ನವ ದೆಹಲಿ – ಜನರು ನ್ಯಾಯಾಲಯದ ಮೊಕದ್ದಮೆಗೆ ಎಷ್ಟೊಂದು ಬೇಸತ್ತಿದ್ದಾರೆ ಎಂದರೆ, ಅವರಿಗೆ ಕೇವಲ ತೀರ್ಪು ಬೇಕಾಗಿರುತ್ತದೆ. ನ್ಯಾಯಾಲಯದ ಪ್ರಕ್ರಿಯೆ ಇದು ಶಿಕ್ಷೆ ಇದ್ದಂತೆಯಾಗಿದೆ. ಇದನ್ನು ನ್ಯಾಯಾಧೀಶ ಎಂದು ನಮ್ಮೆಲ್ಲರಿಗಾಗಿ ಕಳವಳಕಾರಿಯಾಗಿದೆ. ನಾವು ಬರಿ ಪರಿಹಾರ ಹೇಳುವುದಿಲ್ಲ, ಬದಲಾಗಿ ಒಳ್ಳೆಯ ತೀರ್ಪು ನಿಮಗೆ ನೀಡುವೆವು ಎಂದು ನ್ಯಾಯಮೂರ್ತಿ ಧನಂಜಯ ಚಂದ್ರಚೂಡ ಇವರು ಹೇಳಿದರು. ಅವರು ಸರ್ವೋಚ್ಚ ನ್ಯಾಯಾಲಯದ ‘ವಿಶೇಷ ಲೋಕ ಅದಾಲತ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮಕ್ಕೆ ಕಾನೂನು ಸಚಿವ ಅರ್ಜುನ ರಾಮ ಮೇಘವಾಲ ಕೂಡ ಉಪಸ್ಥಿತರಿದ್ದರು. ಸರ್ವೋಚ್ಚ ನ್ಯಾಯಾಲಯದ ಸ್ಥಾಪನೆಗೆ ೭೫ ವರ್ಷ ಪೂರ್ಣ ಆಗಿರುವ ಪ್ರಯುಕ್ತ ಜುಲೈ ೨೯ ರಿಂದ ಆಗಸ್ಟ್ ೩ ವರೆಗಿನ ಸಮಯದಲ್ಲಿ ವಿಶೇಷ ಲೋಕ ಅದಾಲತದ ಆಯೋಜನೆ ಮಾಡಲಾಗಿತ್ತು.
The long-drawn judicial process becomes a punishment for people – CJI Chandrachud
To change this situation, the court itself needs to take the initiative; otherwise, in the future, people might avoid approaching the court.
Image credit : @barandbench pic.twitter.com/D8Uynl1s2N
— Sanatan Prabhat (@SanatanPrabhat) August 4, 2024
ಲೋಕ ಅದಾಲತ ಇದು ಒಂದು ಬಾಕಿ ಇರುವ ನ್ಯಾಯಯುತ ಪ್ರಕರಣಗಳು ಅಥವಾ ಮೊಕದ್ದಮೆ ಪರಸ್ಪರ ಸಾಮರಸ್ಯದಿಂದ ಪರಿಹರಿಸಬಹುದು ವೇದಿಕೆಯಾಗಿದೆ. ಲೋಕಅದಾಲತದ ತೀರ್ಪಿನ ಕುರಿತು ಯಾವುದೇ ನ್ಯಾಯಾಲಯಕ್ಕೆ ಮೊರೆ ಹೋಗಲಾಗುವುದಿಲ್ಲ.
ನ್ಯಾಯಮೂರ್ತಿ ಚಂದ್ರಚೂಡ ಇವರು ಮಾತು ಮುಂದುವರೆಸುತ್ತಾ,
೧. ಬಾಬಾಸಾಹೇಬ್ ಅಂಬೇಡ್ಕರ್ ಅಂತಹ ದಿಗ್ಗಜರು ಸಂವಿಧಾನವನ್ನು ನಿರ್ಮಿಸಿದರು. ಆಗ ಅವರು ಒಂದು ದ್ಯೇಯದಿಂದ ಮಾಡಿದ್ದರು. ಭಾರತದ ಸರ್ವೋಚ್ಚ ನ್ಯಾಯಾಲಯಕ್ಕೆ ೧೮೦ ಸಂವಿಧಾನಿಕ ಪ್ರಕರಣಗಳನ್ನು ಪರಿಶೀಲಿಸುವ ಅಮೇರಿಕ ಸರ್ವೋಚ್ಚ ನ್ಯಾಯಾಲಯ ರೂಪಿಸುವ ಕಲ್ಪನೆ ಅವರದಾಗಿರಲಿಲ್ಲ, ಬದಲಾಗಿ ‘ನ್ಯಾಯ ಎಲ್ಲರ ಮನೆ ಬಾಗಿಲಿಗೆ’ ಇದು ಅದರ ಹಿಂದಿನ ಯೋಚನೆ ಆಗಿತ್ತು. ಯಾರಿಗೆ ನ್ಯಾಯ ದೊರೆಯುತ್ತಿರಲಿಲ್ಲ, ಅಂತಹ ಬಡ ಸಮಾಜಕ್ಕಾಗಿ ನ್ಯಾಯಾಲಯ ಕಟ್ಟಲಾಗುತ್ತಿತ್ತು.
೨. ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಒಂದು ಉನ್ನತ ಸ್ಥಾನದಲ್ಲಿ ಕುಳಿತುಕೊಳ್ಳುತ್ತಾರೆ. ನಮ್ಮ ಎದುರು ನ್ಯಾಯವಾದಿಗಳು ಕುಳಿತಿರುತ್ತಾರೆ. ಉಚ್ಚ ನ್ಯಾಯಾಲಯ ಅಥವಾ ಜಿಲ್ಲಾ ನ್ಯಾಯಾಲಯ ಇಲ್ಲಿ ಹೇಗೆ ನಾವು ಅರ್ಜಿದಾರರೆಂದು ಗುರುತಿಸುತ್ತೇವೆ, ಹಾಗೆ ಸರ್ವೋಚ್ಚ ನ್ಯಾಯಾಲಯದಲ್ಲಿನ ನ್ಯಾಯಾಧೀಶರು ಗುರುತಿಸುವುದಿಲ್ಲ. ಯಾವ ಜನರಿಗೆ ನಾವು ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯ ನೀಡುತ್ತೇವೆ, ಆ ಜನರು ನಮಗೆ ಅದೃಶ್ಯ ಇರುತ್ತಾರೆ. ಇದು ನಮ್ಮ ಕಾರ್ಯದಲ್ಲಿನ ಎಲ್ಲಕ್ಕಿಂತ ದೊಡ್ಡ ಕೊರತೆಯಾಗಿದೆ.
೩. ಭಾರತ ಸರಕಾರದ ಓರ್ವ ಹಿರಿಯ ಸಚಿವರು ಮತ್ತು ಮಾಜಿ ನಗರಸೇವಕರು ನನಗೆ, ಸರ್ವೋಚ್ಚ ನ್ಯಾಯಾಲಯದಲ್ಲಿ ಚಿಕ್ಕ ಪ್ರಕರಣಗಳ ವಿಚಾರಣೆ ಕೂಡ ನಡೆಯುತ್ತದೆ, ಆದರೆ ಅದು ಅವರಿಗೆ ತಿಳಿದಿರಲಿಲ್ಲ; ಕಾರಣ ಸರ್ವೋಚ್ಚ ನ್ಯಾಯಾಲಯದಲ್ಲಿ ಎಲ್ಲ ದೊಡ್ಡ ಮೊಕದ್ದಮೆ ತೀರ್ಪು ಹೊರಬರುವುದನ್ನು ನೋಡುವುದು ನಮಗೆ ಅಭ್ಯಾಸವಾಗಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಈ ಪರಿಸ್ಥಿತಿ ಬದಲಾಯಿಸುವುದಕ್ಕೆ ನ್ಯಾಯಾಲಯವೇ ನೇತೃತ್ವ ವಹಿಸುವ ಆವಶ್ಯಕತೆ ಇದೆ, ಇಲ್ಲವಾದರೆ ಭವಿಷ್ಯದಲ್ಲಿ ಜನರು ನ್ಯಾಯಾಲಯದ ಮೆಟ್ಟಿಲು ಹತ್ತುವುದನ್ನೇ ತಪ್ಪಿಸುವರು ! |