ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಮತ್ತು ವಕ್ಫ್ ಬೋರ್ಡ್ ಸಮಸ್ಯೆಗಳ ವಿರುದ್ಧ ಪ್ರತಿಭಟನೆ
ಮುಂಬಯಿ – ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಮತ್ತು ವಕ್ಫ್ ಬೋರ್ಡ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಲು ಬಿಜೆಪಿ ಆಕ್ರಮಣಕಾರಿ ನೀತಿಯನ್ನು ಅನುಸರಿಸಲಿದೆ. ನಾವು ಸಂಬಂಧಿಸಿದ ಸ್ಥಳಗಳಲ್ಲಿ ಸ್ಥಳೀಯ ಹಿಂದುತ್ವ ಸಂಘಟನೆಗಳ ನೆರವಿನೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದೇವೆ. ಬಿಜೆಪಿಯೊಂದಿಗಿರುವ ಸಕಲ ಹಿಂದೂ ಸಮಾಜವು ಆಗಸ್ಟ್ 4 ರಂದು ಕರಮಾಳಾ (ಸೋಲಾಪುರ) ಮತ್ತು ಆಗಸ್ಟ್ 14 ರಂದು ಅಮರಾವತಿಯಲ್ಲಿ ಹಿಂದೂ ಜನಾಕ್ರೋಶ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಲಿದೆ. ಈ ಎರಡು ಕ್ಷೇತ್ರಗಳ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿತ್ತು. 2022 ರಲ್ಲಿ, ಮೊದಲ ಬಾರಿಗೆ, ರಾಜ್ಯದಲ್ಲಿ ಹಿಂದೂ ಜನಾಕ್ರೋಶ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಲಾಗಿತ್ತು. 2023 ರಲ್ಲಿ ರಾಜ್ಯದಲ್ಲಿ 24ಕ್ಕೂ ಹೆಚ್ಚು ಇಂತಹ ಮೆರವಣಿಗೆಗಳನ್ನು ನಡೆಸಲಾಯಿತು. ವಿಶ್ವ ಹಿಂದೂ ಪರಿಷತ್ ಮತ್ತು ಸನಾತನ ಸಂಸ್ಥೆ ಈ ಮೆರವಣಿಗೆಗಳನ್ನು ಆಯೋಜಿಸಿತ್ತು ಎಂದು ಬಿಜೆಪಿ ಶಾಸಕ ನಿತೇಶ್ ರಾಣೆ ಮಾಹಿತಿ ನೀಡಿದ್ದಾರೆ. ಈ ಮೆರವಣಿಗೆಗಳ ನೇತೃತ್ವವನ್ನು ಯಾವುದೇ ನಾಯಕರು, ಪಕ್ಷ ಅಥವಾ ಸಂಘಟನೆಯ ವಹಿಸುವುದಿಲ್ಲ. ‘ತಮ್ಮ ಧರ್ಮಕ್ಕಾಗಿ ಹೋರಾಡಲು ಬಯಸುವ ಹಿಂದೂಗಳು’ ಮಾತ್ರ ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳುವರು ಎಂದು ಅವರು ವಿವರಿಸಿದರು.
The Hindu Jan Akrosh Morcha to commence from the first week of August. – MLA, @NiteshNRane, BJP.
▫️The rally will deal with and spread awareness on topics related to Love J!h@d, Land J!h@d and W@qf Board.
👉 It is unfortunate that when Shiv Sena and BJP is in power, the Hindus… pic.twitter.com/Oe4wQqfWff
— Sanatan Prabhat (@SanatanPrabhat) August 1, 2024
ಸಂಪಾದಕೀಯ ನಿಲುವುರಾಜ್ಯದಲ್ಲಿ ಶಿವಸೇನೆ ಮತ್ತು ಬಿಜೆಪಿ ಸರಕಾರವಿದ್ದಾಗ ಹಿಂದೂಗಳಿಗೆ ಇಂತಹ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸುವ ಪರಿಸ್ಥಿತಿ ಬರಬಾರದು. ಸರಕಾರವೇ ಕಠಿಣ ಕ್ರಮ ಮತ್ತು ಕಠೋರ ಕಾನೂನು ಮಾಡಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ. |