ರಸ್ತೆಯಲ್ಲಿ ರಾಶಿ ಮೊಳೆಗಳನ್ನು ಎಸೆದು ಟೈರ್‌ಗಳನ್ನು ಪಂಕ್ಚರ್ ಮಾಡಿ ವ್ಯಾಪಾರ ಹೆಚ್ಚಿಸುವ ಪ್ರಯತ್ನವನ್ನು ವಿಫಲಗೊಳಿಸಿದ ಟ್ರಾಫಿಕ್ ಪೊಲೀಸ್ !

ಬೆಂಗಳೂರಿನಲ್ಲಿ ನಡೆದ ಘಟನೆ

ಬೆಂಗಳೂರು – ರಸ್ತೆಯ ಮಧ್ಯದಲ್ಲಿ ಮೊಳೆಗಳನ್ನು ಎಸೆದು ವಾಹನಗಳ ಟೈರ್‌ಗಳನ್ನು ಪಂಕ್ಚರ್ ಮಾಡಲಾಗುತ್ತದೆ ಎಂಬ ವದಂತಿ ಈಗಾಗಲೇ ಇತ್ತು. ಇದೀಗ ಬೆಂಗಳೂರು ನಗರದ ಜಾಲಹಳ್ಳಿಯ ಕುವೆಂಪು ವೃತ್ತದ ಸುರಂಗಮಾರ್ಗದಲ್ಲಿ ಒಂದೇ ಕಡೆ ರಾಶಿ ಮೊಳೆಗಳು ಪತ್ತೆಯಾಗಿದ್ದು, ಸ್ವತಃ ಟ್ರಾಫಿಕ್ ಪೊಲೀಸ್ ನವರೇ ಈ ಮೊಳೆಗಳನ್ನು ತೆಗೆದು ಸ್ವಚ್ಛಗೊಳಿಸುವ ಅಭಿಯಾನ ನಡೆಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಸ್ಥಳಗಳಲ್ಲಿ ಇನ್ನೂ ಮೊಳೆಗಳು ಇರಬಹುದು; ಹೀಗಾಗಿ ಜನರು ಜಾಗೃತರಾಗಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ. ಅಲ್ಲದೆ, ಸಮೀಪದ ಪಂಕ್ಚರ್ ತೆಗೆಯುವ ಕಾರ್ಮಿಕರು ಹೆಚ್ಚಿನ ವ್ಯಾಪಾರವನ್ನು ಸೃಷ್ಟಿಸಲು ಮೊಳೆಗಳನ್ನು ಎಸೆದಿರುವ ಸಾಧ್ಯತೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಪಂಕ್ಚರ್ ಕೆಲಸ ಯಾರು ಮಾಡುತ್ತಾರೆ ಎಂಬುದು ದೇಶದ ಜನತೆಗೆ ಗೊತ್ತಿರುವುದರಿಂದ ಈಗ ಅದನ್ನು ‘ಪಂಕ್ಚರ್ ಜಿಹಾದ್’ ಎನ್ನಬೇಕೆ ?