Karnataka PSI Death Case : ಪೊಲೀಸ ಅಧಿಕಾರಿಯ ಅಸಹಜ ಸಾವಿಗೆ ಕಾಂಗ್ರೆಸ್ಸಿನ ಶಾಸಕ ಹೊಣೆ ಎಂದು ದೂರು ದಾಖಲು !

  • ಯಾದಗಿರಿಯ ಘಟನೆ

  • ಅಧಿಕಾರಿಯ ಪತ್ನಿಯಿಂದ ಗಂಭೀರ ಆರೋಪ : ಶಾಸಕರು ಪತಿಯ ಬಳಿ ೩೦ ಲಕ್ಷ ರೂಪಾಯ ಬೇಡಿಕೆಯನ್ನು ಇಟ್ಟಿದ್ದರು, ಈ ಒತ್ತಡದಿಂದ ಅವರಿಗೆ ಹೃದಯಘಾತ !

ಹೃದಯಘಾತದಿಂದ ಸಾವನ್ನಪ್ಪಿದ ಪೊಲೀಸ ಅಧಿಕಾರಿ ಪರಶುರಾಮ

ಯಾದಗಿರಿ – ಇಲ್ಲಿಯ ಪೊಲೀಸ ಅಧಿಕಾರಿ ಪರಶುರಾಮ ಇವರು ಇತ್ತೀಚಿಗೆ ಹೃದಯಘಾತದಿಂದ ಸಾವನ್ನಪ್ಪಿದರು. ಅವರ ಸಾವಿನ ಹಿಂದೆ ಶಾಸಕ ಚೆನ್ನರೆಡ್ಡಿ ಪಾಟೀಲ್ ಮತ್ತು ಅವರ ಪುತ್ರ ಸನ್ನಿ ರೆಡ್ಡಿ ಇವರ ಕೈವಾಡವಿದೆ ಎಂದು ಮೃತಪಟ್ಟ ಪೊಲೀಸರ ಪತ್ನಿ ದೂರು ದಾಖಲಿಸಿದ್ದರು. ಆದರಿಂದ ಶಾಸಕ ಮತ್ತು ಅವರ ಪುತ್ರ ಇವರ ವಿರುದ್ಧ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

೧. ಅಧಿಕಾರಿ ಪರಶುರಾಮ ಇವರ ಪತ್ನಿ ಶ್ವೇತ ಇವರು, ಶಾಸಕ ಮತ್ತು ಅವರ ಪುತ್ರನ ಸತತ ಒತ್ತಡದಿಂದ ನನ್ನ ಗಂಡ ಮಾನಸಿಕ ಖಿನ್ನತೆಗೆ ಬಲಿಯಾಗಿದ್ದರು. ಹಾಗೂ ಅವರನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿತ್ತು. ‘ನನಗೆ ಅನ್ಯಾಯ ಆಗಿದೆ, ಶಾಸಕ ಮತ್ತು ಅವರ ಪುತ್ರ ಪೊಲೀಸ ಠಾಣೆಯಲ್ಲಿ ನನಗೆ ಕಾಯಂ ಇರಿಸಲು ೩೦ ಲಕ್ಷ ರೂಪಾಯ ಕೇಳಿದ್ದರು. ನನ್ನಬಳಿ ಹಣ ಇಲ್ಲದ್ದರಿಂದ ನನ್ನನ್ನು ವರ್ಗಾವಣೆ ಮಾಡಿದರು’, ಎಂದು ನನ್ನ ಪತಿ ನನಗೆ ಹೇಳಿದ್ದರು, ಎಂದು ಪತ್ನಿ ಶ್ವೇತಾ ಇವರು ದೂರಿನಲ್ಲಿ ಆರೋಪಿಸಿದ್ದಾರೆ.

೨. ಇಂತಹದರಲ್ಲಿ ಪರಶುರಾಮ ಇವರ ಸಾವಿನ ಪ್ರಕರಣ ಅಪರಾಧಿ ತನಿಖಾ ಇಲಾಖೆಗೆ ಹಸ್ತಾಂತರಿಸಲು ರಾಜ್ಯ ಸರಕಾರವು ಆದೇಶ ನೀಡಿದೆ. ಪ್ರಕರಣದ ವಿಸ್ತೃತ ತನಿಖೆ ಮಾಡುವುದಕ್ಕಾಗಿ ಗೃಹ ಸಚಿವಾಲಯವು ಪೋಲಿಸ ಮಹಾಸಂಚಾಲಕರಿಗೆ ಪತ್ರ ಬರೆದು ಸಮೀಕ್ಷೆ ನಡೆಸುವ ಆದೇಶ ನೀಡಿದ್ದಾರೆ.

ಚೆನ್ನಾರೆಡ್ಡಿ ಪಾಟೀಲ್ ಇವರು ತಕ್ಷಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ! – ಭಾಜಪ

ಭಾಜಪದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಇವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡುತ್ತಾ, ಒಬ್ಬ ದಲಿತನ ವರ್ಗಾವಣೆಗಾಗಿ ಒತ್ತಡ ಹೇರಿರುವ ಕುರಿತು ಚೆನ್ನಾರೆಡ್ಡಿ ಇವರ ವಿರುದ್ಧ ದಲಿತ ದೌರ್ಜನ್ಯ ಕಾನೂನಿನ ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿದ್ದಾರೆ. ಇಂತಹ ಶಾಸಕರು ಓರ್ವ ಅಧಿಕಾರಿಯ ಸಾವಿಗೆ ಪರೋಕ್ಷವಾಗಿ ಕಾರಣರಾಗಿದ್ದಾರೆ ಚೆನ್ನಾರೆಡ್ಡಿ ಇವರು ತಕ್ಷಣ ನೈತಿಕ ಹೊಣೆ ಹೊತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಹೇಳಿದ್ದಾರೆ.