ಆಗಸ್ಟ್ ೧೧ ರಂದು ಕ್ರಾಂತಿಕಾರಿ ಖುದಿರಾಮ ಬೋಸ್ ಇವರ ಬಲಿದಾನದಿನವಿದೆ. ಆ ನಿಮಿತ್ತ ಅವರಿಗೆ ಸವಿನಯ ವಂದನೆಗಳು !
ಕ್ರಾಂತಿಕಾರಿ ಖುದಿರಾಮ ಬೋಸ್ ಇವರಿಗೆ ಆಂಗ್ಲ ನ್ಯಾಯಾಧೀಶರು, ”ನೀನು ಬಾಂಬ್ ತಯಾರಿಸಿ ಬ್ರಿಟಿಷ್ ಅಧಿಕಾರಿಯ ಹತ್ಯೆ ಮಾಡಿದ್ದೀಯಾ; ಆದ್ದರಿಂದ ಇಂದು ನಿನಗೆ ಮರಣದಂಡನೆ ವಿಧಿಸಲಾಗಿದೆ” ಎಂದು ಹೇಳುತ್ತಾರೆ. ಈ ನಿರ್ಧಾರವನ್ನು ಕೇಳುತ್ತಿರುವಾಗಲೂ ಖುದಿರಾಮ ಇವರ ಮುಖದ ಮೇಲೆ ನಗು ಇತ್ತು. ಆಗ ಅವರಿಗೆ ‘ಬಹುಶಃ ಅವನಿಗೆ ಸರಿಯಾಗಿ ಕೇಳಿಸಿರಲಿಕ್ಕಿಲ್ಲ’ ಎಂದೆನಿಸಿತು. ಅವರು ಪುನಃ, ”ಖುದಿರಾಮ ಬೋಸ್, ಕೇಳಿದಿಯಾ ? ನಿನ್ನನ್ನು ಗಲ್ಲಿಗೇರಿಸಲಾಗುವುದು” ಎಂದು ಹೇಳಿದರು.
ಭಾರತಮಾತೆಯ ಆ ಸುಪುತ್ರನು (ಖುದಿರಾಮ ಬೋಸ್) ಇನ್ನೂ ಜೋರಾಗಿ ನಗುತ್ತ, ”ಈ ಬಟ್ಟೆಗಳನ್ನು ಬದಲಾಯಿಸುವ ಶಿಕ್ಷೆಯನ್ನೇ ಕೊಟ್ಟಿದ್ದೀರಿ ! ಇಂತಹ ಎಷ್ಟೋ ದೇಹಗಳು ನನಗೆ ದೊರಕಿವೆ ಮತ್ತು ಅವುಗಳನ್ನು ನಾನು ತ್ಯಜಿಸಿದ್ದೇನೆ” ಎಂದು ಹೇಳಿದನು.
ನ್ಯಾಯಾಧೀಶರು ಅವನ ಕಡೆಗೆ ನೋಡತೊಡಗಿದರು, ”ನಿನಗೆ ಏನಾದರೂ ಹೇಳಲಿಕ್ಕಿದೆಯೇ ?” ಎಂದು ಕೇಳಿದರು. ಖುದಿರಾಮ ಬೋಸ್ ಇವರು ನಗುತ್ತ, ”ಹೌದು, ನೀವು ಒಂದು ವೇಳೆ ನನಗೆ ಅನುಮತಿ ನೀಡಿದರೆ, ನಾನು ಆ ಬಾಂಬ್ ಅನ್ನು ಹೇಗೆ ತಯಾರಿಸಿದೆ ? ಎಂದು ಇಲ್ಲಿ ಬಹಿರಂಗವಾಗಿ ಹೇಳುತ್ತೇನೆ” ಎಂದು ಹೇಳಿದರು.
ಬಲಿದಾನ ಮಾಡುವವರಲ್ಲಿ ನಿರ್ಭಯತೆ ಹೇಗಿತ್ತು, ಎಂತಹ ಬುದ್ಧಿವಂತಿಕೆ ಇತ್ತು ! ಬ್ರಿಟಿಷ್ ಸರಕಾರವು, ‘ಇವರನ್ನು (ದೇಶಭಕ್ತರನ್ನು) ಇನ್ನೂ ವೇಗವಾಗಿ ನಿಯಂತ್ರಣದಲ್ಲಿಡಿ. ಭಾರತೀಯರನ್ನು ಇನ್ನಷ್ಟು ವೇಗವಾಗಿ ನಿಗ್ರಹಿಸಿ, ಇದರಿಂದ ಅವರು ಸ್ವಾತಂತ್ರ್ಯದ ವಿಷಯವನ್ನೇ ಮರೆಯುವಂತೆ ಮಾಡಬೇಕು. ಅಂತಹವರಿಗೆ ನೇಣು ಹಾಕುತ್ತಲೇ ಇರಬೇಕು.’ ಎಂಬ ಸೂಚನೆಯನ್ನು ಕಳುಹಿಸಿತು.
(ಆಧಾರ : ಮಾಸಿಕ ‘ಋಷಿ ಪ್ರಸಾದ’, ಜುಲೈ ೨೦೧೭)