, ಸಿಎಎಯಲ್ಲಿ, ಧಾರ್ಮಿಕ ಕಿರುಕುಳದಿಂದ ಯಾರಿಗಾದರೂ ಹೊಡೆದರೆ ನಮ್ಮ ದೇಶ ಹಸ್ತಕ್ಷೇಪ ಮಾಡಿ ಈ ಪ್ರಕರಣದಲ್ಲಿ ಗಮನ ಹರಿಸಬೇಕು ಎಂಬುದು ಸ್ಪಷ್ಟವಾಗಿ ಹೇಳಲಾಗಿದೆ, ಎಂದು ಹೇಳಿದರು. ನಾನು ಹೇಳುವುದೇನೆಂದರೆ, ಈ ಪರಿಸ್ಥಿತಿ ಏನಾದರೂ ಮೂರು ದಿನದಲ್ಲಿ ಹಿಡಿತಕ್ಕೆ ಬರಲಿಲ್ಲ ಎಂದರೆ, ಆಗ ಬಾಂಗ್ಲಾದೇಶ ಜಮಾತ್-ಎ-ಇಸ್ಲಾಮಿ ಮತ್ತು ಕಟ್ಟರವಾದಿಗಳ ಕೈ ಸೇರುವುದು ಎಂದು ಹೇಳಿದರು.
ಸಂಪಾದಕೀಯ ನಿಲುವುಬಾಂಗ್ಲಾದೇಶದಲ್ಲಿ ಕಳೆದ ೫೩ ವರ್ಷಗಳಿಂದ ಹಿಂದೂಗಳ ನರಸಂಹಾರ ನಡೆಯುತ್ತಿರುವುದರಿಂದ ಅಲ್ಲಿ ೧೯೪೭ ರಲ್ಲಿ ಶೇಕಡ ೨೮ ಇರುವ ಹಿಂದೂಗಳು ಈಗ ಕೇವಲ ಶೇಕಡಾ ೯ ರಷ್ಟು ಉಳಿದಿದ್ದಾರೆ. ಭಾರತದ ನಿಷ್ಕ್ರಿಯತೆಯಿಂದ ಇದು ಕೂಡ ಕೆಲವೇ ವರ್ಷಗಳಲ್ಲಿ ನಾಶವಾಗುವಂತಹ ಪರಿಸ್ಥಿತಿ ಇದೆ ! |