ಮುಖ್ಯಮಂತ್ರಿ ಕೆಜರಿವಾಲ ನಿವಾಸದಲ್ಲಿ ಇಂತಹ ಗೂಂಡಾಗಳಿಗೆ ಏನು ಕೆಲಸ ? – ಸರ್ವೋಚ್ಚ ನ್ಯಾಯಾಲಯ

ಸಂಸದೆ ಸ್ವಾತಿ ಮಲಿವಾಲ್ ಅವರನ್ನು ಥಳಿಸಿದ ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿಗೆ ಸರ್ವೋಚ್ಚ ನ್ಯಾಯಾಲಯದಿಂದ ಛೀಮಾರಿ !

ನವ ದೆಹಲಿ – ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಅವರ ಸರಕಾರಿ ಬಂಗಲೆಯಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ ಅವರ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರಿಗೆ ಸರ್ವೋಚ್ಚ ನ್ಯಾಯಾಲಯ ಛೀಮಾರಿ ಹಾಕಿದೆ. ಸರ್ವೋಚ್ಚ ನ್ಯಾಯಾಲಯವು, ‘ಆತ (ಬಿಭವ ಕುಮಾರ) ಮುಖ್ಯಮಂತ್ರಿಯವರ ಸರಕಾರಿ ನಿವಾಸಕ್ಕೆ ಗೂಂಡಾದಂತೆ ನುಗ್ಗಿದ ರೀತಿಯಲ್ಲಿ ವರ್ತಿಸಿದ್ದಾನೆ.’ ನ್ಯಾಯಾಲಯವು ಬಿಭವ ಕುಮಾರ್ ಇವರ ನ್ಯಾಯವಾದಿಗಳಿಗೆ, ‘ಮುಖ್ಯಮಂತ್ರಿ ನಿವಾಸ ಖಾಸಗಿ ಬಂಗಲೆಯಾಗಿದೆಯೇ ?’ ಇಂತಹ ಗೂಂಡಾಗಳು ಮುಖ್ಯಮಂತ್ರಿ ನಿವಾಸದಲ್ಲಿ ಕೆಲಸ ಮಾಡಬೇಕೇ ?’ ಎಂದು ಕೇಳಿದರು.

ನ್ಯಾಯಾಲಯವು,

1. ಕೊಲೆಗಾರರು ಮತ್ತು ದರೋಡೆಕೋರರಿಗೆ ಜಾಮೀನು ಸಿಗಬಹುದು; ಆದರೆ ಮಲಿವಾಲ್ ಪ್ರಕರಣದಲ್ಲಿ ಬಿಭವ್ ಕುಮಾರ್ ವಿರುದ್ಧದ ಆರೋಪಗಳನ್ನು ನಾವು ಬಹಿರಂಗವಾಗಿ ಓದಲು ಬಯಸುವುದಿಲ್ಲ. ಮಲಿವಾಲ ಇವರು ಬಿಭವ್‌ಗೆ ತನ್ನ ದೈಹಿಕ ತೊಂದರೆಯಿಂದಾಗಿ ‘ಹೊಡೆಯದಿರಿ’, ಎಂದು ಮನವಿ ಮಾಡಿದ್ದರು ಆದರೂ ಆ ವ್ಯಕ್ತಿ ನಿಲ್ಲಿಸಲಿಲ್ಲ. ಅವನು ಏನು ಯೋಚಿಸುತ್ತಿದ್ದನು, ಅವನು ತನ್ನಮೇಲಿನ ಹತೋಟಿ ಕಳೆದುಕೊಂಡಿದ್ದಾನೆಯೇ ?

2. ಮಲಿವಾಲ್ ನೀಡಿದ ದೂರಿನ ಮೇರೆಗೆ ಬಿಭವ್ ಕುಮಾರ್ ನನ್ನು ಬಂಧಿಸಲಾಗಿದೆ. ಕೆಳಹಂತ, ಸೆಷನ್ಸ್ (ಸತ್ರ) ಮತ್ತು ನ್ಯಾಯಾಲಯಗಳು ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ಅವನು ಸರ್ವೋಚ್ಚ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾನೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ.

ಸಂಪಾದಕೀಯ ನಿಲುವು

ಸರ್ವೋಚ್ಚ ನ್ಯಾಯಾಲಯದ ಈ ಛೀಮಾರಿಯಿಂದ ಆಮ್ ಆದ್ಮಿ ಪಕ್ಷದ ಅರ್ಹತೆ ಬಯಲಾಗಿದೆ !