‘ಮಾನವನ ಮಟ್ಟ’ಕ್ಕನುಸಾರ ಸಾಧನೆ ಕಲಿಸುವ ‘ಗುರುಕೃಪಾಯೋಗ’ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಮಾನವನ ಮಟ್ಟ’ವು ಸಾಮಾನ್ಯವಾಗಿ ಮನುಷ್ಯನ ಸ್ಥಿತಿಯನ್ನು ತೋರಿಸುವ ಅಳತೆಯಾಗಿದೆ. ಈ ಮಟ್ಟವನ್ನು ವಿವಿಧ ಆಧ್ಯಾತ್ಮಿಕ ಮತ್ತು ಮಾನಸಿಕ ಘಟಕಗಳ ಆಧಾರದಿಂದ ಅಧ್ಯಯನ ಮಾಡಬಹುದು.

೧. ಆಧ್ಯಾತ್ಮಿಕ

ಅಹಂನ ಪ್ರಮಾಣ, ಈಶ್ವರನ ಬಗೆಗಿನ ಭಾವ, ಆಧ್ಯಾತ್ಮಿಕ ಮಟ್ಟ ಮತ್ತು ಕೆಟ್ಟ ಶಕ್ತಿಗಳ ತೊಂದರೆಯ ತೀವ್ರತೆ

೨. ಮಾನಸಿಕ

ಸ್ವಭಾವದಲ್ಲಿನ ಗುಣ ಮತ್ತು ದೋಷ ಹಿಂದಿನ ಕಾಲದಲ್ಲಿ ಮಾನವನ ಮಟ್ಟವು ಉತ್ತಮವಾಗಿರುವುದರಿಂದ ಆ ಕಾಲದಲ್ಲಿ ಜ್ಞಾನಯೋಗ, ಹಠಯೋಗ, ಭಕ್ತಿಯೋಗ ಇಂತಹ ಸಾಧನಾಮಾರ್ಗಗಳಿಗನುಸಾರ ಸಾಧನೆ ಮಾಡಲು ಸಹಜವಾಗಿ ಸಾಧ್ಯವಾಗುತ್ತಿತ್ತು. ಈಗ ಕಲಿಯುಗದಲ್ಲಿ ಮಾನವನ ಮಟ್ಟವು ವೇಗವಾಗಿ ಕುಸಿಯುತ್ತಾ ಹೋಗುತ್ತಿದೆ. ಆದ್ದರಿಂದ ಸದ್ಯದ ಕಾಲದಲ್ಲಿ ಈ ಸಾಧನಾಮಾರ್ಗಗಳಿಗನುಸಾರ ಸಾಧನೆಯನ್ನು ಮಾಡಿದರೆ ಪ್ರಗತಿಯಾಗಲು ಹೆಚ್ಚು ಕಾಲಾವಧಿ ಬೇಕಾಗುತ್ತದೆ. ‘ಗುರುಕೃಪಾಯೋಗ’ ಎಂಬ ಸಾಧನೆ ಮಾರ್ಗದಲ್ಲಿ ಕಲಿಯುಗದ ‘ಮಾನವನ ಮಟ್ಟ’ಕ್ಕೆ ಸಂಬಂಧಿತ ಎಲ್ಲ ಅಂಶಗಳಿಗೆ ನಿಖರವಾದ ಪರಿಹಾರಗಳನ್ನು ನೀಡಲಾಗಿದೆ. ಆದ್ದರಿಂದ ಸದ್ಯದ ಕಾಲದಲ್ಲಿ ‘ಗುರುಕೃಪಾಯೋಗ’ಕ್ಕನುಸಾರ ಸಾಧನೆ ಮಾಡಿದರೆ ಸಾಧಕರ ಆಧ್ಯಾತ್ಮಿಕ ಪ್ರಗತಿಯು ಶೀಘ್ರಗತಿಯಿಂದಾಗುತ್ತಿದೆ.

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ